IPL: ಅತ್ಯಾಚಾರ ಆರೋಪ, Mumbai Indians ಆಟಗಾರನ ಬಂಧನ!

ಮಹಿಳೆ ಫೆಬ್ರವರಿ 2023ರಲ್ಲಿ ವಡೋದರಾದಲ್ಲಿ ವಾಕಿಂಗ್ ಹೋಗಿದ್ದಾಗ ಶಿವಾಲಿಕ್ ಶರ್ಮಾರನ್ನು ಭೇಟಿಯಾಗಿದ್ದರು.
IPL cricketer Arrested
ಸಾಂದರ್ಭಿಕ ಚಿತ್ರ
Updated on

ಜೋಧ್ ಪುರ: ಅತ್ಯಾಚಾರ ಆರೋಪದಡಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಟಗಾರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಐಪಿಎಲ್ ಕ್ರಿಕೆಟಿಗ ಶಿವಾಲಿಕ್ ಶರ್ಮಾ (Shivalik Sharma) ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದು, ರಾಜಸ್ತಾನದ ಜೋಧ್ ಪುರದ ಕುಡಿ ಬಹಗತ್ಸಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ ಶಿವಾಲಿಕ್ ಶರ್ಮಾ ವಿರುದ್ಧ ಮದುವೆಯಾಗುವ ನೆಪದಲ್ಲಿ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪವಿದೆ.

ಪೊಲೀಸ್ ಮೂಲಗಳ ಪ್ರಕಾರ, 'ಸೆಕ್ಟರ್ 2 ರ ಕುಡಿ ಭಗತಸಾನಿ ನಿವಾಸಿ ಯುವತಿ ಕ್ರಿಕೆಟಿಗ ಶಿವಾಲಿಕ್ ಶರ್ಮಾ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಆ ಮಹಿಳೆ ಫೆಬ್ರವರಿ 2023ರಲ್ಲಿ ವಡೋದರಾದಲ್ಲಿ ವಾಕಿಂಗ್ ಹೋಗಿದ್ದಾಗ ಶಿವಾಲಿಕ್ ಶರ್ಮಾರನ್ನು ಭೇಟಿಯಾಗಿದ್ದರು.

ಅವರ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತು. ಬಳಿಕ ಅವರು ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಎರಡೂ ಕುಟುಂಬಗಳು 2023 ರಲ್ಲಿ ಭೇಟಿಯಾದರು ಮತ್ತು ಬಳಿಕ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತು. ನಿಶ್ಚಿತಾರ್ಥದ ನಂತರ ಅವರು ದೈಹಿಕ ಸಂಬಂಧದಲ್ಲಿ ತೊಡಗಿಕೊಂಡರು ಎಂದು ಎಸಿಪಿ ಆನಂದ್ ರಾಜ್‌ಪುರೋಹಿತ್ ಹೇಳಿದರು.

IPL cricketer Arrested
IPL 2025: 'ನೋಟ್ ಬುಕ್' ಸಂಭ್ರಮಾಚರಣೆ ಮಾಡಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ದಿಗ್ವೇಶ್ ರಾಠಿ; ಬಿಸಿಸಿಐ ದಂಡ?
Shivalik Sharma
ಶಿವಾಲಿಕ್ ಶರ್ಮಾ

ಐಪಿಎಲ್ ನಲ್ಲಿ ಶಿವಾಲಿಕ್ ಶರ್ಮಾ

ಇನ್ನು 2018 ರಲ್ಲಿ ಬರೋಡಾ ಪರ ಹದಿಹರೆಯದ ಆಟಗಾರನಾಗಿ ಪಾದಾರ್ಪಣೆ ಮಾಡಿದ್ದರು. ಅವರು ಬರೋಡಾ ಪರ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 1087 ರನ್ ಗಳಿಸಿದ್ದಾರೆ. ಶಿವಾಲಿಕ್ ಶರ್ಮಾ ಪ್ರಸ್ತುತ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರ ಬರೋಡಾ ತಂಡದ ಸಹ ಆಟಗಾರರಾಗಿದ್ದು, ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ ಅಡಿಯಲ್ಲಿ ಆಡುತ್ತಾರೆ.

ಶಿವಾಲಿಕ್ ಶರ್ಮಾ ಬರೋಡಾ ಪರ ಟಿ20 ಕ್ರಿಕೆಟ್‌ನಲ್ಲಿ 147.88 ಸ್ಟ್ರೈಕ್ ರೇಟ್‌ನಲ್ಲಿ 349 ರನ್ ಮತ್ತು ಲಿಸ್ಟ್ 'ಎ' 50 ಓವರ್ ಪಂದ್ಯಗಳಲ್ಲಿ 322 ರನ್ ಗಳಿಸಿದ್ದಾರೆ.

ಅಂದಹಾಗೆ 2024 ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಶಿವಾಲಿಕ್ ಶರ್ಮಾ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತ್ತು. ಆದಾಗ್ಯೂ, ಅವರು ಕಳೆದ ವರ್ಷ ಮುಂಬೈ ಪರ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com