IPL 2026: ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದ ನಿತೀಶ್ ರಾಣಾಗೆ ದಂಡ; CSK ನಾಯಕ ರುತುರಾಜ್ ಗಾಯಕ್ವಾಡ್‌ಗೂ ಸಂಕಷ್ಟ!

IPL 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್ ಗಳಿಸುವ ಮೂಲಕ ಚೆನ್ನೈ ತಂಡಕ್ಕೆ ನೆರವಾದರು.
Nitish Rana - Ruturaj Gaikwad
ನಿತೀಶ್ ರಾಣಾ - ರುತುರಾಜ್ ಗಾಯಕ್ವಾಡ್
Updated on

IPL 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್ ಗಳಿಸುವ ಮೂಲಕ ಚೆನ್ನೈ ತಂಡವು 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಲು ಸಹಾಯ ಮಾಡಿದರು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಅಂತಿಮ ಹಂತದಲ್ಲಿ ತಂಡದ ಸಹ ಆಟಗಾರ ಟ್ರಿಸ್ಟಾನ್ ಸ್ಟಬ್ಸ್‌ಗೆ ತಮ್ಮ ಗ್ಲೌಸ್ ಬದಲಿಸಲು ಅವಕಾಶ ನಿರಾಕರಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅಂಪೈರ್ ಜೊತೆ ನಡೆಸಿದ ವಾಗ್ವಾದಕ್ಕಾಗಿ ದಂಡ ವಿಧಿಸಲಾಗಿದೆ. ಐಪಿಎಲ್ ಆಡಳಿತ ಮಂಡಳಿಯು ರಾಣಾ ಅವರ ಪಂದ್ಯ ಶುಲ್ಕದ ಶೇ 25 ರಷ್ಟು ಕಡಿತಗೊಳಿಸುವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಿದೆ. ಡೆಲ್ಲಿಯ ರನ್ ಚೇಸ್‌ನ 19ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಸ್ಟಬ್ಸ್ ತನ್ನ ಗ್ಲೌಸ್ ಬದಲಿಸಲು ಮಾಡಿದ ವಿನಂತಿಯನ್ನು ಆಟದ ನಿಯಮಗಳನ್ನು ಉಲ್ಲೇಖಿಸಿ ನಾಲ್ಕನೇ ಅಂಪೈರ್ ನಿರಾಕರಿಸಿದಾಗ ಉದ್ವಿಗ್ನತೆ ಉಂಟಾಯಿತು.

ಆ ಸಮಯದಲ್ಲಿ ಬೆಂಚ್‌ನಲ್ಲಿದ್ದ ರಾಣಾ, ಈ ನಿರ್ಧಾರದಿಂದ ಕೋಪಗೊಂಡರು. ಅವರು ಬೌಂಡರಿ ಲೈನ್‌ನಲ್ಲಿ ಅಧಿಕಾರಿಯೊಂದಿಗೆ ದೀರ್ಘ ಮತ್ತು ಉತ್ಸಾಹಭರಿತ ವಾಗ್ವಾದದಲ್ಲಿ ತೊಡಗಿದರು. ಐಪಿಎಲ್ ಅಧಿಕೃತ ಹೇಳಿಕೆ ಪ್ರಕಾರ, ರಾಣಾ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಇದು 'ಪಂದ್ಯದ ಸಮಯದಲ್ಲಿ ಅಶ್ಲೀಲ ಪದಗಳ ಬಳಕೆಗೆ' ಸಂಬಂಧಿಸಿದೆ' ಎಂದಿದೆ.

ಗ್ಲೌಸ್ ಬದಲಿಸುವ ಮನವಿಯನ್ನು ತಿರಸ್ಕರಿಸಿದ ನಂತರದ ಎಸೆತದಲ್ಲೇ ಸ್ಟಬ್ಸ್ ಔಟ್ ಆದಾಗ ದೆಹಲಿ ಪಾಳಯದೊಳಗಿನ ಹತಾಶೆ ಉತ್ತುಂಗಕ್ಕೇರಿತು. ಸ್ಟಬ್ಸ್ ಸ್ವತಃ ತೀವ್ರವಾಗಿ ಪ್ರತಿಕ್ರಿಯಿಸಿ, ಪೆವಿಲಿಯನ್‌ಗೆ ಹಿಂತಿರುಗುವಾಗ ತನ್ನ ಹೆಲ್ಮೆಟ್ ಮತ್ತು ಬ್ಯಾಟ್ ಅನ್ನು ಎಸೆದರು.

Nitish Rana - Ruturaj Gaikwad
IPL 2026: ಶತಕ ಸಿಡಿಸಿದ ಸಂಜು ಸ್ಯಾಮ್ಸನ್; 'ಎಂಎಸ್ ಧೋನಿ'ಗೆ ಹೋಲಿಕೆ ಮಾಡಿದ ಸಿಎಸ್‌ಕೆ ಬೌಲಿಂಗ್ ಕೋಚ್ ಎರಿಕ್ ಸೈಮನ್ಸ್!

'ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಪಂದ್ಯ ರೆಫರಿಯ ನಿರ್ಧಾರವು ಅಂತಿಮವಾಗಿರುತ್ತದೆ' ಎಂದು ಲೀಗ್ ಅಧಿಕೃತ ಪ್ರಕಟಣೆಯಲ್ಲಿ ದೃಢಪಡಿಸಿದೆ.

ಸಿಎಸ್‌ಕೆಗೆ ಮೊದಲ ಗೆಲುವು

IPL 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್ ಗಳಿಸುವ ಮೂಲಕ ಚೆನ್ನೈ ತಂಡವು 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಲು ಸಹಾಯ ಮಾಡಿದರು.

ಸ್ಟಬ್ಸ್ ಅವರ 60 ರನ್‌ಗಳ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜೇಮೀ ಓವರ್ಟನ್ ಬೌಲಿಂಗ್ ದಾಳಿಗೆ ಬೆದರಿತು. ನಾಲ್ಕು ವಿಕೆಟ್ ಕಬಳಿಸಿದ ಅವರು ಕೇವಲ 18 ರನ್ ಬಿಟ್ಟುಕೊಟ್ಟರು. ಡಿಸಿ ಅಂತಿಮವಾಗಿ 189 ರನ್‌ಗಳಿಸಸು ಸಾಧ್ಯವಾಯಿತು. ಸಿಎಸ್‌ಕೆ ವಿರುದ್ಧ 23 ರನ್‌ಗಳ ಸೋಲು ಕಂಡಿತು.

ರುತುರಾಜ್ ಗಾಯಕ್ವಾಡ್‌ಗೂ ದಂಡ

ಸ್ಲೋ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್‌ಗೆ ದಂಡ ವಿಧಿಸಲಾಗಿದೆ. ಈ ಅಪರಾಧಕ್ಕಾಗಿ ₹12 ಲಕ್ಷ ದಂಡ ವಿಧಿಸಿದೆ.

'ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪಂದ್ಯ ಸಂಖ್ಯೆ 18ರಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ' ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

'ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22ರ ಅಡಿಯಲ್ಲಿ, ಸ್ಲೋ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಇದು ಈ ಆವೃತ್ತಿಯ ತಂಡದ ಮೊದಲ ಅಪರಾಧವಾಗಿರುವುದರಿಂದ, ಗಾಯಕ್ವಾಡ್‌ಗೆ ₹12 ಲಕ್ಷ ದಂಡ ವಿಧಿಸಲಾಗಿದೆ'.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com