
ಬೆಂಗಳೂರು: ಐಪಿಎಲ್ 2025 ಟೂರ್ನಿ ಉದ್ಘಾಟನೆಗೆ ಇನ್ನೂ ಒಂದು ವಾರ ಬಾಕಿಯಿರುವಂತೆಯೇ ಆಟಗಾರರು ತಮ್ಮ ಪ್ರಾಂಚೈಸಿ ತಂಡಗಳಿಗೆ ಮರಳುವ ಮೂಲಕ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಗೆಲುವಿನ ನಂತರ RCBಗೆ ಮರಳಿರುವ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಕೊಹ್ಲಿ ಅವರನ್ನು ದಿ ಗೋಟ್, ದಿ ರನ್ ಮೆಷಿನ್ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಕೊಹ್ಲಿಯ ಉಪಸ್ಥಿತಿಯೊಂದಿಗೆ RCB ಬ್ರ್ಯಾಂಡ್ ಪ್ರಚಾರವೂ ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಅವರ ನಾಯಕತ್ವದ ಬಗ್ಗೆ ಊಹಾಪೋಹಗಳಿವೆ. ಅವರು ಮತ್ತೆ ತಂಡದ ನಾಯಕರಾಗಬಹುದು ಎಂದು ಕೆಲ ಮೂಲಗಳು ಹೇಳಿವೆ.
ಬೆಂಗಳೂರಿಗೆ ಕೊಹ್ಲಿಯ ಆಗಮನ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ಅಭಿಮಾನಿಗಳು ನಾನಾ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಅವರನ್ನು ಸ್ವಾಗತಿಸಿದ್ದಾರೆ.RCB ಮತ್ತೊಂದು ಸೀಸನ್‌ಗೆ ಸಜ್ಜಾಗುತ್ತಿದ್ದಂತೆ, ಎಲ್ಲರ ಕಣ್ಣುಗಳು ಕೊಹ್ಲಿಯ ಮೇಲಿದೆ.
ಅವರ ಆಕ್ರಮಣಕಾರಿ ಪ್ರದರ್ಶನ ಈ ಬಾರಿಯಾದರೂ ಐಪಿಎಲ್ ಟ್ರೋಫಿ ಗೆಲ್ಲುವಿನತ್ತ ಕೊಂಡೊಯ್ಯಲಿದೆಯೇ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.
Advertisement