IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು

ಇಂದು ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
IPL 2026: Donovan Ferreira, Yashasvi Jaiswal Shine As RR End PBKS' Unbeaten Run
ಯಶಸ್ವಿ ಜೈಸ್ವಾಲ್
Updated on

ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 40ನೇ ಪಂದ್ಯದಲ್ಲಿ ಮಂಗಳವಾರ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ತಾನ ರಾಯಲ್ಸ್ ತಂಡ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂದು ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬಾ ಕಿಂಗ್ಸ್ ತಂಡ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತು. ಆ ಮೂಲಕ ರಾಜಸ್ತಾನ ರಾಯಲ್ಸ್ ತಂಡಕ್ಕೆ ಗೆಲ್ಲಲು 223 ರನ್ ಗಳ ಬೃಹತ್ ಗುರಿ ನೀಡಿತು.

ಪಂಜಾಬ್ ಪರ ಆರಂಭಿಕ ಆಟಗಾರ ಪ್ರಭ್ ಸಿಮ್ರನ್ ಸಿಂಗ್ 59 ರನ್ ಕಲೆಹಾಕಿದರೆ, ಪ್ರಿಯಾಂಶ್ ಆರ್ಯ 29 ರನ್ ಗಳಿಸಿ ಔಟಾದರು.

IPL 2026: Donovan Ferreira, Yashasvi Jaiswal Shine As RR End PBKS' Unbeaten Run
IPL 2026: Marcus Stoinis ಸ್ಫೋಟಕ ಬ್ಯಾಟಿಂಗ್; RR ಗೆ ಗೆಲ್ಲಲು 223 ರನ್ ಬೃಹತ್ ಗುರಿ ನೀಡಿದ PBKS!

ಬಳಿಕ ಬಂದ ಕೂಪರ್ ಕನೋಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ತಲಾ 30 ರನ್ ಗಳಿಸಿ ಔಟಾದರು. ಈ ವೇಳೆ ಕ್ರೀಸ್ ಗೆ ಬಂದ ಮಾರ್ಕಸ್ ಸ್ಟಾಯ್ನಿಸ್ ಅಜೇಯ 62ರನ್ ಪೇರಿಸಿ ತಂಡದ ಮೊತ್ತ 220ರ ಗಟಿ ದಾಟುವಂತೆ ನೋಡಿಕೊಂಡರು.

ರಾಜಸ್ತಾನ ಪರ ಯಶ್ ರಾಜ್ ಪುಂಜಾ 2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮತ್ತು ಬರ್ಗರ್ ತಲಾ 1 ವಿಕೆಟ್ ಪಡೆದರು.

ಗೆಲುವಿಗೆ 223 ರನ್ ಗಳ ಗುರಿ ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ತಂಡ, ವೈಭವ್ ಸೂರ್ಯವಂಶಿ(43), ಯಶಸ್ವಿ ಜೈಸ್ವಾಲ್(51) ಹಾಗೂ ಡೊನೊವನ್ ಫೆರೀರಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 228 ರನ್ ಗಳಿಸುವ ಮೂಲಕ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com