ಎಂ.ಎಸ್ ಧೋನಿ ಮನೆಗೆ ಕೊಹ್ಲಿ ಭೇಟಿ; ರಾಂಚಿಯ ರಸ್ತೆಯಲ್ಲಿ ಓಡಾಟ! Video ವೈರಲ್

ರಾಂಚಿಯಲ್ಲಿ ಏಕದಿನ ಕ್ರಿಕೆಟ್ ಸರಣಿಗೆ ಕೌಂಟ್ ಡೌನ್ ಆರಂಭವಾಗಿರುವಂತೆಯೇ ಭೋಜನ ಕೂಟದ ನಂತರ ಧೋನಿ ಕೊಹ್ಲಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ.
Virat Kohli with MS Dhoni
ಎಂ.ಎಸ್. ಧೋನಿ ಕಾರಿನಲ್ಲಿ ವಿರಾಟ್ ಕೊಹ್ಲಿ
Updated on

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಲಂಡನ್ ನಿಂದ ತವರಿಗೆ ವಾಪಸ್ಸಾದ ನಂತರ ಮೊದಲಿಗೆ ಎಂಎಸ್ ಧೋನಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ರಾಂಚಿಯ ರಸ್ತೆಯಲ್ಲಿ ಧೋನಿ ಚಲಾಯಿಸುತ್ತಿದ್ದ ಕಾರಿನಲ್ಲಿ ವಿರಾಟ್ ಕೊಹ್ಲಿ ಕುಳಿತುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಧೋನಿ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ರಿಷಭ್ ಪಂತ್ ಕೂಡ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಸರಣಿಯನ್ನು ಸೋತ ನಂತರ ಭಾರತೀಯ ಕ್ರಿಕೆಟ್ ತಂಡ ಪುಟಿದೇಳುವ ನಿರೀಕ್ಷೆಯಲ್ಲಿದೆ.

ರೋಹಿತ್ ಶರ್ಮಾ ಮತ್ತು ಕೊಹ್ಲಿ ಏಕದಿನ ಪಂದ್ಯಗಳಿಗೆ ತಂಡಕ್ಕೆ ಮರಳಿದ್ದಾರೆ. ರಾಂಚಿಯಲ್ಲಿ ಏಕದಿನ ಕ್ರಿಕೆಟ್ ಸರಣಿಗೆ ಕೌಂಟ್ ಡೌನ್ ಆರಂಭವಾಗಿರುವಂತೆಯೇ ಭೋಜನ ಕೂಟದ ನಂತರ ಧೋನಿ ಕೊಹ್ಲಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಭೇಟಿಯ ವೀಡಿಯೊಗಳು ವೈರಲ್ ಆಗಿವೆ.

ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನವೆಂಬರ್ 30 ರಂದು ರಾಂಚಿಯಲ್ಲಿ ಮೊದಲ ಪಂದ್ಯ ನಡೆಯಲಿದೆ. ನಂತರ ಡಿಸೆಂಬರ್ 3 ರಂದು ರಾಯಪುರ ಮತ್ತು ಡಿಸೆಂಬರ್ 6 ರಂದು ವೈಜಾಗ್‌ನಲ್ಲಿ ಪಂದ್ಯಗಳು ನಡೆಯಲಿವೆ.

Virat Kohli with MS Dhoni
Cricket: ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ಕನ್ನಡಿಗ ಕೆ.ಎಲ್ ರಾಹುಲ್ ಗೆ ಕೊನೆಗೂ ಒಲಿದ ಅದೃಷ್ಟ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com