ಭಾರತ ಕ್ರಿಕೆಟ್ ತಂಡದ ತಾರೆ ಕುಲದೀಪ್ ಯಾದವ್ ತಮ್ಮ ವಿವಾಹದ ಕಾರಣದಿಂದಾಗಿ ಈ ತಿಂಗಳ ಅಂತ್ಯದ ವೇಳೆಗೆ ರಜೆ ನೀಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ. ಸ್ಪಿನ್ನರ್ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಭಾರತ ತಂಡದ ಭಾಗವಾಗಿದ್ದಾರೆ. ವರದಿಗಳ ಪ್ರಕಾರ, ಕುಲದೀಪ್ ಈ ವರ್ಷದ ಆರಂಭದಲ್ಲಿ ಮದುವೆಯಾಗಬೇಕಿತ್ತು. ಆದರೆ, ಐಪಿಎಲ್ ಅಂತ್ಯ ವಿಳಂಬವಾದ ಕಾರಣ ಅದನ್ನು ಮುಂದೂಡಲಾಯಿತು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕುಲದೀಪ್ ಇಗೀಹ ತಮ್ಮ ಮದುವೆಗೆ ರಜೆಯನ್ನು ಬಿಸಿಸಿಐ ಅನುಮೋದಿಸಲು ಕಾಯುತ್ತಿದ್ದಾರೆ. ಮಂಡಳಿಯ ಮೂಲಗಳು ಪ್ರಕಟಣೆಗೆ ತಿಳಿಸಿರುವ ಪ್ರಕಾರ, ಸ್ಪಿನ್ನರ್ ನವೆಂಬರ್ ಕೊನೆಯ ವಾರಕ್ಕೆ ಮಂಡಳಿಯಿಂದ ರಜೆ ಕೋರಿದ್ದರು ಎನ್ನಲಾಗಿದೆ. ಭಾರತ vs ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಕುಲದೀಪ್, ಯಾವಾಗಿನಿಂದ ರಜೆ ಮೇಲೆ ತೆರಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
'ನವೆಂಬರ್ ಕೊನೆಯ ವಾರದಲ್ಲಿ ಕುಲದೀಪ್ ಯಾದವ್ ವಿವಾಹವಾಗಲಿದ್ದಾರೆ. ಅವರ ಮದುವೆಗೆ ಅಧಿಕೃತವಾಗಿ ಎಷ್ಟು ದಿನಗಳ ರಜೆ ನೀಡಬೇಕೆಂದು ನಿರ್ಧರಿಸುವ ಮೊದಲು, ತಂಡದ ಕರ್ತವ್ಯಗಳಿಗೆ ಯಾವಾಗೆಲ್ಲ ಅವರ ಅಗತ್ಯವಿದೆ ಎಂಬುದನ್ನು ಭಾರತೀಯ ಕ್ರಿಕೆಟ್ ತಂಡದ ಆಡಳಿತ ಮಂಡಳಿ ನಿರ್ಧರಿಸುತ್ತದೆ. ಅಂದರೆ, ಅವರ ರಜೆ ತಂಡದ ವೇಳಾಪಟ್ಟಿ ಮತ್ತು ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕುಲದೀಪ್ ಕೊನೆಯ ಬಾರಿಗೆ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಬಿಸಿಸಿಐನ ಸಿಒಇಯಲ್ಲಿ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅವರು ಆ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆ ಪಂದ್ಯಕ್ಕೂ ಮೊದಲು, ಅವರು ಆಸ್ಟ್ರೇಲಿಯಾದಲ್ಲಿ ಒಂದು ಏಕದಿನ ಮತ್ತು ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ನರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Advertisement