
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೂ ಮುಂಚಿತವಾಗಿ ಎನ್ ಶ್ರೀನಿವಾಸನ್ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್‌ಕೆಸಿಎಲ್) ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಹಿಂದೂ ಬಿಸಿನೆಸ್ ಲೈನ್ ವರದಿ ಮಾಡಿದೆ.
ಇಂಡಿಯಾ ಸಿಮೆಂಟ್ಸ್ ಅನ್ನು ಅಲ್ಟ್ರಾಟೆಕ್ 2014ರಲ್ಲಿ ಖರೀದಿಸಿತು. ಇದರ ಪರಿಣಾಮವಾಗಿ, ಈಗ ಇಂಡಿಯಾ ಸಿಮೆಂಟ್ಸ್ ನಿಯಂತ್ರಣದಲ್ಲಿದ್ದ ಕ್ರಿಕೆಟ್ ಫ್ರಾಂಚೈಸಿಯು ಅಲ್ಟ್ರಾಟೆಕ್ ಪಾಲಾಗಿದೆ. ಹೀಗಾಗಿ, ಶ್ರೀನಿವಾಸನ್ ಅಥವಾ ಅವರ ಮಗಳು ರೂಪಾ ಗುರುನಾಥ್ CSKCL ನ ಭಾಗವಾಗಿಲ್ಲದಿದ್ದರೂ, ಅದಾದ ಮೂರು ತಿಂಗಳ ನಂತರ, ಫೆಬ್ರುವರಿಯಲ್ಲಿ, ಇಬ್ಬರನ್ನೂ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಯಿತು.
ಶ್ರೀನಿವಾಸನ್ ಸಿಎಸ್‌ಕೆಸಿಎಲ್‌ನಲ್ಲಿ ಶೇ 0.11 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅವರ ಪತ್ನಿ ಚಿತ್ರಾ ಶ್ರೀನಿವಾಸನ್ ಮತ್ತು ಮಗಳು ರೂಪಾ ಕ್ರಮವಾಗಿ ಶೇ 0.03 ಮತ್ತು ಶೇ 0.01 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಶ್ರೀನಿವಾಸನ್ ಅವರ ಆಪ್ತ ಮಿತ್ರ ಕೆಎಸ್ ವಿಶ್ವನಾಥನ್ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 2028 ರವರೆಗೆ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.
'ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯು 2025ರ ಮಾರ್ಚ್ 22 ರಂದು ಪ್ರಾರಂಭವಾಯಿತು ಮತ್ತು ಪಂದ್ಯಗಳು ಮಾರ್ಚ್‌ನಿಂದ ಜೂನ್‌ವರೆಗೆ ನಡೆದವು. ನಿಮ್ಮ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ನಾಕೌಟ್‌ಗಳಿಗೆ ಅರ್ಹತೆ ಪಡೆಯದಿದ್ದರೂ, ಮುಂಬರುವ ಆವೃತ್ತಿಗಳಲ್ಲಿ ಬಲವಾದ ಪುನರಾಗಮನ ಮತ್ತು ಸುಧಾರಿತ ಪ್ರದರ್ಶನದ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ' ಎಂದು CSKCL ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
Advertisement