'ವರ್ತಮಾನದಲ್ಲಿರುವುದು ಮುಖ್ಯ, ಭವಿಷ್ಯದಲ್ಲಲ್ಲ': ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಕೇಳಿದ್ದಕ್ಕೆ ಗೌತಮ್ ಗಂಭೀರ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20ಐ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದು, ಏಕದಿನ ಕ್ರಿಕೆಟ್‌ ಅನ್ನು ಮಾತ್ರ ಆಡುತ್ತಿದ್ದಾರೆ.
Virat Kohli - Rohit Sharma - Gautam Gambhir
ವಿರಾಟ್ ಕೊಹ್ಲಿ -ರೋಹಿತ್ ಶರ್ಮಾ- ಗೌತಮ್ ಗಂಭೀರ್
Updated on

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಗೆದ್ದ ನಂತರ ಪತ್ರಿಕಾಗೋಷ್ಠಿಗೆ ಆಗಮಿಸಿದಾಗ, ಮುಖ್ಯ ಕೋಚ್ ಗೌತಮ್ ಗಂಭೀರ್ ಎದುರಿಸಿದ ಮೊದಲ ಪ್ರಶ್ನೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬದಲಿಗೆ, 2027ರ ಏಕದಿನ ವಿಶ್ವಕಪ್‌ಗಾಗಿ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಇರುತ್ತಾರೆಯೇ ಎಂಬ ಬಗ್ಗೆ ಗಂಭೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಯಿತು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ತೆಗೆದುಕೊಂಡ ನಿಲುವನ್ನು ಗಂಭೀರ್ ಪುನರುಚ್ಚರಿಸಿದರು. 2027ರ ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಸಮಯವಿದೆ. ಆದ್ದರಿಂದ, ಈಗ ನಮ್ಮ ಮುಂದಿರುವ ಕೆಲಸದ ಮೇಲೆ ಗಮನಹರಿಸುವುದು ಮುಖ್ಯವಾಗಿದ್ದು, ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ಮಾತನಾಡಬೇಕು' ಎಂದರು.

'ಏಕದಿನ ವಿಶ್ವಕಪ್‌ಗೆ ಎರಡೂವರೆ ವರ್ಷಗಳು ಬಾಕಿ ಇವೆ. ವರ್ತಮಾನದಲ್ಲಿ ಉಳಿಯುವುದು ಮುಖ್ಯ. ಅವರಿಬ್ಬರೂ ಗುಣಮಟ್ಟದ ಆಟಗಾರರು. ಆ ಇಬ್ಬರು ಯಶಸ್ವಿ ಪ್ರವಾಸ ಮಾಡುತ್ತಾರೆಂದು ಆಶಿಸುತ್ತೇವೆ' ಎಂದು ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20ಐ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದು, ಏಕದಿನ ಕ್ರಿಕೆಟ್‌ ಅನ್ನು ಮಾತ್ರ ಆಡುತ್ತಿದ್ದಾರೆ. 50 ಓವರ್‌ಗಳ ವಿಶ್ವಕಪ್‌ಗೆ ಇನ್ನೂ ಎರಡು ವರ್ಷ ಬಾಕಿ ಇದ್ದು, ಭಾರತದ ದೀರ್ಘಕಾಲೀನ ಯೋಜನೆಗಳಿಗೆ ಹೊಂದಿಕೊಳ್ಳಲು ಅವರು ಯಾವ ರೀತಿಯ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಆ ಹೊತ್ತಿಗೆ, ರೋಹಿತ್‌ಗೆ 40 ವರ್ಷ ಮತ್ತು ಕೊಹ್ಲಿಗೆ 38 ವರ್ಷ ವಯಸ್ಸಾಗಿರುತ್ತದೆ. ಇತ್ತೀಚೆಗೆ ರೋಹಿತ್ ಬದಲಿಗೆ ಶುಭಮನ್ ಗಿಲ್ ಅವರನ್ನು ಭಾರತದ ಏಕದಿನ ತಂಡದ ನಾಯಕನನ್ನಾಗಿ ನೇಮಿಸಲಾಯಿತು.

Virat Kohli - Rohit Sharma - Gautam Gambhir
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ನಾಯಕ ಶುಭಮನ್ ಗಿಲ್ ಗೆ ಸೂಚನೆ

ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಸಂದರ್ಭದಲ್ಲಿ ರೋಹಿತ್ ಮತ್ತು ಕೊಹ್ಲಿ ಕೊನೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು. ಫೈನಲ್‌ನಲ್ಲಿ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಕೊಹ್ಲಿ ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಾನ ಪಡೆದರು. ಟೂರ್ನಿಯುದ್ದಕ್ಕೂ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.

ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಮತ್ತು ಕೊಹ್ಲಿ ಆಯ್ಕೆಯಾದಾಗಿನಿಂದ ಅಭಿಮಾನಿಗಳು, ತರಬೇತುದಾರರು ಮತ್ತು ಮಾಜಿ ಕ್ರಿಕೆಟಿಗರ ನಡುವೆ ರೋಹಿತ್ ಮತ್ತು ಕೊಹ್ಲಿ ಅವರ ಏಕದಿನ ಭವಿಷ್ಯದ ಬಗ್ಗೆಯೇ ಹೆಚ್ಚಾಗಿ ಮಾತುಗಳು ಕೇಳಿಬರುತ್ತಿವೆ. ಶುಭಮನ್ ಗಿಲ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದ ನಂತರ, ಈ ವಿಷಯದ ಬಗ್ಗೆ ಬಿಸಿಸಿಐನ ಸ್ಪಷ್ಟ ನಿಲುವು ತಾಳಿದೆ. ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ಗಿಲ್ ಸೂಕ್ತ ಅಭ್ಯರ್ಥಿ ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com