

ಸ್ವಲ್ಪ ವಿಳಂಬದ ನಂತರ, 2026ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ದಿನಾಂಕವನ್ನು ಈಗ ದೃಢಪಡಿಸಲಾಗಿದೆ. WPL ಹರಾಜು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದ್ದು, ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಈ ಬಗ್ಗೆ ತಿಳಿಸಿದೆ ಎಂದು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ. ಹರಾಜು ಕಾರ್ಯಕ್ರಮವು ನಗರದ ವಿಮಾನ ನಿಲ್ದಾಣದ ಸಮೀಪವಿರುವ ಏರೋಸಿಟಿಯಲ್ಲಿರುವ ಹೋಟೆಲ್‌ನಲ್ಲಿ ನಡೆಯಲಿದೆ.
WPL 2026ನೇ ಆವೃತ್ತಿಗೂ ಮುನ್ನ ಈ ವರ್ಷ ಮೆಗಾ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಮೊದಲಿನಿಂದ ಕಟ್ಟಬೇಕಾಗುತ್ತದೆ. ತಂಡಗಳಿಗೆ ಈಗಾಗಲೇ ತಿಳಿಸಲಾದ ನಿಯಮಗಳ ಪ್ರಕಾರ, ಅವರು ಗರಿಷ್ಠ ಐದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಗರಿಷ್ಠ ಅಥವಾ ಮೂರು ಕ್ಯಾಪ್ಡ್ ಭಾರತೀಯ ಆಟಗಾರರು ಮತ್ತು ಕನಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದು.
ಅಲ್ಲದೆ, ಒಂದು ತಂಡವು ಐವರನ್ನೂ ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡರೆ, ಅವರಲ್ಲಿ ಒಬ್ಬರು ಅನ್‌ಕ್ಯಾಪ್ಡ್ ಭಾರತೀಯ ಆಟಗಾರ್ತಿಯಾಗಿರಬೇಕು. ಈಮಧ್ಯೆ, ಉಳಿಸಿಕೊಳ್ಳುವ ಶುಲ್ಕ ರಚನೆಯನ್ನು ಸಹ ಘೋಷಿಸಲಾಗಿದೆ. ಹರಾಜು ಹಣವು ಪ್ರತಿ ತಂಡಕ್ಕೆ 15 ಕೋಟಿ ರೂ. ನಿಗದಿಪಡಿಸಲಾಗಿದೆ. ಅದರಲ್ಲಿ ಆಟಗಾರರ ಸ್ಲಾಬ್‌ಗಳು ಈ ಕೆಳಗಿನಂತಿವೆ. ಆಟಗಾರ 1 - 3.5 ಕೋಟಿ, ಆಟಗಾರ 2 - ₹2.5 ಕೋಟಿ, ಆಟಗಾರ 3 - ₹1.75 ಕೋಟಿ, ಆಟಗಾರ 4 - ₹1 ಕೋಟಿ ಮತ್ತು ಆಟಗಾರ 5 - ₹50 ಲಕ್ಷ.
ರಿಟೆನ್ಶನ್ ನಿಯಮಗಳು
ವರದಿಯಲ್ಲಿ ಹೇಳಿರುವ ನಿಯಮದ ಪ್ರಕಾರ, 'ಒಂದು ಫ್ರಾಂಚೈಸಿ ಐದು ಆಟಗಾರರನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿಕೊಂಡರೆ, ಪರ್ಸ್‌ನಿಂದ 9.25 ಕೋಟಿ ರೂ. ಕಡಿತಗೊಳ್ಳಲಿದೆ. ನಾಲ್ವರಿಗೆ 8.75 ಕೋಟಿ ರೂ., ಮೂವರಿಗೆ 7.75 ಕೋಟಿ ರೂ., ಇಬ್ಬರು ಆಟಗಾರರಾಗಿದ್ದರೆ 6 ಕೋಟಿ ರೂ. ಮತ್ತು ಒಬ್ಬರಿಗೆ 3.5 ಕೋಟಿ ರೂ. ಕಡಿತವಾಗಲಿದೆ'.
ಇದರ ಜೊತೆಗೆ, ಎಲ್ಲ ತಂಡಗಳು ಆರ್‌ಟಿಎಂಗಳ ಆಯ್ಕೆಯನ್ನು ಹೊಂದಿರುತ್ತವೆ. ಇದರಿಂದಾಗಿ ಅವರು ಹಿಂದಿನ ಆವೃತ್ತಿಯ ತಮ್ಮ ತಂಡಗಳ ಆಟಗಾರರನ್ನು ಉಳಿಸಿಕೊಳ್ಳಬಹುದು. ಆದರೆ ಇದು ದುಬಾರಿ ವ್ಯವಹಾರವೂ ಆಗಿರಬಹುದು, ಏಕೆಂದರೆ ಅವರು ಇನ್ನೂ ತಲಾ 10-11 ಆಟಗಾರರನ್ನು ಪಡೆಯಬೇಕಾಗಿದೆ.
Advertisement