
ಚೆನ್ನೈ: ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 83 ರನ್ ಗಳ ಅಂತರದಿಂದ ಸೋತ ನಂತರ ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್‌ನ ಟಾಪ್-2 ಆಸೆಗೆ ಹೊಡೆತ ಬಿದ್ದಿದೆ. ಈ ಹಿನ್ನಡೆಯ ಹೊರತಾಗಿಯೂ, ಗುಜರಾತ್ ಟೈಟಾನ್ಸ್ ತನ್ನ ಎಲ್ಲಾ 14 ಲೀಗ್ ಪಂದ್ಯಗಳಿಂದ 18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆದಾಗ್ಯೂ, ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ಅವರ ನಿವ್ವಳ ರನ್ ರೇಟ್ ಗಣನೀಯ ಹೊಡೆತಕ್ಕೆ ಕಾರಣವಾಗಲಿದ್ದು, ಪಾಯಿಂಟ್ ಟೇಬಲ್ ನಲ್ಲಿ ಈಗಿರುವ ಸ್ಥಾನ ಕಳೆದುಕೊಳ್ಳಲಿದ್ದು, ಟಾಪ್-2ರಲ್ಲಿ MI,RCBಗೆ ಅವಕಾಶ ಇರಲಿದೆ.
ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪ್ಲೇ-ಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ನಾಳೆ ಲೀಗ್ ಹಂತದ ಕೊನೆಯ ಪಂದ್ಯ ಆರ್ಸಿಬಿ ಮತ್ತು ಎಲ್ಎಸ್ಜಿ ನಡುವೆ ನಡೆಯಲಿದೆ. ಈಗಾಗಲೇ ಪಾಯಿಂಟ್ಸ್ ಟೇಬಲ್ನಲ್ಲಿ 17 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ನಾಳೆ ನಡೆಯಲಿರುವ ಪಂದ್ಯವನ್ನು ಗೆದ್ದರೆ ಮಾತ್ರ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2ರಲ್ಲಿ ಇರಲಿದೆ.
ಹೀಗಾಗಿ ನಾಳೆ ನಡೆಯಲಿರುವ ಪಂದ್ಯವು ಆರ್ಸಿಬಿಗೆ ಮಾಡು, ಇಲ್ಲವೇ ಮಡಿ ಆಗಿದೆ. ಒಂದು ವೇಳೆ ಲಕ್ನೋ ವಿರುದ್ಧ ಆರ್ ಸಿಬಿ ಗೆದ್ದರೆ ಟಾಪ್-2 ರಲ್ಲಿ ಅವಕಾಶ ಪಡೆಯಲಿದೆ. ಒಂದು ವೇಳೆ ಸೋತರೆ ಮೂರನೇ ಅಥವಾ ನಾಲ್ಕನೇ ಸ್ಥಾನ ಪಡೆಯಬೇಕಾಗುತ್ತದೆ.
ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಒಂದು ವೇಳೆ ಮುಂಬೈ ಸೋತರೆ, ಆರ್ ಸಿಬಿ ನೆಟ್ ರನ್ ರೇಟ್ ಆಧಾರದಲ್ಲಿ ನಂಬರ್ 1 ಸ್ಥಾನ ಪಡೆಯಲು ಭಾರಿ ಅಂತರದಿಂದ ಗೆಲುವು ಸಾಧಿಸಬೇಕಾದ ಅಗತ್ಯವಿದೆ. ಒಂದು ವೇಳೆ ಪಂಜಾಬ್ ನ್ನು ಮುಂಬೈ ಸೋಲಿಸಿದರೆ, ಆರ್ ಸಿಬಿ ಯಾವುದೇ ಪಂದ್ಯ ಗೆದ್ದರೂ ಟಾಪ್ -2 ರಲ್ಲಿ ಬರಲಿದೆ.
Advertisement