IPL 2025: 'ನಿಜವಾದ ಚಾಂಪಿಯನ್'; ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆ ಇರ್ಫಾನ್ ಪಠಾಣ್ ಎಚ್ಚರಿಕೆ!

IPL 2025: 'ನಿಜವಾದ ಚಾಂಪಿಯನ್'; ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆ ಇರ್ಫಾನ್ ಪಠಾಣ್ ಎಚ್ಚರಿಕೆ!

ಐದು ಬೌಂಡರಿ ಮತ್ತು ಐದು ಸಿಕ್ಸರ್ ಮೂಲಕ 33 ಎಸೆತಗಳಲ್ಲಿ 32 ರನ್ ಗಳಿಸಿದ ವಿರಾಟ್ ಕೊಹ್ಲಿ, ಹಲವು ದಾಖಲೆಗಳನ್ನು ಬರೆದಿದ್ದಾರೆ.
Published on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಕೆ. 33 ಎಸೆತಗಳಲ್ಲಿ 62 ರನ್ ಗಳಿಸಿದ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಾಖಲೆಗಳನ್ನು ಮುರಿದರು. ಇದು ಐಪಿಎಲ್ 2025ರಲ್ಲಿ ಕೊಹ್ಲಿ ಅವರ ಸತತ ನಾಲ್ಕನೇ ಅರ್ಧಶತಕವಾಗಿದ್ದು, ಈ ಆವೃತ್ತಿಯಲ್ಲಿ ದಾಖಲೆಯ ಏಳನೇ ಅರ್ಧಶತಕವಾಗಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಹಿಂದಿನ ಪಂದ್ಯದಲ್ಲಿ ಕಡಿಮೆ ಸ್ಕೋರಿಂಗ್ ವೇಳೆ 47 ಎಸೆತಗಳಲ್ಲಿ 51 ರನ್ ಗಳಿಸಿ ನಿಧಾನಗತಿಯಲ್ಲಿ ಆಡಿದ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಪ್ರಶ್ನಿಸಿದ್ದವರನ್ನು ಟೀಕಿಸಿದ್ದಾರೆ. ಕೊಹ್ಲಿ ಅವರು ಇನಿಂಗ್ಸ್ ಅನ್ನು ಹೇಗೆ ಬೇಕಾದರೂ ಕಟ್ಟಬಹುದು ಮಾತ್ರವಲ್ಲದೆ ಯಾವಾಗ ಬೇಕಾದರೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಬಹುದು ಎಂದರು.

'ಕಳೆದ ಪಂದ್ಯದಲ್ಲಿ 100 ಸ್ಟ್ರೈಕ್ ರೇಟ್ ಹೊಂದಿದ್ದರೂ ಕೂಡ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡು ಅವರು ಇನಿಂಗ್ಸ್‌ ಅನ್ನು ಕಟ್ಟಿದರು. ಅವರು ಯಾವಾಗ ಬೇಕಾದರೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಹುದು. ಇಂದು ಅವರು 187 ಸ್ಟ್ರೈಕ್ ರೇಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅವರು ನಿಜವಾದ ಚಾಂಪಿಯನ್. ಅವರು ವಿರಾಟ್ ಕೊಹ್ಲಿ!' ಪಠಾಣ್ ಬರೆದಿದ್ದಾರೆ.

ಐದು ಬೌಂಡರಿ ಮತ್ತು ಐದು ಸಿಕ್ಸರ್ ಮೂಲಕ 33 ಎಸೆತಗಳಲ್ಲಿ 32 ರನ್ ಗಳಿಸಿದ ವಿರಾಟ್ ಕೊಹ್ಲಿ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಕೊಹ್ಲಿ ಆರ್‌ಸಿಬಿ ಪರ 300 ಸಿಕ್ಸರ್‌ ಬಾರಿಸಿದ್ದಾರೆ. ಇದೀಗ ಅವರು ರಾಯಲ್ ಚಾಲೆಂಜರ್ಸ್‌ ಪರವಾಗಿ 304 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಕೊಹ್ಲಿ ಅವರ ಈ ಅದ್ಭುತ 62 ರನ್ ಚೆನ್ನೈ ವಿರುದ್ಧ ಬಂದಿರುವ 10ನೇ 50+ ಸ್ಕೋರ್ ಆಗಿದ್ದು, ಇದು ಐಪಿಎಲ್ ಇತಿಹಾಸದಲ್ಲಿ ತಂಡವೊಂದರ ವಿರುದ್ಧ ಯಾವುದೇ ಆಟಗಾರ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಚೆನ್ನೈ ವಿರುದ್ಧ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ತಲಾ ಒಂಬತ್ತು 50+ ಸ್ಕೋರ್‌ಗಳನ್ನು ಹೊಂದಿದ್ದಾರೆ.

ಕೊಹ್ಲಿ ಈಗ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ 1,146 ರನ್ ಗಳಿಸಿದ್ದಾರೆ. ಇದು ಯಾವುದೇ ತಂಡದ ವಿರುದ್ಧ ಯಾವುದೇ ಆಟಗಾರ ಗಳಿಸಿದ ಗರಿಷ್ಠ ರನ್ ಆಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಡೇವಿಡ್ ವಾರ್ನರ್ 1,134 ರನ್‌ಗಳನ್ನು ಗಳಿಸಿದ್ದಾರೆ.

IPL 2025: 'ನಿಜವಾದ ಚಾಂಪಿಯನ್'; ವಿರಾಟ್ ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುವವರಿಗೆ ಇರ್ಫಾನ್ ಪಠಾಣ್ ಎಚ್ಚರಿಕೆ!
IPL 2025: 'ಆಗಿಂದ ನೋಡ್ತಾ ಇದೀನಿ.."; Virat Kohli ಕೆಣಕಿದ್ದ ವೇಗಿ Khaleel Ahmedಗೆ ಮೈದಾನದಲ್ಲೇ MS Dhoni ಫುಲ್ ಕ್ಲಾಸ್.. Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com