
ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡವನ್ನು ಸೇರಿಕೊಂಡಾಗಿನಿಂದ ಎಲ್ಲರ ಗಮನ ಅವರ ಮೇಲೆ ಕೇಂದ್ರೀಕೃತವಾಗಿದೆ. ಭಾರತದ ಇಬ್ಬರು ಮಾಜಿ ನಾಯಕರು ಏಕದಿನ ಪಂದ್ಯಗಳಲ್ಲಿ ಮಾತ್ರ ಸಕ್ರಿಯರಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡವು ತರಬೇತಿ ಪಡೆಯುತ್ತಿರುವ ಪರ್ತ್‌ನಲ್ಲಿ ಕೊಹ್ಲಿಯ ಆಟೋಗ್ರಾಫ್ ಪಡೆದ ನಂತರ ಯುವ ಅಭಿಮಾನಿ ಪ್ರತಿಕ್ರಿಯಿಸಿದ ರೀತಿಯೇ ಇದೀಗ ಎಲ್ಲವನ್ನು ಸ್ಪಷ್ಟವಾಗಿ ಹೇಳುತ್ತಿದೆ.
ಕೊಹ್ಲಿಯ ಹಸ್ತಾಕ್ಷರ ಪಡೆದು ಓಡುತ್ತಿರುವ ಬಾಲಕ ಸೂಪರ್ ಎಕ್ಸೈಟ್ ಆಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಾಲಕ ಓಡುತ್ತಾ ಮೈದಾನದಲ್ಲಿಯೇ ಬಿದ್ದು ಹೊರಳಾಡಿರುವುದು ಕಂಡುಬಂದಿದೆ.
ಹಿರಿಯ ತಾರೆಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಇಲ್ಲಿಗೆ ಆಗಮಿಸಿದ ಕೂಡಲೇ ಅಭ್ಯಾಸದಲ್ಲಿ ತೊಡಗಿದ್ದಾರೆ. ಭಾನುವಾರದಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲು ಭಾರತ ತಂಡದ ಮೊದಲ ತರಬೇತಿ ಅವಧಿಯಲ್ಲಿ ನೆಟ್ಸ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದರು.
ಫೆಬ್ರುವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕಾಗಿ ಕೊನೆಯ ಬಾರಿಗೆ ಆಡಿದ ರೋಹಿತ್ ಮತ್ತು ಕೊಹ್ಲಿ ಮೇಲೆ ಇದೀಗ ಎಲ್ಲರ ಕಣ್ಣುಗಳು ನೆಟ್ಟಿವೆ ಮತ್ತು 50 ಓವರ್‌ಗಳ ಮಾದರಿಯಲ್ಲಿ ಮಾತ್ರ ಇಬ್ಬರು ಆಟಗಾರರು ಆಡುತ್ತಿದ್ದಾರೆ.
ಭಾರತದ ಮಾಜಿ ನಾಯಕರು ಇಬ್ಬರೂ ನೆಟ್ಸ್‌ನಲ್ಲಿ ಸುಮಾರು 30 ನಿಮಿಷ ಬ್ಯಾಟಿಂಗ್ ಮಾಡಿದರು. ಅಕ್ಟೋಬರ್ 29 ರಿಂದ ಪ್ರಾರಂಭವಾಗುವ ಮೂರು ODIಗಳು ಮತ್ತು ಐದು T20 ಗಳನ್ನು ಒಳಗೊಂಡಿರುವ ವೈಟ್-ಬಾಲ್ ಪ್ರವಾಸಕ್ಕಾಗಿ ಭಾರತ ತಂಡವು ಬುಧವಾರ ಮತ್ತು ಗುರುವಾರ ಎರಡು ಬ್ಯಾಚ್‌ಗಳಲ್ಲಿ ಇಲ್ಲಿಗೆ ಆಗಮಿಸಿದೆ.
ರೋಹಿತ್ ಅವರು ನೆಟ್ಸ್‌ನಲ್ಲಿ ಅಭ್ಯಾಸದ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಸುದೀರ್ಘ ಚಾಟ್ ಮಾಡುತ್ತಿರುವುದು ಕಂಡುಬಂದಿದೆ.
ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಈ ವರ್ಷದ ಆರಂಭದಲ್ಲಿ ಟೆಸ್ಟ್‌ನಿಂದ ನಿವೃತ್ತರಾದರು ಮತ್ತು ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ತಮ್ಮ ಟಿ20 ವೃತ್ತಿಜೀವನಕ್ಕೆ ತೆರೆ ಎಳೆದರು.
Advertisement