
ಕೋಲ್ಕತ್ತಾ: ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಡೆದಿದ್ದು ಆರ್ ಸಿಬಿ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇನ್ನು ಟೂರ್ನಿಯಲ್ಲಿ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಮಾಡಿ 56 ರನ್ ಕಲೆ ಹಾಕಿದ್ದರೆ ವಿರಾಟ್ ಕೊಹ್ಲಿ ಅಜೇಯ 59 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನು ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ನಾಲ್ಕು ತಂಡಗಳ ವಿರುದ್ಧ 1000ಕ್ಕೂ ಅಧಿಕ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (1057), ಚೆನ್ನೈ ಸೂಪರ್ ಕಿಂಗ್ಸ್ (1053), ಪಂಜಾಬ್ ಕಿಂಗ್ಸ್ (1030) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (1021) ವಿರುದ್ಧ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
2. ಮತ್ತೊಂದೆಡೆ ಕೆಕೆಆರ್ ವಿರುದ್ಧ 1000 ರನ್ ಕಲೆಹಾಕಿದ 3ನೇ ಬ್ಯಾಟರ್ ಆಗಿ ಕೊಹ್ಲಿ ಹೊರಹೊಮ್ಮಿದ್ದಾರೆ. ಈ ದಾಖಲೆಯನ್ನು ಮೊದಲು ರೋಹಿತ್ ಶರ್ಮಾ ಮಾಡಿದ್ದರು. ರೋಹಿತ್ 1070 ರನ್ ಕಲೆ ಹಾಕಿದ್ದರೆ ಡೇವಿಡ್ ವಾರ್ನರ್ 1093 ರನ್ ಬಾರಿಸಿದ್ದಾರೆ.
3. ಇನ್ನು ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ 2ನೇ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಕೊಹ್ಲಿ 64 ಅರ್ಧಶತಕ ಗಳಿಸಿದ್ದರೆ ಡೇವಿಡ್ ವಾರ್ನರ್ 66 ಅರ್ಧಶತಕ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
4. ಟಿ20 ಕ್ರಿಕೆಟ್ ನಲ್ಲಿ 400 ಪಂದ್ಯಗಳ್ನಾಡಿದ 3ನೇ ಭಾರತೀಯ ಎಂಬ ಖ್ಯಾತಿಗೂ ಕೊಹ್ಲಿ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ 448 ಪಂದ್ಯಗಳನ್ನಾಡಿದ್ದರೆ ದಿನೇಶ್ ಕಾರ್ತಿಕ್ 412 ಪಂದ್ಯಗಳನ್ನಾಡಿದ್ದರು.
Advertisement