'ಅವರಿಗೆ ಆತ್ಮವಿಶ್ವಾಸ ಕಡಿಮೆಯಿದೆ'; DC ವಿರುದ್ಧ RCB ಮುನ್ನಡೆ ಸಾಧಿಸಲಿದೆ: ಭಾರತದ ಮಾಜಿ ಆಟಗಾರ ದೀಪ್ ದಾಸ್‌ಗುಪ್ತಾ!

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಬೃಹತ್ ಮೊತ್ತವು ಅವರ ಬ್ಯಾಟಿಂಗ್ ಬಲವನ್ನು ತೋರಿಸಿದರೂ, ಅವರ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವು ಪ್ರಮುಖ ಕಳವಳವಾಗಿ ಉಳಿದಿದೆ ಎಂದು ಅವರು ಹೇಳಿದರು.
Delhi Capitals
ಡೆಲ್ಲಿ ಕ್ಯಾಪಿಟಲ್ಸ್ ತಂಡ
Updated on

ಐಪಿಎಲ್ 2026ನೇ ಆವೃತ್ತಿಯಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಮುನ್ನಡೆ ಸಾಧಿಸಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ. ಡೆಲ್ಲಿ ತಂಡದ ಆತ್ಮವಿಶ್ವಾಸ ಕುಸಿದಿರುವುದು ಮತ್ತು ಈ ಆವೃತ್ತಿಯಲ್ಲಿ ಆರ್‌ಸಿಬಿಯ ಬಲಿಷ್ಠ ಆಲ್‌ರೌಂಡ್ ಫಾರ್ಮ್ ಉತ್ತಮವಾಗಿದೆ ಎಂದು ಅವರು ಹೇಳಿದರು.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ದಾಸ್‌ಗುಪ್ತಾ, ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಡೆಲ್ಲಿ ತಂಡವು ಇತ್ತೀಚೆಗೆ ಅನುಭವಿಸಿದ ಭಾರಿ ಸೋಲು ಪ್ರಮುಖ ಕಳವಳವಾಗಿದೆ ಎಂದ ಅವರು, 'ಪಂಜಾಬ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ದೆಹಲಿ ತಂಡ ಭಾರಿ ಸೋಲು ಅನುಭವಿಸಿದ ನಂತರ ಆತ್ಮವಿಶ್ವಾಸದ ಕೊರತೆಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಹೆಚ್ಚಿನ ಮುನ್ನಡೆಯನ್ನು ಹೊಂದಿದೆ' ಎಂದು ಅವರು ಹೇಳಿದರು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಬೃಹತ್ ಮೊತ್ತವು ಅವರ ಬ್ಯಾಟಿಂಗ್ ಬಲವನ್ನು ತೋರಿಸಿದರೂ, ಅವರ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗವು ಪ್ರಮುಖ ಕಳವಳವಾಗಿ ಉಳಿದಿದೆ ಎಂದು ಅವರು ಹೇಳಿದರು.

ಶನಿವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 265 ರನ್‌ಗಳ ದಾಖಲೆಯ ಚೇಸಿಂಗ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಆರು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಕೆಎಲ್ ರಾಹುಲ್ ಅವರ ಅಜೇಯ 152 ರನ್‌ಗಳು ವ್ಯರ್ಥವಾಯಿತು.

Delhi Capitals
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಭದ್ರತಾ ಭೀತಿ!: ಬಾಕಿ ಬಿಲ್ ಪಾವತಿಸದ ಕೋಪಕ್ಕೆ 240ಕ್ಕೂ ಹೆಚ್ಚು ಸಿಸಿಟಿವಿ ಫೀಡ್‌ ಕಟ್!

'264 ರನ್‌ಗಳ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗದಿರುವುದು ನಿಮ್ಮ ತಂಡದ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. 260ಕ್ಕಿಂತ ಹೆಚ್ಚು ರನ್ ಗಳಿಸಿದಾಗ, ನೀವು ಸರಿಯಾಗಿ ಮಾಡುತ್ತಿದ್ದೀರಿ ಎಂದು ಅದು ತೋರಿಸುತ್ತದೆ. ಆದರೆ, ಅವರ ಬೌಲಿಂಗ್ ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಮತ್ತು ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು' ಎಂದು ದಾಸ್‌ಗುಪ್ತಾ ಹೇಳಿದರು.

'ಆರ್‌ಸಿಬಿ ಇದೀಗ ಅದ್ಭುತವಾದ ಕ್ರಿಕೆಟ್ ಅನ್ನು ಆಡುತ್ತಿದೆ. ಅವರ ಬೌಲಿಂಗ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಅವರು ಚಿಂತಿಸಬೇಕಾದ ಏಕೈಕ ವಿಷಯವೆಂದರೆ ಫಿಲ್ ಸಾಲ್ಟ್ ಅಗ್ರಸ್ಥಾನದಲ್ಲಿ ಇಲ್ಲದಿರುವುದು. ಆದರೆ, ಅವರ ಬಳಿ ಟಿ20 ವಿಶ್ವಕಪ್‌ನಲ್ಲಿ ಮಿಂಚಿದ ಜೇಕಬ್ ಬೆಥೆಲ್ ಇದ್ದಾರೆ. ವಿರಾಟ್ ಕೊಹ್ಲಿಯೊಂದಿಗೆ ಎಡಗೈ ಬಲಗೈ ಆರಂಭಿಕ ಸಂಯೋಜನೆಯನ್ನು ರೂಪಿಸುವುದು ಅದ್ಭುತಗಳನ್ನು ಮಾಡಬಹುದು' ಎಂದು ದಾಸ್‌ಗುಪ್ತಾ ಹೇಳಿದರು.

ಹಾಲಿ ಚಾಂಪಿಯನ್ ಆರ್‌ಸಿಬಿ ಸದ್ಯ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಪಂದ್ಯಾವಳಿ ಮುಂದುವರೆದಂತೆ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com