ಭಾರತಕ್ಕೆ ಚೊಚ್ಚಲ ಪ್ರಶಸ್ತಿ: ದಕ್ಷಿಣ ಆಫ್ರಿಕಾ ಆಟಗಾರರ ಸಂತೈಸಿದ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್!

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ತಮ್ಮ ಚೊಚ್ಚಲ ODI ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆದರೆ, ಭಾರತ ತಂಡವು ಅದ್ಭುತ ಗೆಲುವು ಕಂಡಿತು.
Smriti Mandhana, Jemimah Rodrigues' Gesture For South Africa Players Wins Hearts
ಪಂದ್ಯದ ಬಳಿಕ ದಕ್ಷಿಣ ಆಫ್ರಿಕಾ ಆಟಗಾರ್ತಿಯರನ್ನು ಸಂತೈಸಿದ ಜೆಮಿಮಾ ಮತ್ತು ಸ್ಮೃತಿ ಮಂಧಾನ
Updated on

ಕ್ರೀಡೆ ಅಂದಮೇಲೆ ಒಬ್ಬರು ಸೋಲು ಮತ್ತೊಬ್ಬರ ಗೆಲುವು ಸಾಮಾನ್ಯ. ಆದರೆ, ಗೆದ್ದಾಗಲೂ ಬೀಗದೆ ಎದುರಾಳಿ ತಂಡದ ಆಟಗಾರರೊಂದಿಗೆ ನಿಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವೂ ಪಾಲಿಸಲು ಪ್ರಯತ್ನಿಸುವ ಧ್ಯೇಯವಾಕ್ಯ. ಭಾನುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಕೂಡ ಇದೇ ರೀತಿಯ ಮನೋಭಾವವನ್ನು ತೋರಿಸಿತು.

ಭಾರತೀಯ ಆಟಗಾರ್ತಿಯರು ಚೊಚ್ಚಲ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆ ಬಳಿಕ, ಎದೆಗುಂದಿದ ದಕ್ಷಿಣ ಆಫ್ರಿಕಾದ ಆಟಗಾರ್ತಿಯರ ಬೆಂಬಲಕ್ಕೆ ನಿಂತರು. ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್ ಮತ್ತು ರಾಧಾ ಯಾದವ್ ಸೇರಿದಂತೆ ಭಾರತೀಯ ಆಟಗಾರ್ತಿಯರು ತಮ್ಮ ತಂಡದ ಆಚರಣೆಗಳಿಂದ ಹೊರಬಂದು, ದುಃಖಿಸುತ್ತಿದ್ದ ದಕ್ಷಿಣ ಆಫ್ರಿಕಾದ ತಾರೆಯರನ್ನು ಸಮಾಧಾನಪಡಿಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ಚಿತ್ರಗಳಲ್ಲಿ, ಭಾರತೀಯ ಜೋಡಿ ದಕ್ಷಿಣ ಆಫ್ರಿಕಾದ ಮಾರಿಜಾನ್ನೆ ಕಾಪ್, ಲಾರಾ ವೋಲ್ವಾರ್ಡ್ ಮತ್ತು ಇತರ ಕೆಲವರನ್ನು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು.

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ತಮ್ಮ ಚೊಚ್ಚಲ ODI ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆದರೆ, ಭಾರತ ತಂಡವು ಅದ್ಭುತ ಗೆಲುವು ಕಂಡಿತು. ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ತಂಡಕ್ಕೆ 52 ರನ್‌ಗಳ ಗೆಲುವು ತಂದುಕೊಟ್ಟಿದ್ದರಿಂದ ಭಾರತ ಇತಿಹಾಸದ ಪುಸ್ತಕಗಳಲ್ಲಿ ತನ್ನ ಹೆಸರನ್ನು ದಾಖಲಿಸಿತು. ಆದಾಗ್ಯೂ, ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ಟ್ ತಮ್ಮ ತಂಡವು ಟೂರ್ನಿಯಲ್ಲಿ ಇಲ್ಲಿಯವರೆಗೆ ಬರಲು ತೋರಿಸಿದ ಹೋರಾಟದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

'ನಮ್ಮ ಅಭಿಯಾನದಲ್ಲಿ ಈ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಇಡೀ ಪಂದ್ಯದಲ್ಲಿ ಅದ್ಭುತ ಕ್ರಿಕೆಟ್ ಆಡಿದೆವು. ಆದರೆ, ಇಂದು ಭಾರತ ಅತ್ಯುತ್ತಮ ಪ್ರದರ್ಶನ ನೀಡಿತು. ಸೋಲಿನ ತಂಡದಲ್ಲಿ ಇರುವುದು ದುರದೃಷ್ಟಕರ. ಆದರೆ, ನಾವು ಖಂಡಿತವಾಗಿಯೂ ಇದರಿಂದ ಬೆಳೆಯುತ್ತೇವೆ. ನಾವು ಆ ಎರಡು ಕೆಟ್ಟ ಪಂದ್ಯಗಳಿಂದ (ಆಸ್ಟ್ರೇಲಿಯಾ ವಿರುದ್ಧ 69ಕ್ಕೆ ಆಲೌಟ್ ಮತ್ತು 97ಕ್ಕೆ ಆಲೌಟ್ ನಂತರ) ಬೌನ್ಸ್ ಬ್ಯಾಕ್ ಆಗಿದ್ದೆವು' ಎಂದು ದಕ್ಷಿಣ ಆಫ್ರಿಕಾದ ನಾಯಕಿ ತಿಳಿಸಿದರು.

'ಹಲವು ಆಟಗಾರರಿಗೆ ಅದ್ಭುತವಾದ ಟೂರ್ನಮೆಂಟ್ ಮತ್ತು ನಾವು ತೋರಿಸಿದ ಸ್ಥಿತಿಸ್ಥಾಪಕತ್ವದ ಬಗ್ಗೆ ಹೆಮ್ಮೆಪಡುತ್ತೇನೆ. ಅತಿಯಾಗಿ ಯೋಚಿಸಿದರೆ, ಅದು ಒಳ್ಳೆಯದಲ್ಲ. ಇದು ಕ್ರಿಕೆಟ್‌ನ ಮತ್ತೊಂದು ಆಟ, ಎರಡನ್ನೂ ಬೇರ್ಪಡಿಸಲು ಪ್ರಯತ್ನಿಸಿದೆ. ಅದು ನನ್ನ ನೈಸರ್ಗಿಕ ಆಟವನ್ನು ಆಡಲು ಮತ್ತು ನಂತರ ಬೇರೆ ಸಮಯದಲ್ಲಿ ನಾಯಕತ್ವದ ಮೇಲೆ ಕೇಂದ್ರೀಕರಿಸಲು ನನ್ನನ್ನು ಸ್ವಲ್ಪ ಮುಕ್ತಗೊಳಿಸಿತು' ಎಂದು ಪಂದ್ಯದ ನಂತರ ವೋಲ್ವಾರ್ಡ್ ಹೇಳಿದರು.

Smriti Mandhana, Jemimah Rodrigues' Gesture For South Africa Players Wins Hearts
Cricket: ವಿಶ್ವ ಚಾಂಪಿಯನ್ ಭಾರತ ವನಿತೆಯರ ತಂಡಕ್ಕೆ BCCI ಬಹುಮಾನ ಘೋಷಣೆ; ಮೊತ್ತ ಎಷ್ಟು ಗೊತ್ತಾ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com