IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು, ಸ್ಫೋಟಕ ಹೇಳಿಕೆ ನೀಡಿದ RCB ನಿರ್ದೇಶಕ ಮೊ ಬೊಬಾಟ್!

ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಸ್ಸಂಶಯವಾಗಿ, ಇಲ್ಲಿಯವರೆಗೆ ನಮ್ಮ ಬ್ಯಾಟಿಂಗ್ ಬಲಿ ಬಲಿಷ್ಟವಾಗಿದೆ. ಇದರ ಬಗ್ಗೆ ಹೆಚ್ಚಿಗೆ ವಿಶ್ಲೇಷಿಸುವುದಿಲ್ಲ ನಾವು ಯಾವಾಗಲೂ ಮಾಡುವಂತೆ ಪ್ರಾಮಾಣಿಕವಾಗಿ ಪರಿಶೀಲಿಸುತ್ತೇವೆ ಎಂದರು.
RCB PlAYERS
ಆರ್ ಸಿಬಿ ಆಟಗಾರರು ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಗಳಿಂದ ಸೋತ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಫಲಿತಾಂಶವನ್ನು ಅತಿಯಾಗಿ ವಿಶ್ಲೇಷಿಸಲು ಹೋಗಲ್ಲ. ಆದರೆ ಪ್ರಾಮಾಣಿಕವಾಗಿ ವಿಮರ್ಶೆ ಮಾಡುವುದಾಗಿ ಹೇಳಿದರು.

ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಸ್ಸಂಶಯವಾಗಿ, ಇಲ್ಲಿಯವರೆಗೆ ನಮ್ಮ ಬ್ಯಾಟಿಂಗ್ ಬಲಿ ಬಲಿಷ್ಟವಾಗಿದೆ. ಇದರ ಬಗ್ಗೆ ಹೆಚ್ಚಿಗೆ ವಿಶ್ಲೇಷಿಸುವುದಿಲ್ಲ ನಾವು ಯಾವಾಗಲೂ ಮಾಡುವಂತೆ ಪ್ರಾಮಾಣಿಕವಾಗಿ ಪರಿಶೀಲಿಸುತ್ತೇವೆ ಎಂದರು.

ನಾವು ಚೆನ್ನಾಗಿಯೇ ಆಡಿದ್ದೇವೆ. ಸುಧಾರಿಸಬಹುದಾದ ವಿಷಯಗಳನ್ನು ಪರಿಗಣಿಸುತ್ತೇವೆ. ಈ ಪಂದ್ಯದಿಂದ ಸ್ವಲ್ಪ ಕಲಿಯುತ್ತೇವೆ ಮತ್ತು ನಂತರ ಮುಂದಿನ ಪಂದ್ಯದಲ್ಲಿ ನಮ್ಮ ಸಾಮಾನ್ಯ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತೇವೆ" ಎಂದು ಅವರು ಹೇಳಿದರು.

RCB PlAYERS
IPL 2026, RCB vs DC: ಭುವಿ, ಪಾಂಡ್ಯ ಶ್ರಮ ವ್ಯರ್ಥ; ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಭರ್ಜರಿ ಜಯ

ಪಿಚ್ ಸ್ವಲ್ಪ ಬದಲಾಗಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಪಿಚ್ ಸ್ಲೋ ಆಗಿತ್ತು. ಹಾಗಾಗಿ ಸರಿಯಾಗಿ ಬ್ಯಾಟ್ ಮಾಡಲು ಆಗಲಿಲ್ಲ. ನಮ್ಮ ಆಟಗಾರರು ಇದನ್ನು ತಿಳಿಯಬೇಕಾಗಿತ್ತು. ಇನ್ನಷ್ಟು ಸ್ಕೋರ್ ಮಾಡಬೇಕಿತ್ತು. ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.

ಕೊನೆಯ ಓವರ್ ಲೆಕ್ಕಾಚಾರ ತಲೆಕೆಳಗಾಯಿತು. ಕೊನೆಯ ಓವರ್ ಬೌಲಿಂಗ್ ಮಾಡಿದ ರೊಮಾರಿಯೊ ಶೆಫರ್ಡ್ (Romario Shepherd) 5 ಎಸೆತಗಳಲ್ಲಿ 17 ರನ್‌ಗಳನ್ನು ಬಿಟ್ಟುಕೊಟ್ಟರು ಎಂದು ಮೊ ಬೊಬಾಟ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com