IPL 2025: ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತ ದಾಖಲು, ತನ್ನದೇ ದಾಖಲೆ ಮುರಿದ SRH

ಐಪಿಎಲ್ 2025 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 286 ರನ್‌ಗಳ ಬೃಹತ್ ರನ್ ಕಲೆ ಹಾಕಿತು.
Sunrisers Hyderabad
ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್
Updated on

ಹೈದರಾಬಾದ್: 2025ರ ಐಪಿಎಲ್ ಟೂರ್ನಿ ಭರ್ಜರಿ ಆರಂಭ ಕಂಡಿದ್ದು, ನಿನ್ನೆ ಆರ್ ಸಿಬಿ ಭರ್ಜರಿ ಜಯ ಗಳಿಸಿದರೆ, ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆಯನ್ನೇ ನಿರ್ಮಿಸಿದೆ.

ಹೌದು.. ಐಪಿಎಲ್ 2025 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 286 ರನ್‌ಗಳ ಬೃಹತ್ ರನ್ ಕಲೆ ಹಾಕಿತು.

ಇಶಾನ್ ಕಿಶನ್ ಕೇವಲ 47 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 106 ರನ್ ಪೇರಿಸಿದರು. ಅತ್ತ ಟ್ರಾವಿಸ್ ಹೆಡ್ ಕೂಡ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 67 ರನ್ ಪೇರಿಸಿದರು. ಈ ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಪೇರಿಸಿತು.

Sunrisers Hyderabad
IPL 2025: ಸೆಂಟ್ರಲ್ ಕಾಂಟ್ರಾಕ್ಟ್ ರದ್ದತಿಗೆ Ishan Kishan ತಿರುಗೇಟು; ಸ್ಫೋಟಕ ಬ್ಯಾಟಿಂಗ್, ಐಪಿಎಲ್ ಇತಿಹಾಸದಲ್ಲೇ ಮೊದಲ ಭಾರತೀಯ!

ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ

ಆ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿದೆ. ಇದು ಐಪಿಎಲ್‌ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಸ್ಕೋರ್ ಆಗಿದ್ದು, ಈ ಹಿಂದೆ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ 3 ವಿಕೆಟ್‌ಗೆ 287 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದ ಮೊದಲ ಗರಿಷ್ಠ ಮೊತ್ತವಾಗಿದೆ.

Highest team totals in the IPL

  • 287/3 - SRH vs RCB, Bengaluru, 2024

  • 286/6 - SRH vs RR, Hyderabad, today*

  • 277/3 - SRH vs MI, Hyderabad, 2024

  • 272/7 - KKR vs DC, Visakhapatnam, 2024

  • 266/7 - SRH vs DC, Delhi, 2024

  • 263/5 - RCB vs PWI, Bengaluru, 2013

Sunrisers Hyderabad
IPL 2025: ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್, ರಾಜಸ್ತಾನಕ್ಕೆ ಗೆಲ್ಲಲು ಬೃಹತ್ ಗುರಿ

ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 250+ ಸ್ಕೋರ್, SRH ದಾಖಲೆ

ಅಂತೆಯೇ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 250ಕ್ಕೂ ಅಧಿಕ ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಅಗ್ರ ಸ್ಥಾನಕ್ಕೇರಿದ್ದು, ಇಂದಿನ ಪಂದ್ಯವೂ ಸೇರಿದಂತೆ ಹೈದರಾಬಾದ್ ತಂಡ ಬರೊಬ್ಬರಿ 4 ಬಾರಿ 250ಕ್ಕೂ ಅಧಿಕ ಸ್ಕೋರ್ ಕಲೆಹಾಕಿದೆ. ಉಳಿದಂತೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಸರ್ರೆ ತಂಡ 3 ಬಾರಿ ಈ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡ 3 ಬಾರಿ ಈ ಸಾಧನೆ ಮಾಡಿದ ಕೀರ್ತಿ ಹೊಂದಿದೆ.

Most 250+ totals in T20 cricket

  • 4 - SRH*

  • 3 - Surrey

  • 3 - India

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com