IPL ಆರಂಭಿಕ ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮೇಲೆ 'ಪ್ರಭಾವ' ಬೀರಿದ ಆಟಗಾರ ಯಾರು ಗೊತ್ತೇ?

IPL ಇತಿಹಾಸದಲ್ಲಿ RCBಯ ಪ್ರಮುಖ ಆಟಗಾರನಾಗಿರುವ ಕೊಹ್ಲಿ, RCB ಪಾಡ್‌ಕ್ಯಾಸ್ಟ್‌ನ ಮುಂಬರುವ ಸಂಚಿಕೆಯಲ್ಲಿ ಮಾತನಾಡಿದ್ದು, ಅದರ ಟ್ರೇಲರ್ ಅನ್ನು ತಂಡದ ಅಧಿಕೃತ X ಖಾತೆಯಲ್ಲಿ ಬಿಡುಗಡೆ ಮಾಡಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ತಮ್ಮ ಆರಂಭಿಕ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಮಾರ್ಕ್ ಬೌಚರ್ ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರು ಎಂಬುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

IPL ಇತಿಹಾಸದಲ್ಲಿ RCBಯ ಪ್ರಮುಖ ಆಟಗಾರನಾಗಿರುವ ಕೊಹ್ಲಿ, RCB ಪಾಡ್‌ಕ್ಯಾಸ್ಟ್‌ನ ಮುಂಬರುವ ಸಂಚಿಕೆಯಲ್ಲಿ ಮಾತನಾಡಿದ್ದು, ಅದರ ಟ್ರೇಲರ್ ಅನ್ನು ತಂಡದ ಅಧಿಕೃತ X ಖಾತೆಯಲ್ಲಿ ಬಿಡುಗಡೆ ಮಾಡಿದೆ.

ಬೌಚರ್ ತನ್ನನ್ನು ಗಾಲ್ಫ್‌ ಆಡಲು ಸಹ ಆಹ್ವಾನಿಸಿದರು ಎಂದ ವಿರಾಟ್ ಕೊಹ್ಲಿ, 'ನಾನು ಆರಂಭದಲ್ಲಿ ಐಪಿಎಲ್ ಆಡಿದ ವೇಳೆ ಮಾತುಕತೆ ನಡೆಸಿದ ಆಟಗಾರರ ಪೈಕಿ ಬೌಚರ್ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದರು. ಬೌಚರ್ ಅವರು ವಿರಾಟ್ ಅವರ ದೌರ್ಬಲ್ಯಗಳು ಏನೆಂದು ತಾವೇ ತಿಳಿದುಕೊಂಡರು. ಸ್ವತಃ ಅವರೇ ನನಗೆ ಸಲಹೆ ನೀಡಿದರು. ಆಟದಲ್ಲಿ ಮುಂದಿನ ಹಂತವನ್ನು ತಲುಪಲು ಏನನ್ನು ಸುಧಾರಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಮೂರು-ನಾಲ್ಕು ವರ್ಷಗಳ ನಂತರ ನಾನು ಭಾರತಕ್ಕೆ ಕಮೆಂಟೇಟರ್ ಆಗಿ ಬಂದಾಗ ನೀವು ಭಾರತಕ್ಕಾಗಿ ಆಡುವುದನ್ನು ನಾನು ನೋಡಬೇಕು. ಇಲ್ಲದಿದ್ದರೆ, ನಿಮ್ಮ ಪ್ರತಿಭೆಗೆ ನೀವೆ ಅಪಚಾರ ಮಾಡಿಕೊಂಡಂತೆ ಎಂದು ನನಗೆ ಹೇಳಿದರು. ಹಾಗಾಗಿ, ಅವರು ನನ್ನೊಂದಿಗೆ ನಡೆಸಿದ ಮಾತುಕತೆಗಳು ನನ್ನನ್ನು ನಿಜವಾಗಿಯೂ ದಿಗ್ಭ್ರಮೆಗೊಳಿಸಿತ್ತು' ಎಂದರು.

ಬೌಚರ್ 2008 ರಿಂದ 10ರವರೆಗೆ RCB ಗಾಗಿ ಆಡಿದ್ದರು. ಆಗಷ್ಟೇ ವಿರಾಟ್ ಕೊಹ್ಲಿ ನಿಧಾನವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುತ್ತಿದ್ದರು. ಭಾರತಕ್ಕಾಗಿ ಇನ್ನೂ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. 27 ಪಂದ್ಯಗಳಲ್ಲಿ, ಬೌಚರ್ ಅರ್ಧಶತಕದೊಂದಿಗೆ 29.85 ಸರಾಸರಿಯಲ್ಲಿ 388 ರನ್ ಗಳಿಸಿದರು.

ವಿರಾಟ್ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಆರಂಭದಿಂದಲೂ ಆರ್‌ಸಿಬಿ ಜೊತೆಗೆ ಇದ್ದಾರೆ. ಫ್ರಾಂಚೈಸಿಯೊಂದಿಗೆ ತಾವು ಹೊಂದಿರುವ 'ಸಂಬಂಧ ಮತ್ತು ಪರಸ್ಪರ ಗೌರವ' ಹೆಚ್ಚು ಮೌಲ್ಯಯುತವಾಗಿದೆ. ನಾನು ಅಭಿಮಾನಿಗಳಿಂದ ಪಡೆದ ಪ್ರೀತಿ, ಯಾವುದೇ ವಸ್ತು ಅಥವಾ ಯಾವುದೇ ಟ್ರೋಫಿಯಿಂದಲೂ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರವೂ ಐಪಿಎಲ್‌ನಲ್ಲಿ ಏನೂ ಬದಲಾಗಿಲ್ಲ. ನನಗೆ ಯಾವುದೇ ರೀತಿಯಲ್ಲಿ ವಿಷಯಗಳು ಬದಲಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಇದೀಗ ಹೊಸ ಆಟಗಾರರಿದ್ದಾರೆ ಮತ್ತು ಅವರಿಗೆ ಸಮಯ ಬೇಕಾಗುತ್ತದೆ. ಅವರಿಗೆ ವಿಕಸನಗೊಳ್ಳಲು, ಒತ್ತಡ ನಿಭಾಯಿಸಲು, ವಿಶ್ವದ ವಿವಿಧ ಭಾಗಗಳಲ್ಲಿ ಆಡಲು ಮತ್ತು ಸಾಕಷ್ಟು ಆಟಗಳನ್ನು ಆಡಲು 2 ವರ್ಷಗಳ ಅವಧಿ ಅಗತ್ಯವಿದೆ ಎಂದರು.

ವಿರಾಟ್ ಕೊಹ್ಲಿ
IPL 2025: 'ಜನರು ಮರೆಯುತ್ತಿದ್ದಾರೆ...': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ನಂತರ 'ಚೇಸ್ ಮಾಸ್ಟರ್' ವಿರಾಟ್ ಕೊಹ್ಲಿ

ಐಪಿಎಲ್ 2025ನೇ ಆವೃತ್ತಿಯಲ್ಲಿ ವಿರಾಟ್ 10 ಇನಿಂಗ್ಸ್‌ಗಳಲ್ಲಿ 63.28 ಸರಾಸರಿಯಲ್ಲಿ 443 ರನ್‌ ಗಳಿಸಿದ್ದಾರೆ. ಆರು ಅರ್ಧಶತಕಗಳೊಂದಿಗೆ 73* ಅವರ ಅತ್ಯುತ್ತಮ ಸ್ಕೋರ್‌ ಆಗಿದೆ. ಆರೆಂಜ್ ಕ್ಯಾಪ್ ಹೋಲ್ಡರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಆರ್‌ಸಿಬಿ ತಂಡವು ಏಳು ಗೆಲುವು ಮತ್ತು ಮೂರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಶನಿವಾರದಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸೆಣಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com