'ವಿರಾಟ್ ಅಂಕಲ್, ನೀವು ಯಾಕೆ ನಿವೃತ್ತಿ ಹೊಂದಿದ್ದೀರಿ?'; ಕೊಹ್ಲಿಗೆ ಹರ್ಭಜನ್ ಸಿಂಗ್ ಪುತ್ರಿ ಪತ್ರ!

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಅವರ ನಿವೃತ್ತಿ ಘೋಷಣೆಯು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡದ ಮಾಜಿ ಆಟಗಾರರಿಗೂ ಅಚ್ಚರಿ ಮೂಡಿಸಿದೆ.
ಹರ್ಭಜನ್ ಸಿಂಗ್ ಕುಟುಂಬ - ವಿರಾಟ್ ಕೊಹ್ಲಿ
ಹರ್ಭಜನ್ ಸಿಂಗ್ ಕುಟುಂಬ - ವಿರಾಟ್ ಕೊಹ್ಲಿ
Updated on

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೆಲವೇ ವಾರಗಳ ಮೊದಲು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ವಿರಾಟ್ ಕೊಹ್ಲಿ ಅವರ ಹಠಾತ್ ನಿರ್ಧಾರವು ಬಹುತೇಕ ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ. 36 ವರ್ಷದ ಕೊಹ್ಲಿ ಅತ್ಯುತ್ತಮ ಫಿಟ್‌ನೆಸ್‌ ಕಾಯ್ದುಕೊಂಡಿದ್ದಾರೆ. ಅಲ್ಲದೆ, ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸದ್ಯ ನಡೆಯುತ್ತಿರುವ ಐಪಿಎಲ್ 2025ರಲ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ.

ಈ ವರ್ಷದ ಆರಂಭದಲ್ಲಿ ವಿರಾಟ್ ಕೊಹ್ಲಿ ರಣಜಿ ಟ್ರೋಫಿಗೆ ಮರಳಿದ್ದರು. ಆ ರಣಜಿ ಪಂದ್ಯವನ್ನು ನೋಡಿಕೊಂಡಿದ್ದ ಭಾರತದ ಮಾಜಿ ಆಫ್-ಸ್ಪಿನ್ನರ್ ಮತ್ತು ದೆಹಲಿ ತರಬೇತುದಾರ ಸರಣ್‌ದೀಪ್ ಸಿಂಗ್ ಅವರ ಪ್ರಕಾರ, ಕೊಹ್ಲಿ ನಿವೃತ್ತಿ ಬಗ್ಗೆ ಯೋಜಿಸುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ ಮತ್ತು ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ 'ಗರಿಷ್ಠ ಶತಕಗಳನ್ನು ಗಳಿಸುವ' ಬಗ್ಗೆ ಮಾತನಾಡಿದ್ದರು ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರ ನಿವೃತ್ತಿ ಘೋಷಣೆಯು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡದ ಮಾಜಿ ಆಟಗಾರರಿಗೂ ಅಚ್ಚರಿ ಮೂಡಿಸಿದೆ. ಕೊಹ್ಲಿ ನಿವೃತ್ತಿಗೆ ತಮ್ಮ ಮಗಳು ಹಿನಾಯಾ ಹೇಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದಳು ಎಂಬುದನ್ನು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಂಕೊಂಡಿದ್ದಾರೆ.

'ಅವಳು ನನಗೆ, 'ಅಪ್ಪಾ, ವಿರಾಟ್ ಕೊಹ್ಲಿ ನಿವೃತ್ತಿ ಏಕೆ ತೆಗೆದುಕೊಂಡರು? ನಾನು ಅವರಿಗೆ ಸಂದೇಶ ಕಳುಹಿಸಲು ಬಯಸುತ್ತೇನೆ' ಎಂದು ಕೇಳಿದಳು'. ಬಳಿಕ ತಾನೇ ವಿರಾಟ್ ಕೊಹ್ಲಿಗೆ ಪತ್ರವನ್ನು ಕೂಡ ಬರೆದಳು: 'ನಾನು ಹಿನಾಯಾ. ನೀವು ಏಕೆ ನಿವೃತ್ತಿ ತೆಗೆದುಕೊಂಡಿದ್ದೀರಿ?' ಎಂದು ಕೇಳಿದ್ದಳು. ಆ ಪತ್ರಕ್ಕೆ ಕೊಹ್ಲಿ ಕೂಡ ಪ್ರೀತಿಯಿಂದ ಉತ್ತರಿಸುತ್ತಾ, 'ಬೇಟಾ, ಈಗ ಸಮಯ ಬಂದಿದೆ' ಎಂದು ಪ್ರತಿಕ್ರಿಯಿಸಿದರು ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ಹರ್ಭಜನ್ ಸಿಂಗ್ ಕುಟುಂಬ - ವಿರಾಟ್ ಕೊಹ್ಲಿ
'ನಮಗೆ ಅದು ಸಾಧ್ಯವಿಲ್ಲ ಎಂದು ಅರಿತಾಗ...': ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾರ್ದೂಲ್ ಠಾಕೂರ್

ವಿರಾಟ್ ಕೊಹ್ಲಿ 123 ಟೆಸ್ಟ್‌ಗಳಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ ಮತ್ತು 68 ಪಂದ್ಯಗಳಿಗೆ ನಾಯಕತ್ವ ವಹಿಸಿಕೊಂಡಿದ್ದು, 40ರಲ್ಲಿ ಗೆಲುವು ಸಾಧಿಸಿದ ದಾಖಲೆ ಹೊಂದಿದ್ದಾರೆ. 2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊನೆಯ ಬಾರಿ ಆಡಿದ್ದರು. ಪರ್ತ್‌ನಲ್ಲಿ ಏಕೈಕ ಶತಕ ಕೂಡ ಬಾರಿಸಿದ್ದರು. ಆದರೆ, ಅಷ್ಟೇನು ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಕಾರಣ ಟೀಕೆಗಳು ಕೇಳಿಬಂದಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com