ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್‌
ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್‌ಶುಭಮನ್ ಗಿಲ್ - ಸಾಯಿ ಸುದರ್ಶನ್

ಭಾರತದ ಟೆಸ್ಟ್ ತಂಡದಲ್ಲಿ ಸಾಯಿ ಸುದರ್ಶನ್‌ಗೆ ಸ್ಥಾನ; ಶುಭಮನ್ ಗಿಲ್ ನಿರ್ಧಾರಕ್ಕೆ ಗೌತಮ್ ಗಂಭೀರ್ ವಿರೋಧ?

'ಗೌತಮ್ ಗಂಭೀರ್ ಕೂಡ ಎಡಗೈ ಆರಂಭಿಕ ಆಟಗಾರರಾಗಿದ್ದರು. ಹೀಗಾಗಿ, ಸಾಯಿ ಸುದರ್ಶನ್ ಹೆಸರನ್ನು ವಿರೋಧಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎನ್ನಲಾಗಿದೆ.
Published on

ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಟೆಸ್ಟ್ ನಾಯಕ ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಜೂನ್ 20ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾಗೆ ಶುಭಮನ್ ಗಿಲ್ ಸಾರಥ್ಯ ವಹಿಸಲಿದ್ದು, ಈಗಾಗಲೇ ಮುಖ್ಯ ಕೋಚ್ ಮತ್ತು ಗಿಲ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವಂತಹ ವರದಿಗಳು ಹೊರಬಿದ್ದಿವೆ.

ಭಾರತ ತಂಡದಲ್ಲಿ ಸಾಯಿ ಸುದರ್ಶನ್ ಅವರಿಗೆ ಸ್ಥಾನ ನೀಡುವುದಕ್ಕೆ ಗಂಭೀರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಸಾಯಿ ಸುದರ್ಶನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಇದಕ್ಕಾಗಿ ಶುಭಮನ್ ಗಿಲ್ ಅವರು ಅರ್ಧ ಗಂಟೆಯಲ್ಲಿ ಗೌತಮ್ ಗಂಭೀರ್ ಅವರ ಮನವೊಲಿಸಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಚೊಚ್ಚಲ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಕುರಿತು ಸಾಯಿ ಸುದರ್ಶನ್ ಸಂತೋಷಗೊಂಡಿದ್ದಾರೆ. ಆದರೆ, ಗುಜರಾತ್ ಟೈಟಾನ್ಸ್ (ಜಿಟಿ) ತಂಡದ ಆರಂಭಿಕ ಆಟಗಾರನಿಗೆ ತಮ್ಮ ಮುಖ್ಯ ತರಬೇತುದಾರರಿಗೆ ತಾವು ತಂಡಕ್ಕೆ ಸೇರ್ಪಡೆಯಾಗುವುದು ಆರಂಭದಲ್ಲಿ ಇಷ್ಟವಿರಲಿಲ್ಲ ಎಂಬುದು ತಿಳಿದಿರಲಿಲ್ಲ. ತಂಡದ ಆಯ್ಕೆಗೂ ಮುನ್ನವೇ ಈ ಬೆಳವಣಿಗೆ ಸಂಭವಿಸಿದ್ದು, ಇಡೀ ಆಯ್ಕೆ ಸಮಿತಿಯೇ ಆಘಾತಕ್ಕೀಡಾಯಿತು.

'ಗೌತಮ್ ಗಂಭೀರ್ ಕೂಡ ಎಡಗೈ ಆರಂಭಿಕ ಆಟಗಾರರಾಗಿದ್ದರು. ಹೀಗಾಗಿ, ಸಾಯಿ ಸುದರ್ಶನ್ ಹೆಸರನ್ನು ವಿರೋಧಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲ' ಎಂದು ಬಿಸಿಸಿಐ ಮೂಲವೊಂದು ಕ್ರಿಕ್‌ಬ್ಲಾಗರ್‌ಗೆ ತಿಳಿಸಿದೆ.

ಸುದರ್ಶನ್ ಅವರ ಆಯ್ಕೆ ಹಲವರಿಗೆ ನಿರೀಕ್ಷಿತವಾಗಿದ್ದರೂ, ಗಂಭೀರ್ ಅವರ ಯೋಜನೆ ಸ್ವಲ್ಪ ಭಿನ್ನವಾಗಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಭಾರತೀಯ ಬ್ಯಾಟಿಂಗ್ ಘಟಕವು ಅನುಭವಿ ಮತ್ತು ದಿಗ್ಗಜ ಆಟಗಾರರಿಲ್ಲದೆಯೇ ಪುನರುಜ್ಜೀವನಗೊಳ್ಳಲು ಸಜ್ಜಾಗಿದೆ. ಆರಂಭಿಕ ಸ್ಥಾನಕ್ಕಾಗಿ ತ್ರಿಕೋನ ಸ್ಪರ್ಧೆಯಿದ್ದು, ಸುದರ್ಶನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್‌
Cricket: ಭಾರತದ ಟೆಸ್ಟ್ ತಂಡದ ನಾಯಕನಾಗಿ ಶುಭ್ ಮನ್ ಗಿಲ್ ನೇಮಕ, ಪಂತ್ ಉಪ ನಾಯಕ; ರಾಹುಲ್ ಗೆ ನಿರಾಶೆ!

ಆಟಗಾರರ ಆಯ್ಕೆ ವಿಚಾರದಲ್ಲಿ ಗಂಭೀರ್ ಅವರ ಭಿನ್ನಾಭಿಪ್ರಾಯಗಳ ಕುರಿತು ವರದಿ ಹೊರಬಿದ್ದಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಏಕದಿನ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ, ಗಂಭೀರ್ ಮತ್ತು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶ್ರೇಯಸ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ 'ಬಿಸಿ ಚರ್ಚೆ' ನಡೆಸಿದರು. ಕಳೆದ ಎರಡು 50 ಓವರ್‌ಗಳ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಎಕ್ಸ್-ಫ್ಯಾಕ್ಟರ್ ಎಂದೇ ಸಾಬೀತಾಗಿರುವ ಅಯ್ಯರ್ ಅವರನ್ನು ಟೆಸ್ಟ್‌ಗೆ ಪರಿಗಣಿಸಿಲ್ಲ.

ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಆರಂಭಿಕ ಆಟಗಾರನಾಗಿದ್ದು, 2025ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 52.23 ರ ಸರಾಸರಿಯಲ್ಲಿ ಮತ್ತು 155.37 ರ ಸ್ಟ್ರೈಕ್ ರೇಟ್‌ನಲ್ಲಿ 679 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳು ಮತ್ತು ಒಂದು ಶತಕ ಸೇರಿವೆ.

ಟೆಸ್ಟ್ ಆಯ್ಕೆಗೆ ಐಪಿಎಲ್ ಮಾನದಂಡವಲ್ಲ ಎಂದು ಹಲವರು ವಾದಿಸಬಹುದು. ಆದರೆ, ಐಪಿಎಲ್‌ನಂತಹ ಹೆಚ್ಚಿನ ಒತ್ತಡದ ಪಂದ್ಯಾವಳಿಯಲ್ಲಿ ಸಾಯಿ ಸುದರ್ಶನ್ ಅವರ ಸ್ಥಿರತೆಯು ಅವರನ್ನು ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ನಿಜವಾದ ಸ್ಪರ್ಧಿಯನ್ನಾಗಿ ಮಾಡುತ್ತದೆ. ಆದರೆ, ಅವರು ನಿಜವಾಗಿಯೂ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಅಥವಾ ಗಂಭೀರ್ ಅವರ ಪ್ರಭಾವವು ಅವರ ಟೆಸ್ಟ್ ಚೊಚ್ಚಲ ಪ್ರವೇಶವನ್ನು ಮತ್ತಷ್ಟು ವಿಳಂಬಗೊಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com