
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಕೈಗೊಂಡ ಒಂದು ನಿರ್ಣಯ ಚೆನ್ನೈ ತಂಡದ ಒಂದು ವಿಕೆಟ್ ಪತನಕ್ಕೆ ಕಾರಣವಾಯಿತು.
ನಿನ್ನೆ ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 50 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಆರ್ ಸಿಬಿಯ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರ ಅಮೂಲ್ಯವಾದ ಸಲಹೆಗಳು ನೂತನ ನಾಯಕ ರಜತ್ ಪಾಟಿದಾರ್ ಗೆ ನೆರವಾಯಿತು.
Kohli ರಿವ್ಯೂ ಸಿಸ್ಟಮ್
ಇನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೈಗೊಂಡು ಒಂದು ನಿರ್ಣಯ ಸಿಎಸ್ ಕೆಯ ಒಂದು ಪ್ರಮುಖ ವಿಕೆಟ್ ಪತನಕ್ಕೆ ಕಾರಣವಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೇಳಿ ಕೊಹ್ಲಿ ದೀಪಕ್ ಹೂಡಾ ವಿರುದ್ಧ ಕ್ಯಾಚ್ ಬಿಹೈಂಡ್ ಅಪೀಲ್‌ಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಪಾಟಿದಾರ್ ಅವರನ್ನು ಮನವೊಲಿಸಿದರು ಮತ್ತು ಆರ್‌ಸಿಬಿ ನಾಯಕ ಅದನ್ನು ಅನುಸರಿಸಿದರು. ಪರಿಣಾಮವಾಗಿ, ಡಿಎರ್ ಎಸ್ ನಲ್ಲಿ ಆರ್ ಸಿಬಿ ಪರ ತೀರ್ಪು ಬಂದಿತು.
ಜೋಶ್ ಹ್ಯಾಜಲ್‌ವುಡ್ ಎರಡನೇ ಓವರ್‌ನಲ್ಲಿ ಎರಡು ಬಾರಿ ಬೌಂಡಿರಿ ಗಳಿಸಿ ನಂತರ, ಭುವನೇಶ್ವರ್ ಕುಮಾರ್ ಕೂಡ ಬೌಲಿಂಗ್ ದಾಳಿಗೆ ಇಳಿದರು. ಈ ವೇಳೆ ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್‌ನ ಮೂರನೇ ಎಸೆತದಲ್ಲಿ ಔಟ್‌ಸ್ವಿಂಗರ್ ಎಸೆತವನ್ನು ಚೆನ್ನೈ ತಂಡದ ಬ್ಯಾಟರ್ ಹೂಡಾ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಅಂಚು ಸವರಿ ಕೀಪರ್ ಕೈ ಸೇರಿತ್ತು.
ಈ ವೇಳೆ ಕೀಪರ್ ಜಿತೇಶ್ ಶರ್ಮಾ ಅಪೀಲ್ ಮಾಡಿದರಾದರೂ ನಾಯಕ ರಜತ್ ಪಾಟಿದಾರ್ ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಈ ಬಗ್ಗೆ ತುಂಬಾ ಕಾನ್ಫಿಡೆಂಟ್ ಇದ್ದ ಕೊಹ್ಲಿ ಮಾತ್ರ ಡಿಆರ್ಎಸ್ ತೆಗೆದುಕೊಳ್ಳುವಂತೆ ನಾಯಕ ಪಾಟಿದಾರ್ ಸೂಚಿಸಿದರು.
ಕೂಡಲೇ ರಜತ್ ಪಾಟಿದಾರ್ ಡಿಆರ್ ಎಸ್ ತೆಗೆದುಕೊಂಡರು. ಅಂಪೈರ್ ರಿವ್ಯೂ ವೇಳೆ ಚೆಂಡು ಹೂಡಾ ಬ್ಯಾಟ್ ಗೆ ಸವರಿರುವುದು ಖಚಿತವಾಗಿತ್ತು. ಹೀಗಾಗಿ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಬಳಿಕ ಚೆನ್ನೈ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳನ್ನಷ್ಟೇ ಗಳಿಸಿ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
Advertisement