
ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ 20 ರನ್‌ಗಳಿಂದ ಸೋತ ಗುಜರಾತ್ ಟೈಟಾನ್ಸ್ (GT) ತಂಡ ಐಪಿಎಲ್ 2025 ರಿಂದ ಹೊರಬಿತ್ತು. 229 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡವು ಸಾಯಿ ಸುದರ್ಶನ್ ಅವರ ಅದ್ಭುತ ಬ್ಯಾಟಿಂಗ್‌ನಿಂದಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಜಿಟಿ ತಂಡಕ್ಕೆ ಸೋಲುಂಟಾಗಿದ್ದು ಜಿಟಿ ಆಟಗಾರರ ಕೆಲವು ಕುಟುಂಬ ಸದಸ್ಯರು ಮತ್ತು ಸಿಬ್ಬಂದಿಗೆ ನುಂಗಲಾರದ ತುತ್ತಾಗಿತ್ತು. ಪಂದ್ಯ ಮುಗಿದ ನಂತರ, ಮುಖ್ಯ ಕೋಚ್ ಆಶಿಶ್ ನೆಹ್ರಾ ಅವರ ಮಗ ಮತ್ತು ಶುಭಮನ್ ಗಿಲ್ ಅವರ ಸಹೋದರಿ ಸ್ಟ್ಯಾಂಡ್‌ಗಳಲ್ಲಿ ಅಳುತ್ತಿರುವುದು ಕಂಡುಬಂತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 18ನೇ ಆವೃತ್ತಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಗುಜರಾತ್ ಟೈಟಾನ್ಸ್ ಎಲಿಮಿನೇಟರ್‌ನಲ್ಲಿ ಹೀನಾಯ ಸೋಲು ಕಂಡಿತು.
ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಗುಜರಾತ್ ತಂಡವನ್ನು 20 ರನ್‌ಗಳ ಅಂತರದಿಂದ ಸೋಲಿಸಿತು. ಆರಂಭದಲ್ಲಿ ಸಾಯಿ ಸುದರ್ಶನ್ ಅವರ ಪ್ರದರ್ಶನದಿಂದ ಗುಜರಾತ್ ತಂಡದ ಕಡೆಗೆ ಗೆಲುವು ಎನ್ನುತ್ತಿರುವಾಗಲೇ ಅವರು ಔಟಾದ ನಂತರ ಪಂದ್ಯ ಸಂಪೂರ್ಣವಾಗಿ ಮುಂಬೈ ಗೆಲುವಿನ ಕಡೆಗೆ ತಿರುಗಿತು.
ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ಭಾನುವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಆ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ.
ಗುಜರಾತ್ ತಂಡದ ಕಳಪೆ ಫೀಲ್ಡಿಂಗ್ ಸೋಲಲು ಕಾರಣ. ರೋಹಿತ್ ಶರ್ಮಾ ಅವರನ್ನು ಔಟ್ ಮಾಡುವ ಎರಡೆರಡು ಅವಕಾಶವನ್ನು ಜಿಟಿ ಕೈಚೆಲ್ಲಿತ್ತು.
ಜೋಸ್ ಬಟ್ಲರ್ ಬದಲಿಯಾಗಿ ಆಯ್ಕೆಯಾದ ಕುಶಾಲ್ ಮೆಂಡಿಸ್, 12ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಕೈಚೆಲ್ಲುವ ಮೂಲಕ ಗೆಲುವಿನಿಂದ ಒಂದು ಹೆಜ್ಜೆ ದೂರ ಸರಿದರು. ಕೊನೆಗೆ 5 ವಿಕೆಟ್ ನಷ್ಟಕ್ಕೆ ಮುಂಬೈ ತಂಡ 228 ರನ್ ಗಳಿಸಲು ಸಾಧ್ಯವಾಯಿತು.
Advertisement