IPL 2026: ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ; DC ಗೆ 243 ರನ್ ಟಾರ್ಗೆಟ್ ನೀಡಿದ SRH!

ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
IPL 2026: Abhishek Sharma Continues To Pile Misery On DC, Nears 150
ಅಭಿಷೇಕ್ ಶರ್ಮಾ
Updated on

ಹೈದರಾಬಾದ್‌: ಐಪಿಎಲ್ 2026 ರ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಪನಾಯಕ ಅಭಿಷೇಕ್ ಶರ್ಮಾ ಅವರು ಕೇವಲ 47 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದು, ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಹೈದರಾಬಾದ್ ತಂಡ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ.

ಅಭಿಷೇಕ್ ಶರ್ಮಾ ಅವರು 47 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ್ದು, ಈಗ 150 ರನ್ ಗಳ ಸಮೀಪದಲ್ಲಿದ್ದಾರೆ. ಇದರೊಂದಿಗೆ ಅವರು ಐಪಿಎಲ್ 2026 ರ ಅತಿ ಹೆಚ್ಚು ಸ್ಕೋರರ್ ಆದರು. ಇದು ಐಪಿಎಲ್‌ನಲ್ಲಿ ಅವರ ಎರಡನೇ ಶತಕವಾಗಿದೆ.

IPL 2026: Abhishek Sharma Continues To Pile Misery On DC, Nears 150
IPL 2026: ಮೂರು ಕ್ಯಾಚ್ ಬಿಟ್ಟ ಪಂಚಾಬ್ ಸ್ಟಾರ್ ಆಟಗಾರ ಶಶಾಂಕ್ ಸಿಂಗ್! ಕೋಚ್ ರಿಕಿ ಪಾಂಟಿಂಗ್ ರಿಯಾಕ್ಷನ್ ಹೇಗಿತ್ತು ನೋಡಿ...

ಅಭಿಷೇಕ್ ಶರ್ಮಾ ಅವರ ಅಜೇಯ 135 ರನ್ ಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 242 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಮೂಲಕ ಡೆಲ್ಲಿ ತಂಡಕ್ಕೆ ಗೆಲ್ಲಲು 243 ರನ್​ಗಳ ಬಿಗ್ ಟಾರ್ಗೆಟ್ ನೀಡಿದೆ.

ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್ 13 ಎಸೆತಗಳಲ್ಲಿ 25 ರನ್ ಗಳಿಸಿ, ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಆಗಿ ನಿರ್ಗಮಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com