ಕ್ಯಾಪ್ಟನ್ ಕೂಲ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು, ನನ್ನನ್ನು ನಿಂದಿಸಿದರು: CSK ಮಾಜಿ ಆಟಗಾರ ಮೋಹಿತ್ ಶರ್ಮಾ

ಆ ಓವರ್‌ನಲ್ಲಿ ವಿಕೆಟ್ ಪಡೆದ ನಂತರವೂ ಧೋನಿ ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಮೋಹಿತ್ ಹಂಚಿಕೊಂಡರು.
MS Dhoni
ಎಂಎಸ್ ಧೋನಿ
Updated on

ಎಂಎಸ್ ಧೋನಿ ಭಾರತೀಯ ಕ್ರಿಕೆಟ್‌ನ 'ಕ್ಯಾಪ್ಟನ್ ಕೂಲ್' ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಭಾರತ ತಂಡದಲ್ಲಿ ಧೋನಿ ಅವರ ಸಹ ಆಟಗಾರರಾಗಿದ್ದ ಅನುಭವಿ ವೇಗಿ ಮೋಹಿತ್ ಶರ್ಮಾ, ಟೀಂ ಇಂಡಿಯಾದ ಮಾಜಿ ನಾಯಕನ ಕೆಟ್ಟ ಮುಖವನ್ನು ಕಂಡ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಸಿಎಸ್‌ಕೆಯಲ್ಲಿ ನಾಲ್ಕು ವರ್ಷಗಳನ್ನು ಕಳೆದ ಮೋಹಿತ್, ಧೋನಿ ಕೋಪಗೊಂಡ ಕುರಿತಾದ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ. ಚಾಂಪಿಯನ್ಸ್ ಲೀಗ್ ಟಿ20 (ಸಿಎಲ್‌ಟಿ20) ಪಂದ್ಯದಲ್ಲಿ ನಡೆದ ಒಂದು ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಧೋನಿ ತನ್ನನ್ನು 'ನಿಂದಿಸಿದ್ದರು' ಎಂದು ಮೋಹಿತ್ ಹೇಳಿದರು.

'ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಸಿಎಲ್‌ಟಿ20 ಪಂದ್ಯದಲ್ಲಿ ಮಹಿ ಭಾಯ್ (ಎಂಎಸ್ ಧೋನಿ) ಈಶ್ವರ್ ಪಾಂಡೆಗೆ ಬೌಲಿಂಗ್ ಮಾಡಲು ಕರೆದರು. ಆದರೆ, ನಾನು ಅವರು ನನ್ನನ್ನು ಕರೆದರು ಎಂದು ಭಾವಿಸಿದೆ' ಎಂದು ಮೋಹಿತ್ ಶರ್ಮಾ ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು.

'ನಾನು ರನ್ ಅಪ್ ಆರಂಭಿಸಿದೆ. ಆದರೆ, ಮಹಿ ಭಾಯ್ ನಿಮ್ಮನ್ನು ಬೌಲಿಂಗ್ ಮಾಡಲು ಕರೆಯಲಿಲ್ಲ ಎಂದು ಹೇಳಿದರು ಮತ್ತು ಅವರು ಈಶ್ವರ್‌ ಅನ್ನು ಕರೆಯಲು ಪ್ರಯತ್ನಿಸಿದ್ಗಾಹಿ ಹೇಳಿದರು. ಆದರೆ, ನಾನು ರನ್ ಅಪ್ ಆರಂಭಿಸಿದ್ದರಿಂದ ನಾನೇ ಬೌಲಿಂಗ್ ಮುಂದುವರಿಸಬೇಕೆಂದು ಅಂಪೈರ್ ಹೇಳಿದರು. ಆಗ ಧೋನಿ ತಾಳ್ಮೆ ಕಳೆದುಕೊಂಡು, ನನ್ನನ್ನು ನಿಂದಿಸಿದರು' ಎಂದು ಮೋಹಿತ್ ಬಹಿರಂಗಪಡಿಸಿದರು.

ಆ ಓವರ್‌ನಲ್ಲಿ ವಿಕೆಟ್ ಪಡೆದ ನಂತರವೂ ಧೋನಿ ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ಮೋಹಿತ್ ಹಂಚಿಕೊಂಡರು.

MS Dhoni
'ಎಂಎಸ್ ಧೋನಿ ನನ್ನನ್ನು ಕೈಬಿಟ್ಟರು...': ಏಕದಿನ ಕ್ರಿಕೆಟ್‌ಗೆ ಬೇಗ ನಿವೃತ್ತಿ ಘೋಷಿಸುವ ನಿರ್ಧಾರದ ಬಗ್ಗೆ ವೀರೇಂದ್ರ ಸೆಹ್ವಾಗ್

'ನಾನು ಮೊದಲ ಎಸೆತದಲ್ಲೇ ಯೂಸುಫ್ ಪಠಾಣ್ ಅವರ ವಿಕೆಟ್ ಪಡೆದೆ. ಸಂಭ್ರಮಾಚರಣೆಯ ಸಮಯದಲ್ಲಿ, ಮಹಿ ಭಾಯ್ ಇನ್ನೂ ನನ್ನನ್ನು ನಿಂದಿಸುತ್ತಿದ್ದರು' ಎಂದು 36 ವರ್ಷದ ಮೋಹಿತ್ ನೆನಪಿಸಿಕೊಂಡರು.

ಯುವ ವೇಗಿಯಾಗಿ ಧೋನಿ ತಾಳ್ಮೆ ಕಳೆದುಕೊಳ್ಳುವುದನ್ನು ನೋಡುವುದು ಹೇಗೆ ಅನಿಸಿತು ಎಂಬುದನ್ನು ಬಹಿರಂಗಪಡಿಸಿದ ಅವರು, 'ನನಗೆ ಬಹಳಷ್ಟು ಕ್ಷಣಗಳಿದ್ದವು. ಮಹಿ ಭಾಯ್ ಕೂಲ್ ಮತ್ತು ಕಾಮ್ ಸ್ವಭಾವದವರು ಎಂದುಕೊಂಡಿದ್ದೆ. ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ ಎಂದು ಯಾರೊಬ್ಬರೂ ನಿರೀಕ್ಷಿಸಿರುವುದಿಲ್ಲ. ಅವರು ನಿಮ್ಮ ಮೇಲೆ ತಾಳ್ಮೆ ಕಳೆದುಕೊಂಡಾಗ, ಯುವಕನಾಗಿ ನೀವು ಉತ್ಸುಕರಾಗುತ್ತೀರಿ' ಎಂದು ಹೇಳಿದರು.

ಆದಾಗ್ಯೂ, ಸಿಎಸ್‌ಕೆಯಲ್ಲಿ ಧೋನಿ ನಾಯಕತ್ವದಲ್ಲಿ ಮೋಹಿತ್ ಬೌಲರ್ ಆಗಿ ಮೂಡಿಬಂದರು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. 2013 ಮತ್ತು 15ರ ನಡುವೆ, ಮೋಹಿತ್ ಸಿಎಸ್‌ಕೆ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದರು. 47 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com