
ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್‌ಗಳ ವಿರುದ್ಧ ಐಪಿಎಲ್ ವೀಕ್ಷಕ ವಿವರಣೆಗಾರರ ನೆಗೆಟಿವ್ ಮಾತುಗಳಿಗೆ ಕಿಡಿಕಾರಿದ್ದ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, RCB ಈ ವರ್ಷ ಐಪಿಎಲ್ ಗೆಲ್ಲುತ್ತದೆ ಮತ್ತು ಪ್ರಶಸ್ತಿಗಾಗಿ ಅವರ 18 ವರ್ಷಗಳ ಕಾಯುವಿಕೆ ಅಂತ್ಯಗೊಳ್ಳುತ್ತದೆ ಎಂದಿದ್ದಾರೆ. ಗುರುವಾರ ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ 2016ರ ನಂತರ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆದಿದೆ.
'ಈ ಸಲ ಕಪ್ ನಮ್ದೆ' ಎಂದು ಹೇಳದಂತೆ ಆರ್‌ಸಿಬಿ ದಂತಕಥೆ ವಿರಾಟ್ ಕೊಹ್ಲಿ ನನಗೆ ಎಚ್ಚರಿಕೆ ನೀಡಿದ್ದಾರೆ ಎಂದ ಡಿವಿಲಿಯರ್ಸ್, ಈ ಬಾರಿ ಆರ್‌ಸಿಬಿ ಎಲ್ಲ ರೀತಿಯಲ್ಲಿಯೂ ಉತ್ತಮವಾಗಿ ಕಾಣುತ್ತಿದೆ ಮತ್ತು ಪ್ರಶಸ್ತಿ ಬರವನ್ನು ಖಂಡಿತ ನೀಗಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಈಗ ಸಮಯ ಬಂದಿದೆ. ಆರ್‌ಸಿಬಿ ತನ್ನ ಎಲ್ಲ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. ಈ ಸಲ ಕಪ್ ನಮ್ದೆ ಎಂದು ಹೇಳಲು ನನಗೆ ಅವಕಾಶವಿಲ್ಲ ಏಕೆಂದರೆ, ವಿರಾಟ್ ನನಗೆ ಇನ್ನು ಮುಂದೆ ಹಾಗೆ ಹೇಳುವುದು ಬೇಡವೆಂದು ಹೇಳಿದ್ದಾರೆ. ಆದರೆ, ಈ ಆವೃತ್ತಿಯಲ್ಲಿ ನಾವು ನಿಜವಾಗಿಯೂ ಗೆಲುವು ಸಾಧಿಸುತ್ತೇವೆ ಎಂದು ನಾನು ನಂಬುತ್ತೇನೆ. ಆದ್ದರಿಂದ ನಿರೀಕ್ಷಿಸಿ, ಬಕಲ್ ಅಪ್ ಮಾಡಿ ಮತ್ತು ಸವಾರಿಯನ್ನು ಆನಂದಿಸಿ' ಎಂದು ಪಿಬಿಕೆಎಸ್ ವಿರುದ್ಧದ ಗೆಲುವಿನ ನಂತರ ಆರ್‌ಸಿಬಿ ಅಭಿಮಾನಿಗಳಿಗೆ ಸಂದೇಶವನ್ನು ನೀಡಲು ಕೇಳಿದಾಗ ಡಿವಿಲಿಯರ್ಸ್ ಇಎಸ್‌ಪಿಎನ್‌ಕ್ರಿಕ್‌ಇನ್ಫೊಗೆ ತಿಳಿಸಿದರು.
ಇದಕ್ಕೂ ಮೊದಲು, ಎಲ್‌ಎಸ್‌ಜಿ ವಿರುದ್ಧದ ಗೆಲುವಿನಿಂದ ಆರ್‌ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ 1ಕ್ಕೆ ಪ್ರವೇಶ ಪಡೆದ ನಂತರ, ಡಿವಿಲಿಯರ್ಸ್ ಈ ವರ್ಷ ಆರ್‌ಸಿಬಿಯ ಯಶಸ್ಸಿನ ಹಿಂದಿನ ಕಾರಣಗಳನ್ನು ವಿವರಿಸಿದ್ದರು.
ಈ ಆವೃತ್ತಿಯಲ್ಲಿ ನನಗೆ ಅತ್ಯಂತ ರೋಮಾಂಚನಕಾರಿ ಸಂಗತಿಯೆಂದರೆ, ಒಬ್ಬ ಅಥವಾ ಇಬ್ಬರು ಆಟಗಾರರಲ್ಲ, ತಂಡದ ಆಟಗಾರರೆಲ್ಲರೂ ವಿನ್ನಿಂಗ್ ನಾಕ್ ನೀಡುತ್ತಿದ್ದಾರೆ. ಇದು ಕೇವಲ ಸಾಮಾನ್ಯ ವಿರಾಟ್ ಕೊಹ್ಲಿ ಅಥವಾ ಹಿಂದಿನ ಕಾಲದ ಕ್ರಿಸ್ ಗೇಲ್ ಮಾತ್ರವಲ್ಲ. ಇಡೀ ತಂಡವು ಒತ್ತಡದಲ್ಲಿಯೂ ಉತ್ತಮವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ' ಎಂದು ಹೇಳಿದರು.
Advertisement