

ಮುಂಬೈ: ಭಾನುವಾರ ನಡೆದ 2025ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.
ಸತತ ಮೂರು ಸೋಲುಗಳ ಬಳಿಕ ಟೀಂ ಇಂಡಿಯಾ ಟೂರ್ನಿಯಿಂದಲೇ ಹೊರಬೀಳುವ ಆತಂಕವಿತ್ತು. ಆದರೆ ಭಾರತ ಮಹಿಳಾ ತಂಡ ಭರ್ಜರಿ ಕಮ್ ಬ್ಯಾಕ್ ಮಾಡಿ ಸೆಮೀಸ್ ಲಗ್ಗೆ ಇಟ್ಟಿತ್ತು.
ಸೆಮಿ ಫೈನಲ್ ನಲ್ಲಿ ಕೂಡ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದ್ಫುತ ಚೇಸಿಂಗ್ ಮಾಡಿ ಫೈನಲ್ ಗೇರಿತ್ತು. ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನೂ ಮಣಿಸಿ ಭಾರತ ತಂಡ ತನ್ನ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದೆ.
ಜಯ್ ಶಾ ಕಾಲಿಗೆರಗಿದ ಹರ್ಮನ್ ಪ್ರೀತ್ ಕೌರ್
ಇನ್ನು ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಸ್ವೀಕಾರ ವೇಳೆ ಹರ್ಮನ್ ಪ್ರೀತ್ ಕೌರ್ ಐಸಿಸಿ ಅಧ್ಯಕ್ಷ ಜಯ್ ಶಾ ಕಾಲಿಗೆರಗಿದ ಘಟನೆ ಕೂಡ ನಡೆಯಿತು. ವಾಡಿಕೆಯಂತೆ ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಶಸ್ತಿ ನೀಡಲು ವೇದಿಕೆಯ ಮೇಲಿದ್ದರು. ಈ ವೇಳೆ ಪ್ರಶಸ್ತಿ ಸ್ವೀಕಾರಕ್ಕೆ ಬಂದ ಹರ್ಮನ್ ಪ್ರೀತ್ ಕೌರ್, ಜಯ್ ಶಾ ಅವರ ಕೈ ಕುಲುಕಿ ಬಳಿಕ ಕಾಲಿಗೆರಗಿದರು.
ಜಯ್ ಶಾ ಪ್ರತಿಕ್ರಿಯೆಗೆ ವ್ಯಾಪಕ ಶ್ಲಾಘನೆ!
ಅತ್ತ ಹರ್ಮನ್ ಪ್ರೀತ್ ಕಾಲಿಗೆರಗಲು ಮುಂದಾಗುತ್ತಿದ್ದಂತೆಯೇ ಅವರನ್ನು ತಡೆದ ಜಯ್ ಶಾ ಅವರೂ ಕೂಡ ಬಗ್ಗಿ ಕಾಲಿಗೆ ಬೀಳದಂತೆ ಮನವಿ ಮಾಡಿದರು.
ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಬೆಳವಣಿಗೆಯಲ್ಲಿ ಜಯ್ ಶಾ ದೊಡ್ಡ ಪಾತ್ರ ವಹಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ, ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಸುಧಾರಣೆಗಳಿಗೆ ಶಾ ಕಾರಣರಾಗಿದ್ದಾರೆ.
ಇದರಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಸಹ ಆಟಗಾರರಂತೆಯೇ ಪಂದ್ಯ ಶುಲ್ಕವನ್ನು ಖಾತರಿಪಡಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ವೇತನ ಸಮಾನತೆಯನ್ನು ತರುವ ಮಹತ್ವದ ನಿರ್ಧಾರ ಕೈಗೊಂಡಿದ್ದರು.
Advertisement