
ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ ಅದ್ಭುತ ಸ್ಟಂಪೌಟ್ ಮಾಡಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆರ್ ಸಿಬಿಯ ಫಿಲಿಪ್ ಸಾಲ್ಟ್ ರನ್ನು ಮಿಂಚಿನ ವೇಗದ ಸ್ಟಂಪೌಟ್ ಮಾಡಿದ್ದಾರೆ. ಕೇವಲ 0.14 ಸೆಕೆಂಡ್ ನಲ್ಲೇ ಸ್ಟಪೌಂಟ್ ಮಾಡಿ ಮತ್ತೆ ಧೋನಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಆರ್ ಸಿಬಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆರ್ ಸಿಬಿ ಪರ ಫಿಲಿಪ್ ಸಾಲ್ಟ್ ಅದ್ಭುತ ಓಪನಿಂಗ್ ಮಾಡಿದರು. ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು. ಆದರೆ ಈ ಹಂತದಲ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ ಅದ್ಭುತ ಸ್ಟಪಿಂಗ್ ಗೆ ಸಾಲ್ಟ್ ಬಲಿಯಾದರು.
ಧೋನಿ ಕೇವಲ 0.14 ಸೆಕೆಂಡ್ ನಲ್ಲೇ ಸ್ಟಂಪೌಟ್ ಮಾಡಿದ್ದು ಇದು ಈ ವರೆಗೂ ನಡೆದ ಪಂದ್ಯಗಳ ಪೈಕಿ 2ನೇ ವೇಗದ ಸ್ಟಂಪೌಟ್ ಆಗಿದೆ. ನೂರ್ ಅಹ್ಮದ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಲ್ಟ್‌ರ ವಿಕೆಟ್ ಪತನವಾಯಿತು.
ಈ ಹಿಂದೆ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್ನಲ್ಲಿ ಸ್ಟಂಪೌಟ್ ಮಾಡಿದ್ದರು. ಇದು ಈ ಟೂರ್ನಿಯ ವೇಗದ ಸ್ಚಂಪೌಟ್ ಆಗಿದೆ. 43ನೇ ವಯಸ್ಸಿನಲ್ಲೂ ಧೋನಿ ಅದ್ಭುತ ವಿಕೆಟ್ ಕೀಪಿಂಗ್ ಮಾಡುತ್ತಿದ್ದು ಅವರ ವಯಸ್ಸಿಗೂ ಅವರ ಆಟಕ್ಕೂ ಸಂಬಂಧವೇ ಇಲ್ಲದಂತೆ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.
Advertisement