IPL 2026: ಕಡೆಗೂ'ಮಿಚೆಲ್ ಸ್ಟಾರ್ಕ್' ಬಿಟ್ಟುಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ! RR ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆ

ಸ್ಟಾರ್ಕ್ ಮೇ 1 ರಂದು ದೆಹಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 2026 ರ ಋತುವಿಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ" ಎಂದು Cricket.com.au ವರದಿ ಮಾಡಿದೆ.
Mitchell Starc
ಮಿಚೆಲ್ ಸ್ಟಾರ್ಕ್
Updated on

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಸುಮಾರು 11.75 ಕೋಟಿ ರೂ. ಕೊಟ್ಟು ಖರೀದಿಸಿರುವ ಮಿಚೆಲ್ ಸ್ಟಾರ್ಕ್ ಈ ಬಾರಿಯ ಐಪಿಎಲ್ ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇದರಿಂದಾಗಿ ಫ್ರಾಂಚೈಸಿಗೆ ತುಂಬಾ ಹೊಡೆತ ಬೀಳ್ತಾ ಇತ್ತಾ.

ಈಗ ಅವರು ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿದ್ದು, ಮೇ 1 ರಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಲಭ್ಯವಿರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಮೊಣಕೈ ಮತ್ತು ಭುಜದ ನೋವಿನಿಂದಾಗಿ ಜನವರಿಯಿಂದ ಎಡಗೈ ವೇಗಿ ಸ್ಟಾರ್ಕ್ ಯಾವುದೇ ಪಂದ್ಯ ಆಡಿಲ್ಲ. ಸಿಡ್ನಿ ಸಿಕ್ಸರ್ಸ್‌ ಪರ ಐದು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಲ್ಲಿ ಆಡುವ ಮುನ್ನ ಐದು ಆಸೀಸ್ ಟೆಸ್ಟ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡಿದ್ದರು.

"ಸ್ಟಾರ್ಕ್ ಮೇ 1 ರಂದು ದೆಹಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 2026 ರ ಋತುವಿಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ" ಎಂದು Cricket.com.au ವರದಿ ಮಾಡಿದೆ.

ಈ ಬಾರಿಯ ಐಪಿಎಲ್‌ ಆರಂಭವಾದಾಗಿನಿಂದ 36 ವರ್ಷದ ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯು ವಿದೇಶಿ ಆಟಗಾರರ ಬದ್ಧತೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿತ್ತು. ಸ್ಟಾರ್ಕ್ ಕೂಡಾ ಈ ಕುರಿತು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದರು.

ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವೇಗಿ ಆಗಿದ್ದ ಸ್ಟಾರ್ಕ್ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪ್ರಸ್ತುತ ಆರು ಪಂದ್ಯಗಳಲ್ಲಿ ಮೂರು ಗೆಲುವು ಮತ್ತು ಅಷ್ಟೇ ಸೋಲುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಈ ಮಧ್ಯೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಸನ್‌ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಜೋಶ್ ಹ್ಯಾಜಲ್‌ವುಡ್ ಆರಂಭಿಕ ಪಂದ್ಯಗಳಿಂದ ಹೊರಗಿದ್ದರೂ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡಲು ಪುನರಾರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com