Video: 'ತಂಡದ ಸೋಲಿಗೆ ನೀವೇ ಕಾರಣ'; ವಿಶ್ವಕಪ್ ಸೋಲಿನ ಬಳಿಕ ಸ್ವಂತ ದೇಶವನ್ನೇ ತೆಗಳಿದ ಆಫ್ರಿಕನ್ ನಟಿ Thanja

ನಿನ್ನೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 52 ರನ್ ಗಳ ಅಂತರದಲ್ಲಿ ಸೋಲಿಸಿತ್ತು.
South African actress and writer Thanja Vuur
ದಕ್ಷಿಣ ಆಫ್ರಿಕಾ ತಂಡ ಮತ್ತು ನಟಿ ತಂಜಾ ವೂರ್
Updated on

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋಲಿಗೆ ಆಫ್ರಿಕನ್ ನಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 52 ರನ್ ಗಳ ಅಂತರದಲ್ಲಿ ಸೋಲಿಸಿತ್ತು.

ಭಾರತ ನೀಡಿದ್ದ 299 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಭಾರತ ಬರೊಬ್ಬರಿ 52 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ತನ್ನದೇ ಸ್ವಂತ ದೇಶವನ್ನು ಟೀಕಿಸಿದ ಆಫ್ರಿಕನ್ ನಟಿ

ಇನ್ನು ಭಾರತದ ನೆಲದಲ್ಲಿ ಆಫ್ರಿಕಾ ತಂಡ ಸೋತಿದ್ದಕ್ಕೆ ಆಫ್ರಿಕನ್ ನಟಿ Thanja Vuur ಪ್ರತಿಕ್ರಿಯಿಸಿದ್ದು, ತಂಡದ ಸೋಲಿಗೆ ನಮ್ಮ ದೇಶದ ಪ್ರಜೆಗಳೇ ಕಾರಣ ಎಂದು ಕಿಡಿಕಾರಿದ್ದಾರೆ. ತಮ್ಮನ್ನು ತಾವು "ಕ್ರಿಕೆಟ್ ನರ್ಡ್" ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ದಕ್ಷಿಣ ಆಫ್ರಿಕಾದ ನಟಿ ಮತ್ತು ಬರಹಗಾರ್ತಿ ತಂಜಾ ವೂರ್, ಆಫ್ರಿಕಾ ತಂಡದ ಸೋಲಿಗೆ ಆಫ್ರಿಕನ್ನರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್ ಸಮಯದಲ್ಲಿ ತಮ್ಮ ಮಹಿಳಾ ಕ್ರಿಕೆಟ್ ತಂಡವನ್ನು ಬೆಂಬಲಿಸದ ದಕ್ಷಿಣ ಆಫ್ರಿಕನ್ನರನ್ನು ನಟಿ ತಂಜಾ ಟೀಕಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಕ್ರೀಡೆಯ ಮೇಲಿನ ಭಾರತೀಯರ ಪ್ರೀತಿ ಮತ್ತು ಆನ್‌ಲೈನ್ ಮತ್ತು ಸ್ಟ್ಯಾಂಡ್‌ಗಳಲ್ಲಿ ಮಹಿಳಾ ತಂಡಕ್ಕೆ ಅವರ ಗೋಚರ ಬೆಂಬಲಕ್ಕಾಗಿ ವೂರ್ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಶ್ಲಾಘಿಸಿದ್ದಾರೆ.

South African actress and writer Thanja Vuur
ICC ಮಹಿಳಾ ಏಕದಿನ ವಿಶ್ವಕಪ್ 2025: ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್; Video

"ಭಾರತ, ನೀವು ಈ ವಿಶ್ವಕಪ್ ಗೆದ್ದಿದ್ದೀರಿ. ನಿಮಗೆ ಅಭಿನಂದನೆಗಳು. ನನಗೆ ಕೆಲವು ನಿಮಿಷಗಳನ್ನು ನೀಡಿ ಏಕೆಂದರೆ ಮೊದಲು ನಾನು ನಿಮಗೆ ಏಕೆ ಎಂದು ಹೇಳುತ್ತೇನೆ. ಕಾರಣ ನೀವೇ.. ಸ್ಮೃತಿ ಮಂಧಾನ ಮತ್ತು ಹುಡುಗಿಯರು ತುಂಬಾ ಶ್ರಮಿಸಿದರು. ಅವರು ತುಂಬಾ ಚೆನ್ನಾಗಿ ಆಡಿದರು ಎಂದರು.

'ಭಾರತೀಯ ಅಭಿಮಾನಿಗಳ ನಂಬಿಕೆ ಮತ್ತು ಶಕ್ತಿಯನ್ನು ಹೊಗಳಿದ ವೂರ್, 'ಇದು ಟೀಮ್ ಇಂಡಿಯಾವನ್ನು ಗೆಲುವಿಗೆ ಪ್ರೇರೇಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನೀವು ಈ ಕ್ರೀಡೆಯನ್ನು ಬದುಕುತ್ತೀರಿ ಮತ್ತು ಉಸಿರಾಡುತ್ತೀರಿ... ಇದು ಉಪಾಹಾರ, ಇದು ಮಧ್ಯಾಹ್ನದ ಊಟ, ಇದು ರಾತ್ರಿಯ ಊಟ. ನೀವು ಈ ವಿಶ್ವಕಪ್‌ನ ವಿಜೇತರು. ಮತ್ತು ನಿಮಗೆ ಏನು ಗೊತ್ತು? ನೀವು ಅದಕ್ಕೆ ಅರ್ಹರು" ಎಂದು ಅವರು ಭಾರತೀಯ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದರು.

ಆಫ್ರಿಕನ್ನರ ವಿರುದ್ಧ ಕಿಡಿ

ಇದೇ ವೇಳೆ ತಮ್ಮ ಸ್ವಂತ ದೇಶದವರ ವಿರುದ್ಧ ಕಿಡಿಕಾರಿದ ತಂಜಾ, 'ಭಾರತ ತಂಡವನ್ನು ಬೆಂಬಲಿಸಲು ಕ್ರೀಡಾಂಗಣದಾದ್ಯಂತ ಭಾರತೀಯ ಅಭಿಮಾನಿಗಳು ನೆರೆದಿದ್ದರು. ಆದರೆ ದಕ್ಷಿಣ ಆಫ್ರಿಕಾ ತಂಡವನ್ನು ಬೆಂಬಲಿಸಲು ಆಫ್ರಿಕಾದಿಂದ ಯಾರು ಬಂದರು? ಎಂದು ಕಿಡಿಕಾರಿದ್ದಾರೆ.

ಆಫ್ರಿಕನ್ ಮಾಜಿ ಆಟಗಾರರ ವಿರುದ್ಧವೂ ತಂಜಾ ಅಸಮಾಧಾನ

ಕೇವಲ ಆಫ್ರಿಕಾದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರ ವಿರುದ್ಧವೂ ತಂಜಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಭಾರತ ತಂಡಕ್ಕೆ ಬೆಂಬಲ ನೀಡಲು ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವಿವಿಎಸ್ ಲಕ್ಷ್ಮಣ್ ಸೇರಿದಂತೆ ಭಾರತೀಯ ಕ್ರಿಕೆಟ್ ದಂತಕಥೆಗಳು ಮಹಿಳಾ ಕ್ರಿಕೆಟಿಗರನ್ನು ಹುರಿದುಂಬಿಸಲು ಕ್ರೀಡಾಂಗಣದಲ್ಲಿ ಹೇಗೆ ಬಂದರು. ಆದರೆ ದಕ್ಷಿಣ ಆಫ್ರಿಕಾದ ಐಕಾನ್‌ಗಳಿಂದ ಇದೇ ರೀತಿಯ ಬೆಂಬಲದ ಕೊರತೆ ಯಾಕಾಯಿತು. ದಕ್ಷಿಣ ಆಫ್ರಿಕಾದಿಂದ ಯಾರು ಬಂದರು? ಎಂದು ತಂಜಾ ಪ್ರಶ್ನಿಸಿದ್ದಾರೆ.

ಅಲ್ಲದೆ 'ನೀವು ಪ್ರೀತಿಸುವ ದಕ್ಷಿಣ ಆಫ್ರಿಕಾದ ಈ ಮಾಜಿ ಕ್ರಿಕೆಟ್ ಆಟಗಾರರು, ಪುರುಷರು... ಅವರು ಎಲ್ಲಿದ್ದರು? ಓಹ್, ಈ ಕಾರ್ಯಕ್ರಮವು ಅವರಿಗೆ ಸಾಕಷ್ಟು ಹೈ ಪ್ರೊಫೈಲ್ ಆಗಿರಲಿಲ್ಲ" ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಮಹಿಳಾ ಕ್ರೀಡೆಗಳ ಬಗ್ಗೆ ತಮ್ಮ ದೇಶದ ಮನೋಭಾವವನ್ನು ಪ್ರಶ್ನಿಸಿದ ನಟಿ, ಕ್ರೀಡಾ ಸಚಿವರು ಸಹ ಈ ಪಂದ್ಯಕ್ಕೆ ಹಾಜರಾಗದಿರುವುದು ನಿರಾಶೆ ತಂದಿದೆ. ಆದರೆ ಈ ಜನರಲ್ಲಿ ಯಾರೂ ಬರದಿದ್ದಾಗ ಹೇಗನಿಸುತ್ತದೆ? ನಾವು ಸೋಲುತ್ತೇವೆ ಎಂದು ಅವರು ಭಾವಿಸಿದ್ದಾರೆಯೇ? ಅವರು ಕಳುಹಿಸುತ್ತಿರುವ ಸಂದೇಶ ಅದುವೇ?" ಎಂದು ತಂಜಾ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com