PSL ಬದಲಿಗೆ IPL ಆಯ್ಕೆ; ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿಗೆ ಎರಡು ವರ್ಷ ನಿಷೇಧ

ಇಸ್ಲಾಮಾಬಾದ್ ಯುನೈಟೆಡ್‌ಗೆ ಬದಲಿ ಆಟಗಾರನಾಗಿ ಮುಜರಬಾನಿಯನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ, ಅವರನ್ನು ಐಪಿಎಲ್‌ನ ಫ್ರಾಂಚೈಸಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ ಸಂಪರ್ಕಿಸಿದ ನಂತರ ಅವರು ಪಿಎಸ್‌ಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು.
Blessing Muzarabani
ಬ್ಲೆಸ್ಸಿಂಗ್ ಮುಜರಬಾನಿ
Updated on

ಲಾಹೋರ್: ಫ್ರಾಂಚೈಸಿಗೆ ಬಿಕರಿಯಾದ ನಂತರ ಪಾಕಿಸ್ತಾನ ಸೂಪರ್ ಲೀಗ್ ತೊರೆದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಆಯ್ಕೆ ಮಾಡಿಕೊಂಡ ಕಾರಣ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಾಬಾನಿ ಅವರಿಗೆ ಪಿಎಸ್ಎಲ್ ಎರಡು ವರ್ಷಗಳ ನಿಷೇಧ ಹೇರಿದೆ.

ಇಸ್ಲಾಮಾಬಾದ್ ಯುನೈಟೆಡ್‌ಗೆ ಬದಲಿ ಆಟಗಾರನಾಗಿ ಮುಜರಬಾನಿಯನ್ನು ಸೇರಿಸಿಕೊಳ್ಳಲಾಗಿತ್ತು. ಆದರೆ, ಅವರನ್ನು ಐಪಿಎಲ್‌ನ ಫ್ರಾಂಚೈಸಿಯಾದ ಕೋಲ್ಕತ್ತಾ ನೈಟ್ ರೈಡರ್ಸ್ ಸಂಪರ್ಕಿಸಿದ ನಂತರ ಅವರು ಪಿಎಸ್‌ಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು.

ಫ್ರಾಂಚೈಸಿ ಆಧರಿತ ಲೀಗ್‌ಗಳಲ್ಲಿ ಭಾಗವಹಿಸುವವರು ಪಾರದರ್ಶಕತೆ ಮತ್ತು ಸ್ಥಿರತೆಯಿಂದ ವರ್ತಿಸುವ ವೃತ್ತಿಪರತೆ ಹೊಂದಿರುವುದು ಅಗತ್ಯವಿದೆ. ನೀವು ಅಸ್ತಿತ್ವದಲ್ಲಿರುವ ಒಪ್ಪಂದಕ್ಕೆ ಬದ್ಧರಾಗಿರುವಾಗ ಹೊಸ ಬದ್ಧತೆಗೆ ಸೇರುವುದು ಅಥವಾ ಭಾಗವಹಿಸುವುದು ಆಟದ ನಿಯಮಗಳು, ನ್ಯಾಯಸಮ್ಮತತೆ ಅಥವಾ ನಿರೀಕ್ಷಿತ ನಡವಳಿಕೆಗೆ ವಿರುದ್ಧವಾಗಿರುತ್ತದೆ ಎಂದು ಪಿಎಸ್ಎಲ್ ಹೇಳಿಕೆಯಲ್ಲಿ ತಿಳಿಸಿದೆ.

Blessing Muzarabani
IPL 2026: ಐಪಿಎಲ್‌ಗಾಗಿ PSL ತೊರೆದ ಬ್ಲೆಸ್ಸಿಂಗ್ ಮುಜರಬಾನಿ; ಮುಸ್ತಾಫಿಜುರ್ ರೆಹಮಾನ್ ಬದಲಿಗೆ KKRಗೆ ಎಂಟ್ರಿ!

'ಇಂತಹ ನಡವಳಿಕೆಯನ್ನು ಗಮನಿಸದೆ ಬಿಟ್ಟರೆ, ವ್ಯವಹಾರಗಳ ವಿಶ್ವಾಸಾರ್ಹತೆ ಮತ್ತು ಫ್ರಾಂಚೈಸಿಗಳು, ನಿಯಂತ್ರಕರು ಮತ್ತು ಪಾಲುದಾರರು ವೃತ್ತಿಪರತೆಯಲ್ಲಿ ಇರಿಸುವ ವಿಶ್ವಾಸವನ್ನು ಕುಗ್ಗಿಸುತ್ತದೆ. ಎರಡು ವರ್ಷಗಳ ನಿಷೇಧವು ಉಲ್ಲಂಘನೆಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ' ಎಂದಿದೆ.

ಹಿಂದಿನ ಟಿ20 ವಿಶ್ವಕಪ್‌ನಲ್ಲಿ ಪ್ರಭಾವ ಬೀರಿದ್ದ ಮುಜರಬಾನಿ, ಇಲ್ಲಿಯವರೆಗೆ ಕೆಕೆಆರ್ ಪರ ಎರಡು ಪಂದ್ಯಗಳನ್ನು ಆಡಿದ್ದಾರೆ ಮತ್ತು ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com