ಡಬ್ಲ್ಯುಪಿಎಲ್‌ಗೆ ಶೀಘ್ರದಲ್ಲೇ ಮತ್ತೊಂದು ಹೊಸ ತಂಡ ಸೇರ್ಪಡೆ; ಟೀಂ ಇಂಡಿಯಾ ಮಾಜಿ ಆಟಗಾರ್ತಿ ಬಹಿರಂಗ!

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಐದು ತಂಡಗಳಿರುವುದರಿಂದ ಅನೇಕ ಉತ್ತಮ ಆಟಗಾರ್ತಿಯರು ಅವಕಾಶದಿಂದ ವಂಚಿತರಾದರು ಎಂದು ನನಗೆ ಅನಿಸಿತು. ಶೀಘ್ರದಲ್ಲೇ ಹೊಸ ತಂಡ ಸೇರ್ಪಡೆಯಾಗಲಿರುವುದು ಸಂತೋಷದ ಸುದ್ದಿ.
TATA WPL
ಡಬ್ಲ್ಯುಪಿಎಲ್
Updated on

2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಜಯಗಳಿಸಿದ ನಂತರ, ಮಹಿಳಾ ಪ್ರೀಮಿಯರ್ ಲೀಗ್ (WPL) ಐದು ತಂಡಗಳಿಗಿಂತ ಹೆಚ್ಚು ಇರಬೇಕೆಂದು ಅನೇಕ ಜನರು ಭಾವಿಸಿದ್ದರು. ಕೆಲವು ಉತ್ಸಾಹಿ ಅಭಿಮಾನಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026 ಅಥವಾ 2027ರ ಆರಂಭದಲ್ಲಿ ಆರನೇ ತಂಡವನ್ನು ಸೇರಿಸುತ್ತದೆ ಎಂದು ಆಶಿಸಿದರು.

ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ಮತ್ತು 2017ರ ಮಹಿಳಾ ವಿಶ್ವಕಪ್ ಫೈನಲಿಸ್ಟ್ ವೇದಾ ಕೃಷ್ಣಮೂರ್ತಿ ಈ ಬಗ್ಗೆ ಮಾಹಿತಿ ನೀಡಿದ್ದು, WPL ನಲ್ಲಿ ಆರನೇ ತಂಡದ ಸೇರ್ಪಡೆಯು 2028ಕ್ಕೆ ಸಾಧ್ಯವಾಗಬಹುದು ಎಂದಿದ್ದಾರೆ. ಶನಿವಾರ ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ, ಅವರು ಅದರ ಬಗ್ಗೆ ದೀರ್ಘವಾಗಿ ಮಾತನಾಡಿದ್ದಾರೆ.

'ಡಬ್ಲ್ಯುಪಿಎಲ್‌ನಲ್ಲಿ ಆರನೇ ತಂಡ, ನೀವು ಸರಿಯಾಗಿ ಕೇಳಿದ್ದೀರಿ. WPLಗೆ ಹೊಸ ತಂಡ ಸೇರ್ಪಡೆಯಾಗಲಿದೆ ಆದರೆ, ಅದು ಈ ವರ್ಷ ಅಲ್ಲ. 2028ರಲ್ಲಿ ಸಾಧ್ಯವಾಗಲಿದೆ. ನವೆಂಬರ್ 27 ರಂದು ನಡೆಯಲಿರುವ ಈ ಮೆಗಾ ಹರಾಜಿನ ಚಕ್ರವು ಕೇವಲ ಎರಡು ವರ್ಷಗಳವರೆಗೆ ಇರುತ್ತದೆ' ಎಂದಿದ್ದಾರೆ.

'ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೇವಲ ಐದು ತಂಡಗಳಿರುವುದರಿಂದ ಅನೇಕ ಉತ್ತಮ ಆಟಗಾರ್ತಿಯರು ಅವಕಾಶದಿಂದ ವಂಚಿತರಾದರು ಎಂದು ನನಗೆ ಅನಿಸಿತು. ಶೀಘ್ರದಲ್ಲೇ ಹೊಸ ತಂಡ ಸೇರ್ಪಡೆಯಾಗಲಿರುವುದು ಸಂತೋಷದ ಸುದ್ದಿ. ಐಪಿಎಲ್ ಮೆಗಾ ಹರಾಜಿನ ಜೊತೆಗೆ ಈ ಬದಲಾವಣೆ ಸಂಭವಿಸಲಿದೆ ಮತ್ತು ಲೀಗ್‌ಗೆ ಹೊಸ ಮೂರು ವರ್ಷಗಳ ಚಕ್ರವು 2028ರಲ್ಲಿ ಪ್ರಾರಂಭವಾಗುತ್ತದೆ' ಎಂದು 33 ವರ್ಷದ ಆಟಗಾರ್ತಿ ಹೇಳಿದರು.

TATA WPL
WPL 2026: ಮೆಗಾ ಹರಾಜು ದಿನಾಂಕ ದೃಢಪಡಿಸಿದ BCCI; ದೆಹಲಿಯಲ್ಲಿ ಫ್ರಾಂಚೈಸಿಗಳ ಸೆಣಸಾಟ!

ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ ಎಂಬುದು ನಿಜ. ಆದರೆ, 2028 ರಲ್ಲಿ WPL ನಲ್ಲಿ ಹೊಸ ತಂಡ ಸೇರ್ಪಡೆಯಾಗುವುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈಮಧ್ಯೆ, ಕೇವಲ ಎರಡು ದಿನಗಳ ಹಿಂದೆ, ಎಲ್ಲ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಲಿಸ್ಟ್ ಅನ್ನು ಘೋಷಿಸಿವೆ. ಅತ್ಯಂತ ಆಘಾತಕಾರಿ ವಿಚಾರವೆಂದರೆ, ಯುಪಿ ವಾರಿಯರ್ಸ್ ತಂಡವು ನಾಯಕಿಯಾಗಿದ್ದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಕೈಬಿಟ್ಟಿದೆ.

ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರಂತಹ ಆಟಗಾರರನ್ನು ಅವರವರ ತಂಡಗಳು ಉಳಿಸಿಕೊಂಡಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಉಳಿಸಿಕೊಂಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com