
LSG ಪ್ಲೇಆಫ್ ರೇಸ್‌ನಿಂದ ಹೊರಬಿದ್ದ ನಂತರ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಆವೃತ್ತಿಯಲ್ಲಿ ತಂಡದ ಕಳಪೆ ಪ್ರದರ್ಶನಕ್ಕೆ ತಂಡದ ಆಟಗಾರರು ಗಾಯಗೊಂಡಿರುವುದೇ ಕಾರಣ. ವೇಗಿಗಳಾದ ಮಾಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಅವರು ಟೂರ್ನಿಯಿಂದ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದು ನಾಯಕ ರಿಷಭ್ ಪಂತ್ ತಿಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಕಳಪೆ ಪ್ರದರ್ಶನಕ್ಕೆ ಆಟಗಾರರು ಗಾಯಗೊಂಡಿರುವುದನ್ನು ನೆಪವಾಗಿ ಬಳಸಿಕೊಂಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ತಂಡದ ಮಾಲೀಕರು ತಮ್ಮ ಆಟಗಾರರ ಆಯ್ಕೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಗಾಯದ ಸಾಧ್ಯತೆ ಇರುವ ಆಟಗಾರರನ್ನು ಉಳಿಸಿಕೊಳ್ಳಬಾರದಿತ್ತು ಎಂದಿದ್ದಾರೆ.
ಕಳೆದ ವರ್ಷದ ಐಪಿಎಲ್ ಮೆಗಾ ಹರಾಜಿಗೂ ಮುನ್ನ, ಎಲ್‌ಎಸ್‌ಜಿ ನಿಕೋಲಸ್ ಪೂರನ್ (21 ಕೋಟಿ ರೂ.), ರವಿ ಬಿಷ್ಣೋಯ್ (11 ಕೋಟಿ ರೂ.), ಮಾಯಾಂಕ್ ಯಾದವ್ (11 ಕೋಟಿ ರೂ.), ಮೊಹ್ಸಿನ್ ಖಾನ್ (4 ಕೋಟಿ ರೂ.) ಮತ್ತು ಆಯುಷ್ ಬದೋನಿ (4 ಕೋಟಿ ರೂ.) ಅವರನ್ನು ಉಳಿಸಿಕೊಂಡಿತ್ತು. ಈ ಪೈಕಿ, ಮಾಯಾಂಕ್ ಕೇವಲ 2-3 ಪಂದ್ಯಗಳನ್ನು ಆಡಿದ್ದರೆ, ಮೊಹ್ಸಿನ್ ಈ ವರ್ಷ ಒಂದೇ ಒಂದು ಪಂದ್ಯದಲ್ಲಿಯೂ ಕಾಣಿಸಿಕೊಂಡಿಲ್ಲ.
'ಸಂಪೂರ್ಣ ಆವೃತ್ತಿಯಲ್ಲಿ ಆಡಬಲ್ಲ ಆಟಗಾರರನ್ನು ಉಳಿಸಿಕೊಳ್ಳಲು ನಾನು ಹಣ ಪಾವತಿಸಲು ಬಯಸುತ್ತೇನೆ. LSG ಯ ಸಂಪೂರ್ಣ ಬೌಲಿಂಗ್ ದಾಳಿಯು ಗಾಯದ ಸಾಧ್ಯತೆಯನ್ನು ಹೊಂದಿದೆ. ಗಾಯಗಳು ಆಗುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಅವುಗಳಿಗೆ ಹೆಚ್ಚು ಒಳಗಾಗುವ ಆಟಗಾರರನ್ನು ದೊಡ್ಡ ಮೊತ್ತಕ್ಕೆ ಉಳಿಸಿಕೊಳ್ಳುವುದನ್ನು ನಿಲ್ಲಿಸಿ. ಬದಲಾಗಿ, ಅವರನ್ನು ಹರಾಜಿನಲ್ಲಿ ತೆಗೆದುಕೊಳ್ಳಿ' ಎಂದು ಕೈಫ್ ಪಂದ್ಯದ ನಂತರ ಹೇಳಿದರು.
LSG ಹರಾಜಿನಲ್ಲಿ ಖರೀದಿಸಿದ ವೇಗಿಗಳಲ್ಲಿ ಒಬ್ಬರಾದ ಆಕಾಶ್ ದೀಪ್ ಕೂಡ ಇಡೀ ಆವೃತ್ತಿಗೆ ಲಭ್ಯವಿರಲಿಲ್ಲ. ಸೋಮವಾರ SRH ವಿರುದ್ಧದ ಪಂದ್ಯದ ಕೊನೆಯಲ್ಲಿ, ಪಂತ್ ಈ ಆಟಗಾರರ ಅನುಪಸ್ಥಿತಿಯಿಂದಲೇ ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.
'ಖಂಡಿತ ಇದು ನಮ್ಮ ಅತ್ಯುತ್ತಮ ಆವೃತ್ತಿಗಳಲ್ಲಿ ಒಂದಾಗಬಹುದಿತ್ತು. ಆದರೆ, ಪಂದ್ಯಾವಳಿಗೆ ಬಂದಾಗ, ನಮಗೆ ಬಹಳಷ್ಟು ಅಂತರಗಳು, ಗಾಯಗಳು ಇದ್ದವು ಮತ್ತು ಒಂದು ತಂಡವಾಗಿ ನಾವು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆವು. ಆದರೆ, ಆ ಅಂತರವನ್ನು ನಮಗೆ ತುಂಬುವುದು ಕಷ್ಟಕರವಾಯಿತು' ಎಂದು ಪಂತ್ ಪಂದ್ಯದ ನಂತರ ಹೇಳಿದರು.
'ನಾವು ಹರಾಜಿನಲ್ಲಿ ಯೋಜಿಸಿದ ರೀತಿ, ನಮಗೆ ಅದೇ ಬೌಲಿಂಗ್ ಇದ್ದಿದ್ದರೆ... ಫಲಿತಾಂಶ ಬೇರೆಯಾಗಿರುತ್ತಿತ್ತು. ಆದರೆ, ಇದು ಕ್ರಿಕೆಟ್. ಕೆಲವೊಮ್ಮೆ ವಿಷಯಗಳು ನಿಮ್ಮ ಇಚ್ಛೆಯಂತೆ ನಡೆಯುತ್ತವೆ ಮತ್ತು ಕೆಲವೊಮ್ಮೆ ಅವು ನಡೆಯುವುದಿಲ್ಲ. ನಾವು ಆಡಿದ ರೀತಿಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಋಣಾತ್ಮಕ ಭಾಗಕ್ಕಿಂತ ಈ ಆವೃತ್ತಿಯಿಂದ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಳ್ಳುತ್ತೇವೆ' ಎಂದು ಅವರು ಹೇಳಿದರು.
Advertisement