
ಲಕ್ನೋದಲ್ಲಿ SRH ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ RCB ತಂಡದ ಬಾಂಡಿಂಗ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪಿಕಲ್‌ಬಾಲ್ ಆಡಿದ್ದು ಕಂಡುಬಂತು. ಕಾರ್ಯಕ್ರಮದಲ್ಲಿ ಆಟಗಾರರು ತಮ್ಮ ಸಹಾಯಕ ಸಿಬ್ಬಂದಿ ಮತ್ತು ಕುಟುಂಬಗಳೊಂದಿಗೆ ಪಿಕಲ್‌ಬಾಲ್ ಆಡಿ ಸಂಭ್ರಮಿಸಿದ್ದಾರೆ.
RCB ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಪಾಯಿಂಟ್ ಪಡೆದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಅವರನ್ನು ಅಭಿನಂದಿಸುತ್ತಿರುವುದು ಕಂಡುಬಂದಿದೆ. ಈ ಸ್ಟಾರ್ ಜೋಡಿಯ ಜೊತೆಗೆ, ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮತ್ತು ಅವರ ಪತ್ನಿ ಹಾಗೂ ಭಾರತೀಯ ಸ್ಕ್ವಾಷ್ ತಾರೆ ದೀಪಿಕಾ ಪಲ್ಲಿಕಲ್ ಕೂಡ ಹಾಜರಿದ್ದರು.
ಲಕ್ನೋದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಆರ್‌ಸಿಬಿ ಸಿದ್ಧವಾಗುತ್ತಿದ್ದಂತೆ ಎಲ್ಲ ಆಟಗಾರರು ಮತ್ತು ಅವರ ಕುಟುಂಬಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ರದ್ದಾಗಿದ್ದ ಐಪಿಎಲ್ ಅಧಿಕೃತವಾಗಿ ಪುನರಾರಂಭಗೊಂಡಿತ್ತು. ಮೇ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರುದ್ಧ ಗುಜರಾತ್ ಟೈಟಾನ್ಸ್ ಜಯ ಸಾಧಿಸಿದ್ದರಿಂದ ಆರ್‌ಸಿಬಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಸಹಾಯವಾಯಿತು.
ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್‌ಸಿಬಿ vs ಎಸ್‌ಆರ್‌ಹೆಚ್ ಪಂದ್ಯವನ್ನು ದಕ್ಷಿಣ ಭಾರತದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಲಕ್ನೋಗೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಲೀಗ್ ಹಂತದ ತನ್ನ ಕೊನೆಯ ಎರಡು ಪಂದ್ಯಗಳನ್ನು ಲಕ್ನೋದಲ್ಲಿ ಆಡಲಿದ್ದು, ಮೇ 27ರಂದು ಏಕಾನಾ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ವಿರುದ್ಧ ಆಡಲಿದೆ.
ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಮತ್ತು ಕ್ವಾಲಿಫೈಯರ್ 1 ಅನ್ನು ಆಡಲು ಎದುರು ನೋಡುತ್ತಿರುವುದರಿಂದ ಆರ್‌ಸಿಬಿಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ.
Advertisement