IPL 2025: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ RCB ಪಂದ್ಯಕ್ಕೆ ಮಳೆ ಅಡ್ಡಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ದಿನದಂದು ನಗರದಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಪ್ರಮುಖ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಅಜಿಂಕ್ಯ ರಹಾನೆ ಮತ್ತು ರಜತ್ ಪಾಟೀದಾರ್
ಅಜಿಂಕ್ಯ ರಹಾನೆ ಮತ್ತು ರಜತ್ ಪಾಟೀದಾರ್
Updated on

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಮೇ 17ರಂದು ಪುನರಾರಂಭಗೊಳ್ಳುತ್ತಿದ್ದು, ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಎದುರಿಸಲಿದೆ. RCB ಮತ್ತು KKR ನಡುವಿನ 58ನೇ ಪಂದ್ಯವು ಶನಿವಾರ (ಮೇ 17) ಸಂಜೆ 7.30 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕೆಕೆಆರ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಯನ್ನು ಮುಂದುವರಿಸಲು ಆರ್‌ಸಿಬಿಗೆ ಈ ಗೆಲುವು ಅಗತ್ಯವಾಗಿದೆ. ಇಲ್ಲಿ ಸೋತರೆ ಕೆಕೆಆರ್‌ನ ಅಭಿಯಾನ ಕೊನೆಗೊಳ್ಳುತ್ತದೆ. ಪಂದ್ಯ ಮಳೆಯಿಂದ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದು ಪಾಯಿಂಟ್ ಸಿಗುತ್ತದೆ.

ಪಂದ್ಯದ ದಿನದಂದು ನಗರದಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಪ್ರಮುಖ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಅಕ್ಯೂವೆದರ್ ಪ್ರಕಾರ, ಸಂಜೆ 7 ಗಂಟೆಗೆ ಮಳೆಯಾಗುವ ಸಾಧ್ಯತೆ ಶೇ 34 ರಷ್ಟು ಇದೆ.

ರಾತ್ರಿ 9 ಗಂಟೆಯ ವೇಳೆಗೆ ಮಳೆ ಬೀಳುವ ಸಾಧ್ಯತೆ ಶೇ 40 ರಷ್ಟು ಮತ್ತು ರಾತ್ರಿ 10 ಗಂಟೆಯ ವೇಳೆಗೆ ಮಳೆ ಬೀಳುವ ಸಾಧ್ಯತೆ ಶೇ 51 ರಷ್ಟು ಹೆಚ್ಚಿದೆ. ರಾತ್ರಿ 11 ಗಂಟೆಯ ವೇಳೆಗೆ ಮಳೆ ಬೀಳುವ ಸಾಧ್ಯತೆ ಶೇ 47ಕ್ಕೆ ಇಳಿಯಲಿದೆ. ಪಂದ್ಯದ ಸಮಯದಲ್ಲಿ ಮಳೆ ಬೀಳುವ ಸಾಧ್ಯತೆ ಹೆಚ್ಚಿದ್ದು, ಮಳೆಯಿಂದಾಗಿ ಪಂದ್ಯ ಮೊಟಕುಗೊಂಡರೂ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಅತ್ಯುತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದು, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಆಟ ಪುನರಾರಂಭಗೊಳ್ಳುವ ಸಾಧ್ಯತೆ ಇದೆ.

ಅಜಿಂಕ್ಯ ರಹಾನೆ ಮತ್ತು ರಜತ್ ಪಾಟೀದಾರ್
IPL 2025: RCB ಶುಭ ಸುದ್ದಿ; ಗಾಯದಿಂದ ಚೇತರಿಸಿಕೊಂಡು ಬ್ಯಾಟಿಂಗ್ ಆರಂಭಿಸಿದ ನಾಯಕ ರಜತ್ ಪಾಟೀದಾರ್!

ಪಂದ್ಯದ ಸಮಯದಲ್ಲಿ ಮಳೆ ಬಾರದಿರಲಿ ಎಂದು ಎರಡೂ ತಂಡಗಳು ಆಶಿಸುತ್ತವೆ. ಇತ್ತ ಅಭಿಮಾನಿಗಳು ಕೂಡ ಐಪಿಎಲ್ ಪಂದ್ಯ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದು, ಸಂಪೂರ್ಣ 40 ಓವರ್‌ಗಳ ಪಂದ್ಯ ವೀಕ್ಷಿಸುವಂತಾಗಲಿ ಎಂದು ಬಯಸುತ್ತಿದ್ದಾರೆ.

ಐಪಿಎಲ್ 2025 ಅಂಕಪಟ್ಟಿ

ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಎರಡೂ ತಂಡಗಳು 8 ಗೆಲುವು ಸಾಧಿಸಿದ್ದು, 16 ಅಂಕಗಳನ್ನು ಹೊಂದಿವೆ. ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿವೆ. ಕೆಕೆಆರ್ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ ಆರನೇ ಸ್ಥಾನದಲ್ಲಿದೆ. ಈ ಹಂತದಲ್ಲಿ ಮತ್ತೊಂದು ಸೋಲು ಅವರ ಐಪಿಎಲ್ 2025 ಅಭಿಯಾನವನ್ನು ಕೊನೆಗೊಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com