IPL 2022: ದಾಖಲೆ ಬರೆದ SRH vs RR ಪಂದ್ಯ, ಗರಿಷ್ಟ ರನ್ ಕಂಡ ಐಪಿಎಲ್ ಇತಿಹಾಸದ 2ನೇ Match

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದುಬಂದಿದೆ.
Sunrisers Hyderabad win by 44 runs win Against Rajasthan Royals
ಸನ್ ರೈಸರ್ಸ್ ಹೈದರಾಬಾದ್ ಜಯ
Updated on

ಹೈದರಾಬಾದ್: ಐಪಿಎಲ್ ಟೂರ್ನಿಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯ ಹೊಸ ದಾಖಲೆಗೆ ಪಾತ್ರವಾಗಿದ್ದು, ಐಪಿಎಲ್ ಇತಿಹಾಸದಲ್ಲೇ ಗರಿಷ್ಟ ರನ್ ಗಳನ್ನು ಕಂಡ 2ನೇ ಪಂದ್ಯ ಇದಾಗಿದೆ.

ಹೌದು.. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದುಬಂದಿದ್ದು, ಆ ಮೂಲಕ ಈ ಪಂದ್ಯ ಗರಿಷ್ಟ ರನ್ ಗಳು ಬಂದ 2ನೇ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 286 ರನ್‌ಗಳ ಬೃಹತ್ ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನು ಹತ್ತಿದ ರಾಜಸ್ತಾನ ತಂಡ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿತು.

ರಾಜಸ್ತಾನ ಪರ ಸಂಜು ಸ್ಯಾಮ್ಸನ್ (66ರನ್), ಧ್ರುವ್ ಜುರೆಲ್ (70 ರನ್), ಶಿಮ್ರಾನ್ ಹೆಟ್ಮರ್ (42 ರನ್) ಮತ್ತು ಶುಭಂ ದುಬೆ (ಅಜೇಯ 34 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಂಜು ಸಾಮ್ಸನ್ 37 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 66 ರನ್ ಕಲೆಹಾಕಿದರೆ, ಧ್ರುವ್ ಜುರೆಲ್ 35 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 70 ರನ್ ಕಲೆಹಾಕಿದರು. ಅಂತಿಮವಾಗಿ ರಾಜಸ್ತಾನ ತಂಡ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ 44 ರನ್ ಅಂತರದಲ್ಲಿ ಸೋಲು ಕಂಡಿತು.

Sunrisers Hyderabad win by 44 runs win Against Rajasthan Royals
IPL 2025: ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತ ದಾಖಲು, ತನ್ನದೇ ದಾಖಲೆ ಮುರಿದ SRH

ಒಂದೇ ಪಂದ್ಯದಲ್ಲಿ 528 ರನ್

ಇನ್ನು ಈ ಪಂದ್ಯದಲ್ಲಿ ಬರೊಬ್ಬರಿ 528 ರನ್ ಗಳು ಹರಿದು ಬಂದಿದ್ದು, ಇದು ಐಪಿಎಲ್ ಇತಿಹಾಸದ ಅತೀ ಹೆಚ್ಚು ರನ್ ಗಳನ್ನು ಕಂಡ 2ನೇ ಪಂದ್ಯವಾಗಿದೆ. ಈ ಹಿಂದೆ 2024ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪಂದ್ಯದಲ್ಲಿ 549 ರನ್ ಹರಿದು ಬಂದಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಗರಿಷ್ಟ ರನ್ ಗಳನ್ನು ಕಂಡ ಪಂದ್ಯವಾಗಿದೆ.

Highest aggregates in an IPL match

  • 549 - SRH vs RCB, Bengaluru, 2024

  • 528 - SRH vs RR, Hyderabad, 2025*

  • 523 - SRH vs MI, Hyderabad, 2024

  • 523 - KKR vs PBKS, Kolkata, 2024

  • 504 - DC vs MI, Delhi, 2024

2020 ರಲ್ಲಿ ಶಾರ್ಜಾದಲ್ಲಿ ಪಿಬಿಕೆಎಸ್ ವಿರುದ್ಧ 226 ರನ್‌ಗಳನ್ನು ಮೀರಿದ 242 ರನ್‌ಗಳು ರಾಜಸ್ಥಾನ್ ರಾಯಲ್ಸ್ ತಂಡದ ಅತ್ಯಧಿಕ ಮೊತ್ತವಾಗಿದೆ.

242 runs is the highest team total for Rajasthan Royals surpassing 226 runs against PBKS at Sharjah in 2020.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com