ಮುಂಬರುವ ಐಪಿಎಲ್‌ನಲ್ಲಿ ರೋಹಿತ್ ಶರ್ಮಾಗೆ ಸವಾಲು, ವಿರಾಟ್ ಕೊಹ್ಲಿಗೆ ಹೋಲಿಸಿದರೆ...: ಮೊಹಮ್ಮದ್ ಕೈಫ್

ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಏಕದಿನ ಬ್ಯಾಟರ್ ಆಗಿದ್ದಾರೆ.
Rohit Sharma - Virat kohli
ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ
Updated on

ICC ODI Rankings: 18 ವರ್ಷಗಳ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ ರೋಹಿತ್ ಶರ್ಮಾ!ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ರೋಹಿತ್ ಶರ್ಮಾ ಅವರ ಮುಂದೆ ದೊಡ್ಡ ಸವಾಲು ಇದೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಹೇಳಿದ್ದಾರೆ. ರೋಹಿತ್ ಒಂದೇ ಒಂದು ಐಪಿಎಲ್ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿಯೇ ಇಲ್ಲ, 2013 ರಲ್ಲಿ ಅವರ ಅತ್ಯುತ್ತಮ ಪ್ರದರ್ಶನ 538 ರನ್ ಗಳಿಸಿದ್ದರು. ಹಲವಾರು ಪ್ರಮುಖ ದಾಖಲೆಗಳನ್ನು ಹೊಂದಿರುವ ಬ್ಯಾಟ್ಸ್‌ಮನ್‌ಗೆ ಇದು ಅಚ್ಚರಿಯ ಅಂಕಿ ಅಂಶವಾಗಿದೆ ಮತ್ತು ಹೊಸ ಆವೃತ್ತಿಯಲ್ಲಿ ರೋಹಿತ್ ಅವರಿಗೆ ಖಂಡಿತವಾಗಿಯೂ ಇದು ಸವಾಲಾಗಿ ಪರಿಣಮಿಸಲಿದೆ. 2025ರಲ್ಲಿ, ಮುಂಬೈ ಇಂಡಿಯನ್ಸ್ ಪರ ರೋಹಿತ್ 418 ರನ್ ಗಳಿಸಿದರು ಆದರೆ, ವಿರಾಟ್ ಕೊಹ್ಲಿಯಂತಹ ಆಟಗಾರರಿಗೆ ಹೋಲಿಸಿದರೆ ಅವರ ಸಂಖ್ಯೆಗಳು ತುಂಬಾ ಕಡಿಮೆ ಎಂದು ಕೈಫ್ ಹೇಳಿದರು.

'ನಾವು ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡುತ್ತೇವೆ. ಆದರೆ, ರೋಹಿತ್ ಶರ್ಮಾ ಒಂದು ಆವೃತ್ತಿಯಲ್ಲಿಯೂ 700-800 ರನ್ ಗಳಿಸಿಲ್ಲ. ಐಪಿಎಲ್‌ನಲ್ಲಿ, ಅವರು ನಾಯಕತ್ವ ಮತ್ತು ಅನುಭವಕ್ಕಾಗಿ ಅಂಕಗಳನ್ನು ಪಡೆಯುತ್ತಾರೆ. ಆದರೆ, ಅವರನ್ನು ವಿರಾಟ್ ಕೊಹ್ಲಿ ಅಥವಾ ಇತರ ಬ್ಯಾಟ್ಸ್‌ಮನ್‌ಗಳೊಂದಿಗೆ ಹೋಲಿಸಿದರೆ, ಅವರು 600-700 ರನ್ ಗಳಿಸುವುದಿಲ್ಲ. ಅವರು ಒಂದು ಅಥವಾ ಎರಡು ಪಂದ್ಯಗಳಲ್ಲಿ ಮಾತ್ರ ಉತ್ತಮ ರನ್ ಗಳಿಸುತ್ತಾರೆ ಮತ್ತು ಪಂದ್ಯಶ್ರೇಷ್ಠರಾಗುತ್ತಾರೆ' ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

'ಆದ್ದರಿಂದ, ಈ ಬಾರಿ ಅವರಿಗೆ 500 ರನ್ ಅಥವಾ 600 ರನ್‌ಗಳ ಗಡಿ ದಾಟುವುದು ದೊಡ್ಡ ಪರೀಕ್ಷೆ. ಸಾಯಿ ಸುದರ್ಶನ್ ಈ ಬಾರಿ 750 ರನ್ ಗಳಿಸಿದ್ದಾರೆ. ಆದ್ದರಿಂದ, ರೋಹಿತ್ ಶರ್ಮಾ ಕೂಡ 600 ರನ್ ಗಳಿಸಲು ಬಯಸುತ್ತಾರೆ. ಏಕೆಂದರೆ, ಅವರು ಈಗ ಫಿಟ್ ಆಗಿದ್ದಾರೆ ಮತ್ತು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಐಪಿಎಲ್‌ನಲ್ಲಿ ಅವರು ರನ್‌ಗಳಿಗಾಗಿ ತುಂಬಾ ಹಸಿದಿರುತ್ತಾರೆ' ಎಂದು ಅವರು ಹೇಳಿದರು.

Rohit Sharma - Virat kohli
ICC ODI Rankings: 18 ವರ್ಷಗಳ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ ರೋಹಿತ್ ಶರ್ಮಾ!

ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಏಕದಿನ ಬ್ಯಾಟರ್ ಆಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ತಮ್ಮ 38ನೇ ವಯಸ್ಸಿನಲ್ಲಿ ಐಸಿಸಿ ಪುರುಷರ ಶ್ರೇಯಾಂಕದಲ್ಲಿ ನಂ. 1 ಸ್ಥಾನವನ್ನು ಪಡೆದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತಂಡವನ್ನು ಒಂಬತ್ತು ವಿಕೆಟ್‌ಗಳ ಭರ್ಜರಿ ಜಯದತ್ತ ಕೊಂಡೊಯ್ದ ನಂತರ ರೋಹಿತ್ ಎರಡು ಸ್ಥಾನ ಬಡ್ತಿ ಪಡೆದು ಅಗ್ರಸ್ಥಾನ ತಲುಪಿದರು. ಅನುಭವಿ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (ಔಟಾಗದೆ 74) ಅವರೊಂದಿಗೆ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭಾರತಕ್ಕೆ 33ನೇ ಏಕದಿನ ಶತಕವನ್ನು ದಾಖಲಿಸಿದರು.

ರೋಹಿತ್ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ ಮತ್ತು ಭಾರತದ ಶುಭ್‌ಮನ್ ಗಿಲ್ ಅವರನ್ನು ಹಿಂದಿಕ್ಕಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ತಲುಪಿದರು. ಕಳೆದ ದಶಕದಲ್ಲಿ ಅವರು ಟಾಪ್ 10 ರಲ್ಲಿ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com