Amanjot Kaur's Magical Catch That Turned Women's World Cup Final
ಅಮನ್​ಜೋತ್ ಕೌರ್ ಹಿಡಿದ ಕ್ಯಾಚ್

ಮಹಿಳಾ ವಿಶ್ವಕಪ್ ಫೈನಲ್: ದಕ್ಷಿಣ ಆಫ್ರಿಕಾದಿಂದ ಗೆಲುವನ್ನು ಕಸಿದದ್ದು ಇದೇ ಅದ್ಭುತ ಕ್ಯಾಚ್! Video

ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 52 ರನ್ ಗಳ ಅಂತರದ ಜಯ ದಾಖಲಿಸಿ ತನ್ನ ಚೊಚ್ಚಲ ವಿಶ್ವಕಪ್ ಜಯಿಸಿದೆ.
Published on

ಮುಂಬೈ: ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಈ ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 52 ರನ್ ಗಳ ಅಂತರದ ಜಯ ದಾಖಲಿಸಿ ತನ್ನ ಚೊಚ್ಚಲ ವಿಶ್ವಕಪ್ ಜಯಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಟೀಮ್ ಇಂಡಿಯಾವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 298 ರನ್ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.

Amanjot Kaur's Magical Catch That Turned Women's World Cup Final
ಇತಿಹಾಸ ಬರೆದ ಭಾರತ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ಮಹಿಳಾ ಪಡೆ; ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ

ಭಾರತದ ಗೆಲವಿಗೆ ಅಡ್ಡಿಯಾಗಿದ್ದ ಲಾರಾ ವೋಲ್ವಾರ್ಡ್ತ್

ಇನ್ನು ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಆರಂಭ ಪಡೆಯಿತು. ನಾಯಕಿ ಲಾರಾ ವೋಲ್ವಾರ್ಡ್ತ್ ಶತಕ ಸಿಡಿಸಿ ಭಾರತದ ಗೆಲುವಿಗೆ ಅಕ್ಷರಶಃ ಅಡ್ಡಿಯಾಗಿದ್ದರು. ಮೊದಲ ಓವರ್​ನಿಂದಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಾರಾ 98 ಎಸೆತಗಳಲ್ಲಿ ಶತಕ ಪೂರೈಸಿದರು.

ಪರಿಣಾಮ 39 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 200ರ ಗಡಿದಾಟಿತು. ಅತ್ತ ಕ್ರೀಸ್​ನಲ್ಲಿ ಲಾರಾ ವೋಲ್ವಾರ್ಡ್ ಇದ್ದ ಕಾರಣ ಸೌತ್ ಆಫ್ರಿಕಾ ತಂಡ ಗೆಲುವು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ವಿರೋಚಿತ ರೀತಿಯಲ್ಲಿ ವಿಕೆಟ್ ಕೈ ಚೆಲ್ಲಿದರು.

ಆಫ್ರಿಕಾದಿಂದ ಗೆಲುವು ಕಸಿದ ಅದ್ಭುತ ಕ್ಯಾಚ್

ಈ ಹಂತದಲ್ಲಿ ಅಂದರೆ ಆಫ್ರಿಕಾ ಇನ್ನಿಂಗ್ಸ್ ನ 42ನೇ ಓವರ್​ನ ಮೊದಲ ಎಸೆತದಲ್ಲಿ ಲಾರಾ ವೋಲ್ವಾರ್ಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೈಚೆಲ್ಲಿದರು. ದೀಪ್ತಿ ಶರ್ಮಾ ಎಸೆದ 42ನೇ ಓವರ್​ನ ಮೊದಲ ಎಸೆತದಲ್ಲಿ ಲಾರಾ ವೋಲ್ವಾರ್ಡ್ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿಯಾಗಿ ಬಾರಿಸಿದರು. ಅತ್ತ ಕಡೆ ಬೌಂಡರಿ ಲೈನ್​​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಅಮನ್​ಜೋತ್ ಕೌರ್ ಓಡಿ ಬಂದು ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿದ್ದರು.

ಆದರೆ ಚೆಂಡು ಅಮನ್​ಜೋತ್ ಕೌರ್​ ಕೈಯಿಂದ ಜಾರಿತು. ತಕ್ಷಣವೇ ಎರಡನೇ ಬಾರಿ ಹಿಡಿಯುವ ಪ್ರಯತ್ನ ಮಾಡಿದರು. ಈ ವೇಳೆಯೂ ಚೆಂಡನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇನ್ನೇನು ಬಾಲ್ ನೆಲಕ್ಕುರಳಲಿದೆ ಅನ್ನುವಷ್ಟರಲ್ಲಿ ಅಮನ್​ಜೋತ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.

Amanjot Kaur's Magical Catch That Turned Women's World Cup Final
Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರ ತಂಡಕ್ಕೆ BCCI ಬಹುಮಾನ ಘೋಷಣೆ; ಮೊತ್ತ ಎಷ್ಟು ಗೊತ್ತಾ?

ದಿಢೀರ್ ಪತನ ಕಂಡ ಆಫ್ರಿಕಾ

ಈ ಒಂದು ಕ್ಯಾಚ್​ನಿಂದ ಇಡೀ ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಲಾರಾ ವೋಲ್ವಾರ್ಡ್ (101) ವಿಕೆಟ್ ಪತನದೊಂದಿಗೆ ಒತ್ತಡಕ್ಕೆ ಸಿಲುಕಿದ ಸೌತ್ ಆಫ್ರಿಕಾ ತಂಡವು 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ 52 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com