
ಗುವಾಹಟಿ: ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡೆದಿದ್ದು ತೀವ್ರ ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗೆಲುವು ಸಾಧಿಸಿದೆ.
ಐಪಿಎಲ್-2025ರ 11ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಗೆ 183 ರನ್ ಗಳ ಗುರಿಯನ್ನು ನೀಡಿದೆ. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ 9 ವಿಕೆಟ್‌ಗೆ 182 ರನ್ ಗಳಿಸಿತು. ರಾಜಸ್ಥಾನ ನೀಡಿದ 183 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಆರ್ ತಂಡದ ನಿತೀಶ್ ರಾಣಾ 36 ಎಸೆತಗಳಲ್ಲಿ 81 ರನ್ ಗಳಿಸಿದರು. ನಾಯಕ ರಿಯಾನ್ ಪರಾಗ್ 37 ಮತ್ತು ಸಂಜು ಸ್ಯಾಮ್ಸನ್ 20 ರನ್ ಗಳಿಸಿದರು. ಖಲೀಲ್ ಅಹ್ಮದ್, ನೂರ್ ಅಹ್ಮದ್ ಮತ್ತು ಮಥೀಶ್ ಪತಿರಾನ ತಲಾ 2 ವಿಕೆಟ್ ಪಡೆದರು. ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.
ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 63 ರನ್ ಗಳಿಸಿ ಔಟಾದರು. ಅಲ್ಲದೆ ಹಸರಂಗ ವಿಜಯ್ ಶಂಕರ್ (9 ರನ್), ಶಿವಂ ದುಬೆ (18 ರನ್) ಮತ್ತು ರಾಹುಲ್ ತ್ರಿಪಾಠಿ (23 ರನ್) ಅವರನ್ನು ಔಟ್ ಮಾಡಿದರು. ಜೋಫ್ರಾ ಆರ್ಚರ್ ರಚಿನ್ ರವೀಂದ್ರ (0) ಗೆ ಪೆವಿಲಿಯನ್ ದಾರಿ ತೋರಿಸಿದರು. ಎಂಎಸ್ ಧೋನಿ 16 ರನ್ ಗಳಿಸಿ ಔಟಾದರು.
Advertisement