'ನಾವು ನಿಮ್ಮನ್ನು ಆಳ ಸಮುದ್ರಕ್ಕೆ ಎಸೆದಿದ್ದೇವೆ': ಶುಭಮನ್ ಗಿಲ್‌ಗೆ ಗೌತಮ್ ಗಂಭೀರ್ ನೀಡಿದ ಮೊದಲ ಸಂದೇಶ

ಭಾರತದ ನಾಯಕನಾಗಿ ತಮ್ಮ ಮುಂದಿದ್ದ ಅಗಾಧ ಒತ್ತಡವನ್ನು ಗಿಲ್ ನಿಭಾಯಿಸಿದ ರೀತಿಗೆ ಗಂಭೀರ್ ಅವರನ್ನು ಶ್ಲಾಘಿಸಿದರು.
Shubman Gill- Gautam Gambhir
ಶುಭಮನ್ ಗಿಲ್- ಗೌತಮ್ ಗಂಭೀರ್
Updated on

ಭಾರತೀಯ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ಯುಗ ಆರಂಭವಾಗಿದೆ. 26 ವರ್ಷದ ಅವರು ಈಗ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಭಾರತದ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಹಠಾತ್ ನಿವೃತ್ತಿಯ ನಂತರ, 2025ರ ಆರಂಭದಲ್ಲಿ ಇಂಗ್ಲೆಂಡ್‌ನ ಐದು ಟೆಸ್ಟ್‌ಗಳ ಪ್ರವಾಸಕ್ಕೆ ಮುಂಚಿತವಾಗಿ ಗಿಲ್‌ಗೆ ಈ ಜವಾಬ್ದಾರಿಯನ್ನು ನೀಡಲಾಯಿತು. 21ನೇ ಶತಮಾನದಲ್ಲಿ ಅತ್ಯಂತ ಕಿರಿಯ ಭಾರತೀಯ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗಿಲ್‌ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಮೊದಲ ಸಂದೇಶವನ್ನು ಬಹಿರಂಗಪಡಿಸಿದ್ದಾರೆ.

ಗಿಲ್ ನಾಯಕನಾದ ನಂತರ ಅವರೊಂದಿಗಿನ ಮೊದಲ ಸಂವಾದ ನೆನಪಿದೆಯೇ ಎಂದು ಕೇಳಿದಾಗ, 'ಆ ಇಡೀ ಸಂಭಾಷಣೆ ನನಗೆ ನೆನಪಿದೆ' ಎಂದು ಗಂಭೀರ್ ಬಹಿರಂಗಪಡಿಸಿದರು.

'ನಾನು ಅವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದೆ: 'ನಾವು ನಿನ್ನನ್ನು ಆಳವಾದ ಸಮುದ್ರಕ್ಕೆ ಎಸೆದಿದ್ದೇವೆ, ಮತ್ತು ಇಲ್ಲಿಂದ ಹೊರಬರಲು ಕೇವಲ ಎರಡು ಮಾರ್ಗಗಳಿವೆ. ಒಂದು ನೀನು ಮುಳುಗಿ ಹೋಗುತ್ತೀಯ ಅಥವಾ ನೀನು ವಿಶ್ವ ದರ್ಜೆಯ ಈಜುಗಾರನಾಗುತ್ತೀಯ' ಎಂದು ಹೇಳಿದ್ದಾಗಿ ಗಂಭೀರ್ ಹೇಳಿದರು.

ಭಾರತದ ನಾಯಕನಾಗಿ ತಮ್ಮ ಮುಂದಿದ್ದ ಅಗಾಧ ಒತ್ತಡವನ್ನು ಗಿಲ್ ನಿಭಾಯಿಸಿದ ರೀತಿಗೆ ಗಂಭೀರ್ ಅವರನ್ನು ಶ್ಲಾಘಿಸಿದರು.

'ನನಗೆ ಆ 750 ರನ್‌ಗಳು ಮುಖ್ಯವಲ್ಲ. ಶುಭಮನ್ ಇಂಗ್ಲೆಂಡ್ ಪ್ರವಾಸದಲ್ಲಿ ಆ 750 ರನ್‌ಗಳನ್ನು ಗಳಿಸದಿದ್ದರೆ, ಮುಂದಿನ ಪ್ರವಾಸದಲ್ಲಿ ಅವರು ಅವುಗಳನ್ನು ಗಳಿಸುತ್ತಿದ್ದರು. ಏಕೆಂದರೆ ಅವರ ಗುಣಮಟ್ಟ ಉತ್ತಮವಾಗಿದೆ. 25 ವರ್ಷದ ಹುಡುಗ, ಯುವ ತಂಡದೊಂದಿಗೆ, ತನ್ನನ್ನು ತಾನು ಹೇಗೆ ನಿಭಾಯಿಸಿಕೊಂಡನು, ಅವನ ನಾಯಕತ್ವ, ತಂಡವನ್ನು ನಿಭಾಯಿಸಿದ ರೀತಿ, ಒತ್ತಡ ನಿಭಾಯಿಸಿದ ರೀತಿ, ಬಲಿಷ್ಠ ಇಂಗ್ಲೆಂಡ್ ವಿರುದ್ಧ ಆಡಿದ ರೀತಿಗೆ ನಾನು ಬೆರಗಾಗಿದ್ದೇನೆ. ನಾಯಕತ್ವದಲ್ಲಿ ಕಷ್ಟಕರವಾದ ಪರೀಕ್ಷೆ ಇನ್ನೊಂದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ವಿವರಿಸಿದರು.

Shubman Gill- Gautam Gambhir
ಗೌತಮ್ ಗಂಭೀರ್‌ಗೆ ಶ್ರೇಯಸ್ ಅಯ್ಯರ್‌ಗಿಂತ ಶುಭಮನ್ ಗಿಲ್ ಕಂಡರೆ ಇಷ್ಟ; ಮನೋಜ್ ತಿವಾರಿ

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗಿಲ್ 754 ರನ್ ಗಳಿಸಿದರು. ಇದು ಒಂದೇ ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯಾಗಿದೆ. ಭಾರತವು ಇಂಗ್ಲೆಂಡ್ ವಿರುದ್ಧ ತವರಿನಿಂದ ಹೊರಗೆ 2-2 ಡ್ರಾ ಸಾಧಿಸಿದಾಗ ಗಿಲ್ ಅವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಂದು ಗಿಲ್ ಮತ್ತೊಂದು ಶತಕ ಬಾರಿಸಿದರು. ಯಶಸ್ವಿ ಜೈಸ್ವಾಲ್ 175 ರನ್ ಗಳಿಸಿ ರನೌಟ್ ಆದ ನಂತರ, ಗಿಲ್ ತಮ್ಮ ಬ್ಯಾಟ್‌ನಿಂದ ಭರ್ಜರಿ ಪ್ರದರ್ಶನ ನೀಡಿದರು. 125 ರನ್ ಗಳಿಸಿದರು ಮತ್ತು ತವರು ನೆಲದಲ್ಲಿ ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com