
ಹೈದರಾಬಾದ್: ಐಪಿಎಲ್ 2025 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಗೆಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 286 ರನ್‌ಗಳ ಬೃಹತ್ ರನ್ ಕಲೆ ಹಾಕಿದೆ.
ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
ಹೈದರಾಬಾದ್ ಪರ ಅಭಿಷೇಕ್ ಶರ್ಮಾ (24 ರನ್) ಮತ್ತು ಟ್ರಾವಿಸ್ ಹೆಡ್ (67 ರನ್) ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 45 ರನ್ ಜೊತೆಯಾಟವಾಡಿತು. ಅಭಿಷೇಕ್ ಶರ್ಮಾ ನಿರ್ಗಮನದ ಬಳಿಕ ಹೆಡ್ ಜೊತೆಗೂಡಿದ ಇಶಾನ್ ಕಿಶನ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು.
2ನೇ ವಿಕೆಟ್ ಗೆ ಈ ಜೋಡಿ 85 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಈ ಹಂತದಲ್ಲೇ ಟ್ರಾವಿಸ್ ಹೆಡ್ ಅರ್ಧಶತಕ ಗಳಿಸಿ ತುಷಾರ್ ದೇಶಪಾಂಡೆ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಬಂದ ನಿತೀಶ್ ಕುಮಾರ್ ರೆಡ್ಡಿ 30 ರನ್ ಗಳಿಸಿ ಔಟಾದರೆ, ಕ್ಲಾಸೆನ್ 34 ರನ್ ಗಳಿಸಿ ಔಟಾದರು. ಒಂದೆಡೆ ಸತತ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಇಶಾನ್ ಕಿಶನ್ ಮಾತ್ರ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ದಾಖಲೆಯ ಶತಕ ಸಿಡಿಸಿದರು.
ಇಶಾನ್ ಕಿಶನ್ ಕೇವಲ 47 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 106 ರನ್ ಪೇರಿಸಿ ಹೈದರಾಬಾದ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಪೇರಿಸಿ ರಾಜಸ್ತಾನಕ್ಕೆ ಗೆಲ್ಲಲು 287 ರನ್ ಗಳ ಬೃಹತ್ ಗುರಿ ನೀಡಿದೆ.
ಐಪಿಎಲ್ ಇತಿಹಾಸದಲ್ಲೇ ಇದು ತಂಡವೊಂದು ಗಳಿಸಿದ 2ನೇ ಗರಿಷ್ಠ ಮೊತ್ತವಾಗಿದೆ.
Advertisement