
ಹೈದರಾಬಾದ್: ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ವಿರೋಚಿತ ಹೋರಾಟದ ಹೊರತಾಗಿಯೂ ರಾಜಸ್ತಾನ ರಾಯಲ್ಸ್ ತಂಡ 44 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ 287 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 242 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ 44 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ರಾಜಸ್ತಾನ ರಾಯಲ್ಸ್ ವಿರೋಚಿತ ಹೋರಾಟ
ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ರಾಜಸ್ತಾನ ತಂಡದ ಪರ ಸಂಜು ಸ್ಯಾಮ್ಸನ್ (66ರನ್), ಧ್ರುವ್ ಜುರೆಲ್ (70 ರನ್), ಶಿಮ್ರಾನ್ ಹೆಟ್ಮರ್ (42 ರನ್) ಮತ್ತು ಶುಭಂ ದುಬೆ (ಅಜೇಯ 34 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಂಜು ಸಾಮ್ಸನ್ 37 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 66 ರನ್ ಕಲೆಹಾಕಿದರೆ, ಧ್ರುವ್ ಜುರೆಲ್ 35 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 70 ರನ್ ಕಲೆಹಾಕಿದರು.
ಹೆಟ್ಮೆರ್ ಕೂಡ 4 ಸಿಕ್ಸರ್ 1 ಬೌಂಡರಿ ಸಹಿತ 42 ರನ್ ಕಲೆಹಾಕಿದರೆ, ದುಬೆ 4 ಸಿಕ್ಸರ್ 1 ಬೌಂಡರಿ ಸಹಿತ ಅಜೇಯ 34 ರನ್ ಗಳಿಸಿದರು. ಆದರೆ ಇವರ ಆಟ ತಂಡದ ಗೆಲುವಿಗೆ ನೆರವಾಗಲಿಲ್ಲ ವಾದರೂ, ಟೂರ್ನಿಯಲ್ಲಿ ತಂಡದ ನೆಟ್ ರನ್ ರೇಟ್ ಗೆ ನೆರವಾಯಿತು. ಅಂತಿಮವಾಗಿ ರಾಜಸ್ತಾನ ತಂಡ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ 44 ರನ್ ಅಂತರದಲ್ಲಿ ಸೋಲು ಕಂಡಿತು.
Advertisement