
ನವದೆಹಲಿ: ಪಾಕಿಸ್ತಾನ ಆಟಗಾರರಿಗೆ ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ.
ಈ ನಡುವೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ವಿರಾಟ್ ಕೊಹ್ಲಿ ಹೊಗಳಿ ಮಾಡಿರುವ ಫೋಸ್ಟ್ , ವಿವಾದಕ್ಕೆ ತುಪ್ಪ ಸುರಿದಂತಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ವಿರಾಟ್‌ನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದ ಅಮೀರ್, ಭಾರತ ಸೂಪರ್‌ಸ್ಟಾರ್ ಅನ್ನು 'ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಮನುಷ್ಯ ಎಂದು ಶ್ಲಾಘಿಸಿದ್ದಾರೆ.
ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ಸೂಪರ್ 4 ರ ಘಟ್ಟದ ಪಂದ್ಯಕ್ಕೂ ಮುನ್ನ ಮಾಡಿರುವ ಈ ಪೋಸ್ಟ್ ಹ್ಯಾಂಡ್‌ಶೇಕ್ ವಿವಾದಕ್ಕೆ ಮತ್ತೊಂದು ಹೊಸ ಅಧ್ಯಯನವನ್ನು ಸೇರಿಸಿದಂತಾಗಿದೆ.
"ಒಂದು ವಿಷಯ ಖಚಿತವಾಗಿದೆ. ವಿರಾಟ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರ ಮತ್ತು ಅತ್ಯುತ್ತಮ ಮನುಷ್ಯ, ಗೌರವ," ಎಂದು ಅಮೀರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement