

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025ರಲ್ಲಿ ಭಾರತ ಎ ಮತ್ತು ಓಮನ್ ತಂಡಗಳು ಮುಖಾಮುಖಿಯಾಗಿದ್ದು ಭಾರತ ಎ ತಂಡ 6 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಭಾರತದ ಪರ ಹರ್ಷ್ ದುಬೆ ಅಜೇಯ 53 ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಓಮನ್ ಮೊದಲು ಬ್ಯಾಟಿಂಗ್ ಮಾಡಿದ್ದು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 135 ರನ್ ಗಳಿಸಿತು. ಓಮನ್ ಪರ ವಾಸಿಮ್ ಅಲಿ 45 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 54 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಹಮ್ಮನ್ ಮಿರ್ಜಾ 16 ಎಸೆತಗಳಲ್ಲಿ 32 ರನ್ ಗಳಿಸಿದರು. ಸೈಶಿವ್ ನಾರಾಯಣ್ 16 ರನ್ ಮತ್ತು ಕರಣ್ ಸೋನಾವಾಲೆ 12 ರನ್ ಗಳಿಸಿದರು. ಆರ್ಯನ್ ಬಿಶ್ತ್ (4) ಮತ್ತು ಸುಫ್ಯಾನ್ ಮಹಮೂದ್ (8) ಎರಡಂಕಿ ತಲುಪಲು ವಿಫಲರಾದರು. ಜಿಕ್ರಿಯಾ ಇಸ್ಲಾಂ ಮತ್ತು ಮುಜಾಹಿರ್ ರಜಾ ಅಜೇಯರಾಗಿ ಉಳಿದರು. ಭಾರತದ ಪರ ಗುರ್ಜಪ್ನೀತ್ ಸಿಂಗ್ ಮತ್ತು ಸುಯಾಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಖ್, ನಮನ್ ಧೀರ್ ಮತ್ತು ಹರ್ಷ್ ದುಬೆ ತಲಾ ಒಂದು ವಿಕೆಟ್ ಪಡೆದರು.
ಓಮನ್ ನೀಡಿದ 136 ರನ್ ಗಳ ಗುರಿ ಬೆನ್ನಟ್ಟಿದ ಜಿತೇಶ್ ಶರ್ಮಾ ನೇತೃತ್ವದ ತಂಡ ಇನ್ನು 13 ಎಸೆತ ಬಾಕಿ ಇರುವಂತೆ 138 ರನ್ ಬಾರಿಸಿ ಗೆಲುವಿನ ದಡ ಸೇರಿತು. ಬಿ ಗುಂಪಿನ ಭಾಗವಾಗಿರುವ ಭಾರತ ಎ ಮತ್ತು ಓಮನ್ ತಂಡಗಳಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆದ್ದು ಭಾರತ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ್ ಶಾಹೀನ್ಸ್ ಈಗಾಗಲೇ ಬಿ ಗುಂಪಿನಿಂದ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದೆ.
Advertisement