IPL 2025: 'ಆಗಿಂದ ನೋಡ್ತಾ ಇದೀನಿ.."; Virat Kohli ಕೆಣಕಿದ್ದ ವೇಗಿ Khaleel Ahmedಗೆ ಮೈದಾನದಲ್ಲೇ MS Dhoni ಫುಲ್ ಕ್ಲಾಸ್.. Video

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
MS Dhoni Irked By CSK Star Amid Virat Kohli
ಖಲೀಲ್ ಅಹ್ಮದ್ ವಿರುದ್ಧ ಧೋನಿ ಗರಂ
Updated on

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಿ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಸ್ ಕೆ ಬೌಲರ್ ವಿರುದ್ಧ ಎಂಎಸ್ ಧೋನಿ ಕೂಡ ಗರಂ ಆದ ಘಟನೆ ನಡೆದಿದೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ (55 ರನ್), ವಿರಾಟ್ ಕೊಹ್ಲಿ (62 ರನ್) ಮತ್ತು ರೊಮಾರಿಯೋ ಶೆಫರ್ಡ್ (ಅಜೇಯ 53 ರನ್) ಅರ್ಧಶತಕಗಳ ನೆರವಿನಿಂದ 213 ರನ್ ಗಳ ಬೃಹತ್ ಮೊತ್ತ ಪೇರಿಸಿತು.

MS Dhoni Irked By CSK Star Amid Virat Kohli
IPL 2025: 'ನೀನು ಮತ್ತೆ ಸಿಗು'; ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್‌ರನ್ನು ತರಾಟೆಗೆ ತೆಗೆದುಕೊಂಡ ವಿರಾಟ್ ಕೊಹ್ಲಿ!

ಈ ಗುರಿಯನ್ನು ಬೆನ್ನುಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆಯುಶ್ ಮ್ಹಾತ್ರೆ (94 ರನ್), ರವೀಂದ್ರ ಜಡೇಜಾ (77 ರನ್) ಭರ್ಜರಿ ಬ್ಯಾಟಿಗ್ ಹೊರತಾಗಿಯೂ ನಿಗಧಿತ 20 ಓವರ್ ನಲ್ಲಿ 5 ನವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.

ಈ ಪಂದ್ಯದ ಗೆಲುವಿನೊಂದಿಗೆ ಆರ್ ಸಿಬಿ ತನ್ನ ಅಂಕಗಳಿಕೆಯನ್ನು 16ಕ್ಕೆ ಏರಿಸಿಕೊಂಡಿದ್ದು, ಆ ಮೂಲಕ ಪ್ಲೇಆಫ್ ನಲ್ಲಿ ಬಹುತೇಕ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ.

ಖಲೀಲ್ ಅಹ್ಮದ್ ವಿರುದ್ಧ ಧೋನಿ ಫುಲ್ ಗರಂ

ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೇಳೆ ಖಲೀಲ್ ಅಹ್ಮದ್ ವಿರುದ್ಧ ಎಂಎಸ್ ಧೋನಿ ಫುಲ್ ಗರಂ ಆದರು. ಫೀಲ್ಡಿಂಗ್ ಸೆಟಪ್ ವಿಚಾರಕ್ಕೆ ಸಂಬಂಧಿಸಿದಂತೆ ಧೋನಿ ಖಲೀಲ್ ಅಹ್ಮದ್ ವಿರುದ್ಧ ಗರಂ ಆಗಿದ್ದರು.

ಆರ್ ಸಿಬಿ ಇನ್ನಿಂಗ್ಸ್ ನ 11 ಓವರ್ ನ 2ನೇ ಎಸೆತದ ವೇಳೆ ರವೀಂದ್ರ ಜಡೇಜಾ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ವೇಳೆ ಎಂಎಸ್ ಧೋನಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಈ ವೇಳೆ ಖಲೀಲ್ ಅಹ್ಮದ್ ತಾವು ಸೂಚಿಸಿದ ಜಾಗದಲ್ಲಿ ಅಲ್ಲದೇ ಬೇರೊಂದು ಜಾಗದಲ್ಲಿ ನಿಂತಿದ್ದರು.

ಇದನ್ನು ಗಮನಿಸಿದ ಧೋನಿ ಖಲೀಲ್ ರನ್ನು ಕೂಗಿ ನಾನು ಹೇಳಿದ ಪೊಸಿಷನ್ ಗೆ ಹೋಗು ಎಂದು ಗರಂ ಆಗಿ ಹೇಳಿದರು.

"ಖಲೀಲ್, ಅಲ್ಲಿ ಯಾರಾದರೂ ಫೀಲ್ಡಿಂಗ್ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ?" ಎಂದು ಕಿಡಿಕಾರಿದರು. ಕೂಡಲೇ ಎಚ್ಚೆತ್ತ ಖಲೀಲ್ ಅಹ್ಮದ್ ತಮ್ಮ ಜಾಗಕ್ಕೆ ಓಡಿ ಹೋದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com