IPL 2026: GT ವಿರುದ್ಧ ಸ್ಫೋಟಕ ಬ್ಯಾಟಿಂಗ್, ಇತಿಹಾಸ ನಿರ್ಮಿಸಿದ MI ನ ತಿಲಕ್ ವರ್ಮಾ!

ತಿಲಕ್ ವರ್ಮಾ ಕೇವಲ 45 ಎಸೆತಗಳನ್ನು ಎದುರಿಸಿ 7 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಿತ ಅಜೇಯ 101 ರನ್ ಕಲೆಹಾಕಿದರು.
Tilak Varma scripts history
ತಿಲಕ್ ವರ್ಮಾ ಶತಕ
Updated on

ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ನ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಆಟಗಾರ ತಿಲಕ್ ವರ್ಮಾ ಇತಿಹಾಸ ನಿರ್ಮಿಸಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ ತಿಲಕ್ ವರ್ಮಾ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 45 ಎಸೆತಗಳನ್ನು ಎದುರಿಸಿದ 7 ಸಿಕ್ಸರ್ ಮತ್ತು 8 ಬೌಂಡರಿಗಳ ಸಹಿತ ಅಜೇಯ 101 ರನ್ ಕಲೆಹಾಕಿದರು.

ಈ ಮೂಲಕ ಐಪಿಎಲ್ 2026ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ ಚಾರಿತ್ರಿಕ ದಾಖಲೆ ಬರೆದಿದ್ದಾರೆ. ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಅವರು ಮುಂಬೈ ಫ್ರಾಂಚೈಸಿ ಪರ ಜಂಟಿ ಅತಿವೇಗದ ಶತಕ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Tilak Varma scripts history
IPL 2026: GT ವಿರುದ್ಧ MI ಭರ್ಜರಿ ಜಯ, ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ Shubman Gill ಪಡೆ!

ಈ ಮೂಲಕ ಅವರು 2008ರಲ್ಲಿ ಸನತ್ ಜಯಸೂರ್ಯ (45 ಎಸೆತಗಳಲ್ಲಿ ಶತಕ) ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ಮಾತ್ರವಲ್ಲದೇ ತಿಲಕ್ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Fastest hundreds for MI in IPL (by balls)

  • 45 - Sanath Jayasuriya vs CSK, Wankhede, 2008

  • 45 - Tilak Varma vs GT, Ahmedabad, 2026

  • 47 - Cameron Green vs SRH, Wankhede, 2023

  • 49 - Suryakumar vs GT, Wankhede, 2023

ಎಲೈಟ್ ಗ್ರೂಪ್ ಸೇರ್ಪಡೆ

ಐಪಿಎಲ್ ಇತಿಹಾಸದಲ್ಲಿ 5ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ತಿಲಕ್ ಪಾತ್ರರಾದರು.

ಇದಕ್ಕೂ ಮೊದಲು 2010ರಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಯೂಸುಫ್ ಪಠಾಣ್ 37 ಎಸೆತಗಳಲ್ಲಿ 100 ಗಳಿಸಿದ್ದರು. ಬಳಿಕ 2013ರಲ್ಲಿ ಆರ್ ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ ಶತಕ ಭಾರಿಸಿದ್ದರು.

2017ರಲ್ಲಿ ಇದೇ ಗುಜರಾತ್ ಲಯನ್ಸ್ ವಿರುದ್ಧ ಬೆನ್ ಸ್ಟೋಕ್ಸ್ 63 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ತಿಲಕ್ ವರ್ಮಾ 45 ಎಸೆತಗಳಲ್ಲಿ ಶತಕ ಸಿಡಿಸಿ ಈ ಎಲೈಟ್ ಗ್ರೂಪ್ ಗೆ ಸೇರ್ಪಡೆಯಾಗಿದ್ದಾರೆ.

Hundreds while batting at No.5 or lower in IPL

  • 100 (37) - Yusuf Pathan (RR) vs MI, Brabourne, 2010

  • 101* (38) - David Miller (KXIP) vs RCB, Mohali, 2013

  • 103* (63) - Ben Stokes (RPS) vs GL, Pune, 2017

  • 101* (45) - Tilak Varma (MI) vs GT, Ahmedabad, 2026

ಗುಜರಾತ್ ವಿರುದ್ಧ ಶತಕ, 2ನೇ ಆಟಗಾರ

ಇನ್ನು ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಶತಕ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ತಿಲಕ್ ಪಾತ್ರರಾಗಿದ್ದಾರೆ. 2023ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಸೂರ್ಯ ಕುಮಾರ್ ಯಾದವ್ 49 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದ್ದರು. ಇದೀಗ ತಿಲಕ್ ಅಹ್ಮದಾಬಾದ್ ನಲ್ಲಿ 45 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ್ದಾರೆ.

Hundreds for MI vs GT

  • 103* (49) - Suryakumar, Wankhede, 2023

  • 101* (45) - Tilak Varama, Ahmedabad, 2026

ಡೆತ್ ಓವರ್ ಗಳಲ್ಲಿ ಗರಿಷ್ಠ ರನ್, ಎಬಿಡಿ ದಾಖಲೆ ಸರಿಗಟ್ಟಿದ ತಿಲಕ್

ಅಂತೆಯೇ ಇನ್ನಿಂಗ್ಸ್ ನ ಅಂತಿಮ ಹಂತದ ಓವರ್ ಗಳಲ್ಲಿ ಗರಿಷ್ಟ ರನ್ ಕಲೆಹಾಕಿದ ಬ್ಯಾಟರ್ ಗಳ ಪಟ್ಟಿಯಲ್ಲಿ ತಿಲಕ್ ಆರ್ ಸಿಬಿಯ ಎಬಿ ಡಿವಿಲಿಯರ್ಸ್ ದಾಖಲೆ ಸರಿಗಟ್ಟಿದ್ದಾರೆ. 2020ರಲ್ಲಿ ಎಬಿಡಿ ಕೆಕೆಆರ್ ವಿರುದ್ಧ 24 ಎಸೆತಗಳಲ್ಲಿ 65 ರನ್ ಕಲೆಹಾಕಿದ್ದರು. ಇಂದು ತಿಲಕ್ ವರ್ಮಾ 18 ಎಸೆತಗಳಲ್ಲಿ 65 ಪೇರಿಸಿ ಈ ದಾಖಲೆ ಸರಿಗಟ್ಟಿದ್ದಾರೆ.

Most runs by a batter in death overs (16-20) in IPL innings

  • 71 (22) - Quinton de Kock vs KKR, Navi Mumbai 2022

  • 69 (21) - Tim David vs CSK Bengaluru, 2026*

  • 68 (20) - Andre Russell vs CSK, Chennai, 2018

  • 67 (23) - Rishabh Pant vs SRH, Delhi, 2018

  • 65 (24) - AB de Villiers vs KKR, Sharjah, 2020

  • 65 (18) - Tilak Varma vs GT, Ahmedabad, 2026*

Tilak Varma scripts history
IPL 2026: ಆಗ MS Dhoni, ಈಗ ಧ್ರುವ್ ಜುರೆಲ್.. ಅದ್ಭುತ ಸ್ಟಂಪಿಂಗ್ ಮೂಲಕ Green ಪೆವಿಲಿಯನ್ ಗೆ ಅಟ್ಟಿದ RR ವಿಕೆಟ್ ಕೀಪರ್! video

ಕಿರಿಯ ವಯಸ್ಸಿನ ಶತಕಧಾರಿ

23 ವರ್ಷ 163 ದಿನಗಳ ಪ್ರಾಯದ ತಿಲಕ್, ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಆರಂಭದ 22 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ್ದ ಅವರು, ನಂತರದ 23 ಎಸೆತಗಳಲ್ಲಿ ಬರೋಬ್ಬರಿ 82 ರನ್ ಚಚ್ಚಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com