ನವದೆಹಲಿ: ರುತುರಾಜ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಇದೀಗ ಸಂಕಷ್ಟ ಎದುರಾಗಿದ್ದು, ಗೆಲುವಿನ ಹಳಿಗೆ ಮರಳಿರುವಾಗಲೇ ತಂಡದ ಪ್ರಮುಖ ವೇಗಿ ಖಲೀಲ್ ಅಹ್ಮದ್ ಕ್ವಾಡ್ರೈಸ್ಪ್ಸ್ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.
ಸಿಎಸ್‌ಕೆ ಇಲ್ಲಿಯವರೆಗೆ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಭಾಗವಹಿಸಿದ್ದ ಅಹ್ಮದ್, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.
ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಹಿಂದಿನ ಪಂದ್ಯದ ಸಮಯದಲ್ಲಿ ಬಲಭಾಗದ ಸೊಂಟದಲ್ಲಿ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರು ಇನಿಂಗ್ಸ್ ಮಧ್ಯದಲ್ಲಿಯೇ ಮೈದಾನ ತೊರೆದಿದ್ದರು.
ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಅವರು CSK ಪರ ಸ್ಥಿರ ಪ್ರದರ್ಶನ ನೀಡಿದವರಲ್ಲಿ ಒಬ್ಬರಾಗಿದ್ದರು.
'ನಂತರ ವೈದ್ಯಕೀಯ ಪರೀಕ್ಷೆಗಳು ಅದು ಗ್ರೇಡ್ 2 ಟಿಯರ್ (ಭಾಗಶಃ ಆದರೆ ಗಮನಾರ್ಹವಾದ ಸ್ನಾಯು ಗಾಯ) ಮತ್ತು ಆಟಗಾರನು ಚೇತರಿಸಿಕೊಳ್ಳಲು ಕನಿಷ್ಠ 10 ರಿಂದ 12 ವಾರಗಳು ತೆಗೆದುಕೊಳ್ಳುತ್ತದೆ' ಎಂದು IPL ಮೂಲಗಳು ತಿಳಿಸಿವೆ.
ಎಡಗೈ ವೇಗಿ ಭಾರತಕ್ಕಾಗಿ 11 ಏಕದಿನ ಮತ್ತು 18 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೊನೆಯ ಬಾರಿಗೆ 2024ರ ಜುಲೈನಲ್ಲಿ ಭಾರತ ತಂಡದ ಪರ ಕಾಣಿಸಿಕೊಂಡರು.
Advertisement