IPL 2025: ಐಪಿಎಲ್ ಆಡಲು ಬಂದ ಮುಂಬೈ ಇಂಡಿಯನ್ಸ್ ಸ್ಟಾರ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಟಿಸ್!

ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತಂಡವು ಗಾಯಗೊಂಡಿರುವ ಲಿಜಾದ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡದಲ್ಲಿ ಹೆಸರಿಸಿದೆ.
ಕಾರ್ಬಿನ್ ಬಾಷ್
ಕಾರ್ಬಿನ್ ಬಾಷ್
Updated on

ಇತ್ತೀಚೆಗಷ್ಟೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿ ಒಂದೇ ಒಂದು ಪಂದ್ಯದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗದೆ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ಇದೀಗ ವಿಶ್ವದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಸಮಾನಾಂತರವಾಗಿ ಪಾಕಿಸ್ತಾನ ಸೂಪರ್ ಲೀಗ್ ವೇಳಾಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಿದೆ. ಕೆಲವು ಆಟಗಾರರು ಇದೀಗ ಉಭಯ ದೇಶಗಳ ಲೀಗ್‌ಗಳಲ್ಲಿ ಆಡಬೇಕಾದ ಕಾರಣ ಐಪಿಎಲ್ ಅನ್ನೇ ಆಯ್ಕೆ ಮಾಡಿಕೊಂಡಿರುವುದು ಪಿಸಿಬಿಯ ಕಣ್ಣು ಕೆಂಪಗಾಗಿಸಿದೆ.

ಉತ್ತಮ ಸಂಭಾವನೆಯಿಂದ ಹಿಡಿದು ಮಾನ್ಯತೆಯವರೆಗೆ ಹಲವು ಕಾರಣಗಳಿಂದಾಗಿ ಆಟಗಾರರಿಗೆ ಐಪಿಎಲ್‌ಗೆ ಆದ್ಯತೆ ನೀಡುವುದು ಅನಿವಾರ್ಯವಾಯಿತು. ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತಂಡವು ಗಾಯಗೊಂಡಿರುವ ಲಿಜಾದ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡದಲ್ಲಿ ಹೆಸರಿಸಿದೆ. ಹೀಗಾಗಿ, ಬಾಷ್ ಪಾಕಿಸ್ತಾನ ಸೂಪರ್ ಲೀಗ್ ಒಪ್ಪಂದವನ್ನು ಕೈಬಿಟ್ಟಿದ್ದಾರೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಟ್ಟಾಗಿದ್ದು, ಪಿಸಿಬಿ ಜೊತೆಗಿನ ಒಪ್ಪಂಧವನ್ನು ಮುರಿದಿದ್ದಕ್ಕಾಗಿ ಬಾಷ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ್ದ ಬಾಷ್, ಜನವರಿ 13 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್‌ನ 10ನೇ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿಯ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾದರು. ಈ ತಿಂಗಳ ಆರಂಭದಲ್ಲಿ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್, ಗಾಯಗೊಂಡಿರುವ ದಕ್ಷಿಣ ಆಫ್ರಿಕಾದವರೇ ಆದ ಲಿಜಾದ್ ವಿಲಿಯಮ್ಸ್ ಬದಲಿಗೆ ಬಾಷ್ ಅವರನ್ನು ಘೋಷಿಸಿದೆ.

ಕಾರ್ಬಿನ್ ಬಾಷ್
IPL 2025: ಇಂಗ್ಲೆಂಡ್‌ ಸ್ಫೋಟಕ ಆಲ್‌ರೌಂಡರ್ RCB ತಂಡಕ್ಕೆ ಸೇರ್ಪಡೆ

ಬಾಷ್ ಅವರಿಗೆ ಅವರ ಏಜೆಂಟ್ ಮೂಲಕ ಕಾನೂನು ನೋಟಿಸ್ ನೀಡಲಾಗಿದೆ ಮತ್ತು ಒಪ್ಪಂದದಿಂದ ಹಿಂದೆ ಸರಿದಿರುವುದರ ಕುರಿತು ಸಮರ್ಥನೆ ನೀಡುವಂತೆ ಕೇಳಲಾಗಿದೆ. ಪಿಸಿಬಿ ಆಡಳಿತ ಮಂಡಳಿಯು, ಲೀಗ್‌ನಿಂದ ಅವರು ನಿರ್ಗಮಿಸುವುದರಿಂದ ಉಂಟಾಗುವ ಪರಿಣಾಮಗಳನ್ನು ಸಹ ವಿವರಿಸಿದೆ ಮತ್ತು ನಿಗದಿತ ಸಮಯದೊಳಗೆ ಅವರ ಪ್ರತಿಕ್ರಿಯೆ ಕೇಳಿದೆ.

2016ರಲ್ಲಿ ಪಿಎಸ್ಎಲ್ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಐಪಿಎಲ್‌ನೊಂದಿಗೆ ಕೆಲವು ಪಂದ್ಯಗಳಿಗೆ ಘರ್ಷಣೆಯಾಗಲಿದೆ. ಚಾಂಪಿಯನ್ಸ್ ಟ್ರೋಫಿ ಮತ್ತು ಪಾಕಿಸ್ತಾನದಲ್ಲಿ ಇತರ ಅಂತರರಾಷ್ಟ್ರೀಯ ಬದ್ಧತೆಗಳ ಕಾರಣದಿಂದಾಗಿ ಪಿಸಿಬಿ ತನ್ನ ಪಿಎಸ್ಎಲ್ ಅನ್ನು ಫೆಬ್ರುವರಿ-ಮಾರ್ಚ್‌ನಿಂದ ಏಪ್ರಿಲ್-ಮೇಗೆ ಬದಲಾಯಿಸಬೇಕಾಯಿತು.

ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದ ವಿದೇಶಿ ಆಟಗಾರರು ಪಿಎಸ್‌ಎಲ್‌ಗೆ ಸಹಿ ಹಾಕಿದರು. ಅದರಲ್ಲಿ ಬಾಷ್ ಕೂಡ ಸೇರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com