
ಸಿಡ್ನಿ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತೀಯ ಮೂಲದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹರ್ಜಾಸ್ ಸಿಂಗ್ (Harjas Singh) ಶನಿವಾರ ಅದ್ಭುತ ತ್ರಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
ಹೌದು... ಪ್ಯಾಟರ್ನ್ ಪಾರ್ಕ್‌ನಲ್ಲಿ ಸಿಡ್ನಿ ಕ್ರಿಕೆಟ್ ಕ್ಲಬ್ ವಿರುದ್ಧ ವೆಸ್ಟರ್ನ್ ಸಬರ್ಬ್ಸ್ ಪರ ಆಡುತ್ತಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್, ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವ ಪ್ರದರ್ಶನ ನೀಡಿದ್ದು, ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಗ್ರೇಡ್-ಲೆವೆಲ್ ಕ್ರಿಕೆಟ್‌ನ ಸೀಮಿತ ಓವರ್‌ಗಳ ಸ್ವರೂಪದಲ್ಲಿ ತ್ರಿಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಹರ್ಜಾಸ್ ಪಾತ್ರರಾಗಿದ್ದಾರೆ.
141 ಎಸೆತಗಳಲ್ಲಿ ಬರೊಬ್ಬರಿ 314 ರನ್, ಎಲೈಟ್ ಗ್ರೂಪ್ ಸೇರ್ಪಡೆ
ಹರ್ಜಾಸ್ ಅವರು ಕೇವಲ 141 ಎಸೆತಗಳಲ್ಲಿ 314 ರನ್ ಗಳಿಸಿದರು. ಅವರ ಈ ಅಮೋಘ ಇನ್ನಿಂಗ್ಸ್ ನಲ್ಲಿ 35 ಸಿಕ್ಸರ್‌ಗಳು ಸೇರಿವೆ. ಈ ಅದ್ಭುತ ಇನ್ನಿಂಗ್ಸ್ ಮೂಲಕ ಹರ್ಜಾಸ್ ಅಪರೂಪದ ಎಲೈಟ್ ಗ್ರೂಪ್ ಗೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತ್ರಿಶತಕ ದಾಖಲಿಸಿದ ಮೂವರು ಆಟಗಾರರು ಈ ಪಟ್ಟಿಯಲ್ಲಿದ್ದು, ಈ ಪೈಕಿ ಫಿಲ್ ಜಾಕ್ವೆಸ್ (321) ಮತ್ತು ವಿಕ್ಟರ್ ಟ್ರಂಪರ್ (335) ನಂತರದ ಸ್ಥಾನದಲ್ಲಿ ಹರ್ಜಾಸ್ ಸ್ಥಾನ ಪಡೆದಿದ್ದಾರೆ.
ಭಾರತ ಮೂಲದ ಹರ್ಜಾಸ್
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜನಿಸಿದ ಯುವ ತಾರೆ ಹರ್ಜಾಸ್ ಭಾರತದಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದಾರೆ. ಅವರ ಪೋಷಕರು ಭಾರತೀಯ ಮೂಲದವರಾಗಿದ್ದು, 2000 ರಲ್ಲಿ ಚಂಡೀಗಢದಿಂದ ಸಿಡ್ನಿಗೆ ವಲಸೆ ಬಂದಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ನಡೆದ 2024 ರ U-19 ವಿಶ್ವಕಪ್ ಫೈನಲ್‌ನಲ್ಲಿ ಹರ್ಜಾಸ್ ಕೂಡ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಅವರು 64 ಎಸೆತಗಳಲ್ಲಿ 55 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಇದು ಅತ್ಯಧಿಕ ಸ್ಕೋರ್ ಆಗಿತ್ತು ಮತ್ತು ಒಟ್ಟು ತಂಡ 253 ರನ್ ಗಳಿಸಲು ಸಹಾಯ ಮಾಡಿತ್ತು.
Advertisement