
ಮುಂಬೈ ಇಂಡಿಯನ್ಸ್ (MI) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) 59 ರನ್‌ಗಳ ಹೀನಾಯ ಸೋಲು ಕಂಡಿದ್ದು, ಐಪಿಎಲ್ 2025ರ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಅಕ್ಷರ್ ಪಟೇಲ್ ನೇತೃತ್ವದ ಪಡೆ 181 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ಕಾರಣ ಹಾರ್ದಿಕ್ ಪಾಂಡ್ಯ ಪಡೆ ಜಯ ಸಾಧಿಸಿತು. ಈ ಸೋಲಿನ ಪರಿಣಾಮವಾಗಿ, ಡಿಸಿ ಇದೀಗ ಅನಗತ್ಯ ದಾಖಲೆ ಬರೆದಿದೆ.
ಐಪಿಎಲ್ ಇತಿಹಾಸದಲ್ಲಿ ಪಂದ್ಯಾವಳಿಯಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದರೂ ಪ್ಲೇಆಫ್‌ಗೆ ಪ್ರವೇಶಿಸದ ಮೊದಲ ತಂಡ ಡೆಲ್ಲಿ ಕ್ಯಾಪಿಟಲ್ಸ್ ಆಯಿತು. ಟೂರ್ನಿಯ ಮಧ್ಯಭಾಗದವರೆಗೂ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳುವ ಮೂಲಕ ಬಲಿಷ್ಠವಾಗಿ ಕಾಣುತ್ತಿದ್ದ ಡೆಲ್ಲಿ ನಂತರ ಮಂಕಾಯಿತು. ಎಲ್‌ಎಸ್‌ಜಿ, ಎಸ್‌ಆರ್‌ಹೆಚ್, ಸಿಎಸ್‌ಕೆ ಮತ್ತು ಆರ್‌ಸಿಬಿಗಳನ್ನು ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಿತ್ತು.
ಮುಂದಿನ ಮೂರು ಪಂದ್ಯಗಳಲ್ಲಿ, ಅವರು MI ವಿರುದ್ಧ ಸೋತರು, RR ವಿರುದ್ಧ ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಗೆದ್ದರು. ಆದರೆ, GT ವಿರುದ್ಧ ಮತ್ತೆ ಸೋತರು. ಬಳಿಕ ಮತ್ತೊಮ್ಮೆ LSG ಅನ್ನು ಸೋಲಿಸಿದರು. ಆದಾಗ್ಯೂ, ಅಂದಿನಿಂದ, ಅವರು ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲರಾದರು. ಉಳಿದ ಎರಡು ಪಂದ್ಯಗಳು ರದ್ದಾಯಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದ ಒಂದು PBKS ವಿರುದ್ಧ ಮತ್ತು ಇನ್ನೊಂದು ಮಳೆಯಿಂದಾಗಿ SRH ವಿರುದ್ಧ ರದ್ದಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2025ರ ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಇದೀಗ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿವೆ.
ಮುಂಬೈ ತಂಡವು ಡಿಸಿ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತು. ಆದರೆ, ಜಸ್ಪ್ರೀತ್ ಬುಮ್ರಾ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ ಪ್ರವಾಸಿ ತಂಡವು 121 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 73 ರನ್ ಗಳಿಸುವುದರೊಂದಿಗೆ ಐದು ವಿಕೆಟ್ ನಷ್ಟಕ್ಕೆ ಮುಂಬೈ 180 ರನ್ ಕಲೆಹಾಕಿತು. ನಮನ್ ಧೀರ್ 8 ಎಸೆತಗಳಲ್ಲಿ 24 ರನ್ ಗಳಿಸಿ ಆಕರ್ಷಕ ಪ್ರದರ್ಶನ ನೀಡಿದರು.
Advertisement