IPL 2025: Shreyas Iyer ನಿಸ್ವಾರ್ಥ ಬ್ಯಾಟಿಂಗ್; ಪಂಜಾಬ್ ಕಿಂಗ್ಸ್ ದಾಖಲೆ

ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ (ಅಜೇಯ 97 ರನ್), ಪ್ರಿಯಾಂಶ್ ಆರ್ಯ (47 ರನ್) ಮತ್ತು ಶಶಾಂಕ್ ಸಿಂಗ್ (ಅಜೇಯ 44 ರನ್) ಭರ್ಜರಿ ಬ್ಯಾಟಿಂಗ್ ನಡೆಸಿದರು.
2nd Highest total for PBKS
ಶ್ರೇಯಸ್ ಅಯ್ಯರ್
Updated on

ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ದಾಖಲೆ ನಿರ್ಮಿಸಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಪಂಜಾಬ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿದೆ.

ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ (ಅಜೇಯ 97 ರನ್), ಪ್ರಿಯಾಂಶ್ ಆರ್ಯ (47 ರನ್) ಮತ್ತು ಶಶಾಂಕ್ ಸಿಂಗ್ (ಅಜೇಯ 44 ರನ್) ಭರ್ಜರಿ ಬ್ಯಾಟಿಂಗ್ ನಡೆಸಿದರು.

2nd Highest total for PBKS
IPL 2025: 6,4,6,6.. ಮತ್ತೆ Shreyas Iyer ಬ್ಯಾಟಿಂಗ್ ಅಬ್ಬರ, ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್; PBKS 243/5

ದಾಖಲೆ ಬರೆದ ಪಂಜಾಬ್ ಕಿಂಗ್ಸ್

ಇಂದು ಪಂಜಾಬ್ ದಾಖಲಿಸಿದ 243 ರನ್ ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ತಂಡದ 2ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಕಳೆದ 2024ರ ಆವೃತ್ತಿಯಲ್ಲಿ ಕೋಲ್ಕತಾದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 262 ರನ್ ಕಲೆಹಾಕಿದ್ದು, ಆ ತಂಡದ ಪರ ಐಪಿಎಸ್ ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.

ಅಂತೆಯೇ ಇದು ಅಹಮದಾಬಾದ್ ಮೈದಾನದಲ್ಲಿ ದಾಖಲಾದ ಅತ್ಯಧಿಕ T20 ಸ್ಕೋರ್ ಆಗಿದ್ದು, 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗಳಿಸಿದ 234/4 ಸ್ಕೋರ್ ಅನ್ನು ಕೂಡ ಇದು ಹಿಂದಿಕ್ಕಿದೆ. ಮತ್ತು ಇದೇ ಗುಜರಾತ್ ಟೈಟನ್ಸ್ ವಿರುದ್ಧದ ಅತ್ಯಧಿಕ ಮೊತ್ತ ಇದಾಗಿದ್ದು, ಕಳೆದ ವರ್ಷ ದೆಹಲಿ ಮೈದಾನದಲ್ಲಿ ಡಿಸಿ ವಿರುದ್ಧ ಗಳಿಸಿದ 224/4 ಸ್ಕೋರ್ ಗಳಿಸಿತ್ತು.

Highest total for PBKS in IPL

  • 243/5 vs GT, Ahmedabad, 2025*

  • 262/2 vs KKR, Kolkata, 2024

  • 232/2 vs RCB, Dharamsala, 2011

  • 231/4 vs CSK, Cuttack, 2014

  • 230/3 vs MI, Wankhede, 2017

2nd Highest total for PBKS
IPL 2025: ಇತಿಹಾಸದಲ್ಲೇ ಯಾರೂ ಬರೆಯದ ದಾಖಲೆ ನಿರ್ಮಿಸಿದ Maxwell, ಆದರೂ ಸಂತೋಷವಿಲ್ಲ!

ಶ್ರೇಯಸ್ ಅಯ್ಯರ್ ನಿಸ್ವಾರ್ಥ ಬ್ಯಾಟಿಂಗ್ ನಲ್ಲೂ ದಾಖಲೆ

ಇನ್ನು ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿದರು. ಆದರೆ ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಕೊನೆಯ ಓವರ್ ನಲ್ಲಿ ಅಯ್ಯರ್ ಗೆ ಶತಕ ಸಿಡಿಸುವ ಅವಕಾಶ ವಿತ್ತಾದರೂ ಅಯ್ಯರ್ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಶಶಾಂಕ್ ಸಿಂಗ್ ಗೆ ಅವಕಾಶ ನೀಡಿ ತಂಡದ ಮೊತ್ತ ಹೆಚ್ಚಳಕ್ಕೆ ನೆರವಾದರು. ಕೊನೆಯ ಓವರ್ ನ 2ನೇ ಎಸೆತದಲ್ಲಿ ಶಶಾಂಕ್ ಸಿಂಗ್ ಫ್ಲಿಕ್ ಮಾಡಿ ಸಿಂಗಲ್ ನೀಡುವ ಪ್ರಯತ್ನ ಮಾಡಿದರಾದರೂ ಅಯ್ಯರ್ ಅದನ್ನೂ 2 ರನ್ ಪಡೆದು ಮತ್ತೆ ಶಶಾಂಕ್ ಗೆ ಬ್ಯಾಟಿಂಗ್ ಗೆ ಅವಕಾಶ ಮಾಡಿಕೊಟ್ಟರು. ಒಂದು ವೇಳೆ ಆ ಸಮಯದಲ್ಲಿ ಅಯ್ಯರ್ ಸಿಂಗಲ್ ಪಡೆದಿದ್ದರೆ ಅವರು ಐಪಿಎಲ್ ನ ಚೊಚ್ಚಲ ಶತಕ ಸಿಡಿಸಿರುತ್ತಿದ್ದರು.

ದಾಖಲೆ

ಈ ಪಂದ್ಯದಲ್ಲಿ ಅಯ್ಯರ್ 3ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರಾದರೂ, ದಾಖಲೆ ಬರೆದಿದ್ದಾರೆ. ಫ್ರಾಂಚೈಸಿಯೊಂದರ ನಾಯಕತ್ವ ವಹಿಸಿಕೊಂಡ ಬಳಿಕ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ 3ನೇ ಆಟಗಾರ ಎಂಬ ಕೀರ್ತಿಗೆ ಅಯ್ಯರ್ ಪಾತ್ರರಾಗಿದ್ದಾರೆ. ಈ ಹಿಂದೆ 2021ರಲ್ಲಿ ಸಂಜು ಸ್ಯಾಮ್ಸನ್ ರಾಜಸ್ತಾನ ಪರ ಇದೇ ಪಂಜಾಬ್ ವಿರುದ್ಧ 119 ರನ್ ಗಳಿಸಿದ್ದು ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.

Highest score on captaincy debut for a franchise

  • 119 - Sanju Samson (RR vs PBKS, Wankhede, 2021

  • 99* - Mayank Agarwal (PBKS) vs DC, Ahmedabad, 2021

  • 97* - Shreyas Iye (PBKS) vs GT, Ahmedabad, 2025*

  • 93* - Shreyas Iye (DC) vs KKR, Delhi, 2018

  • 88 - Faf du Plessis (RCB) vs PBKS, Mumbai, 2022

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com